ಬೆಂಗಳೂರು: ಹಣಕಾಸು ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲು ಸಿದ್ದತೆ ನಡೆಸಿದ್ದಾರೆ. ಆದರೆ ಈ ಬಾರಿಯೂ ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಗೆ ಸಾಲವನ್ನೇ ನೆಚ್ಚಿಕೊಂಡಿದೆ.
2022-23 ಸಾಲಿನಲ್ಲಿ ರಾಜ್ಯ ಸರ್ಕಾರ ಅಂದಾಜು ಸುಮಾರು 72,000 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ.
ರಾಜ್ಯ ಸರ್ಕಾರ ನ.15ರಿಂದ ಮಾರುಕಟ್ಟೆ ಸಾಲವನ್ನು ಎತ್ತುವಳಿ ಮಾಡಲು ಆರಂಭಿಸಿದೆ. ನವೆಂಬರ್ ತಿಂಗಳಲ್ಲಿ 16,000 ಕೋಟಿ ರೂ. ಸಾಲ ಎತ್ತುವಳಿ ಮಾಡಿತ್ತು. ನ.15ರಂದು ಆರ್ ಬಿಐ ಮೂಲಕ 4,000 ಕೋಟಿ ರೂ. ಸಾಲ ಮಾಡಿದೆ. ನ.22ರಂದು 8,000 ಕೋಟಿ ರೂ. ಹಾಗೂ ನ.29ರಂದು 4,000 ಕೋಟಿ ಸಾಲ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.
ಡಿಸೆಂಬರ್ ತಿಂಗಳಲ್ಲೂ ಒಟ್ಟು 16,000 ಕೋಟಿ ರೂ. ಸಾಲ ಮಾಡಿದೆ. ಅದರಂತೆ ಡಿ.6, ಡಿ.13, ಡಿ.20 ಹಾಗೂ ಡಿ.27ಕ್ಕೆ ತಲಾ 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿಕೊಂಡಿದೆ. ಆ ಮೂಲಕ ಬೊಮ್ಮಾಯಿ ಸರ್ಕಾರ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಈವರೆಗೆ 32,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.
ಇದರ ಜೊತೆಗೆ ಸಾರ್ವಜನಿಕ ಸಾಲದ ಮೂಲಕ ಡಿಸೆಂಬರ್ ಅಂತ್ಯಕ್ಕೆ ಸುಮಾರು 7,500 ಕೋಟಿ ರೂ. ಸಾಲ ಮಾಡಿರುವುದಾಗಿ ತಿಳಿಸಿದೆ. ಉಳಿದಂತೆ ಬಹುತೇಕ ಸಾಲವನ್ನು ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಎತ್ತುವಳಿ ಮಾಡಲು ನಿರ್ಧರಿಸಿದೆ. ಕೊನೆಯ ತ್ರೈಮಾಸಿಕದಲ್ಲಿ ಹೆಚ್ಚಿನ ಸಾಲವನ್ನು ಎತ್ತುವಳಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊನೆಯ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಬರೋಬ್ಬರಿ 36,000 ಕೋಟಿ ರೂ. ಸಾಲ ಮಾಡಲು ಯೋಚಿಸಿದೆ. ಜನವರಿಯಿಂದ ಮಾರ್ಚ್ವಿರೆಗಿನ ಕೊನೆಯ ತ್ರೈಮಾಸಿಕದಲ್ಲಿ 36,000 ಕೋಟಿ ರೂ. ಸಾಲ ಮಾಡುವುದಾಗಿ ಈಗಾಗಲೇ ಆರ್ ಬಿಐಗೆ ಮಾಹಿತಿ ನೀಡಿದೆ.
ಆರ್ಬಿಾಐಗೆ ರಾಜ್ಯ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಜನವರಿಯಲ್ಲಿ ಒಟ್ಟು 16,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಹಾಗೂ ಫೆಬ್ರವರಿಯಲ್ಲಿ ಒಟ್ಟು 12,000 ಕೋಟಿ ರೂ. ಮಾರ್ಚ್ ತಿಂಗಳಲ್ಲಿ ಒಟ್ಟು 8,000 ಕೋಟಿ ರೂ. ಸಾಲ ಮಾಡುವುದಾಗಿ ತಿಳಿಸಿದೆ.
ಕೊನೆ ಕ್ಷಣಕ್ಕೆ ಬೇಕಾದರೆ ಸಾಲದ ಮೊತ್ತದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ. ಆ ಮೂಲಕ 2022-23ರ ಆರ್ಥಿಕ ವರ್ಷದಲ್ಲಿ ಒಟ್ಟು ಸುಮಾರು 68,000 ಕೋಟಿ ಸಾಲವನ್ನು ಆರ್ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ಮೂಲಕ ಎತ್ತುವಳಿ ಮಾಡಲಿದೆ.
ಹೆಚ್ಚುವರಿ ಸಾಲದ ಮೊರೆ: ರಾಜ್ಯ ಸರ್ಕಾರ 2022-23 ಸಾಲಿನಲ್ಲಿ ಒಟ್ಟು 72,089 ಕೋಟಿ ರೂ. ಸಾಲ ಮಾಡುವುದಾಗಿ ಬಜೆಟ್ನ್ಲ್ಲಿ ಅಂದಾಜಿಸಿತ್ತು. ಆದರೆ, ಈ ಬಾರಿ ಜಿಎಸ್ಟಿರ ಪರಿಹಾರ ಮೊತ್ತ ಸ್ಥಗಿತವಾದ ಕಾರಣ, ಜೊತೆಗೆ ಬದ್ಧ ವೆಚ್ಚ ಗಣನೀಯ ಏರಿಕೆಯಾಗಿರುವುದರಿಂದ ರಾಜ್ಯ ಸರ್ಕಾರ ಹೆಚ್ಚುವರಿ ಸಾಲದ ಮೊರೆ ಹೋಗಲಿದೆ ಎಂದು ಪ್ರತಿಪಕ್ಷ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸಾರ್ವಜನಿಕ ಸಾಲ ಸೇರಿ ಒಟ್ಟು ಸಾಲ ಸುಮಾರು 80,000 ಕೋಟಿ ರೂ. ಮೀರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಗುರಿ ಮೀರಿ ಈ ಬಾರಿ ಎಲ್ಲಾ ತೆರಿಗೆ ಮೂಲಗಳಿಂದ ಆದಾಯ ಸಂಗ್ರಹವಾಗುತ್ತಿರುವ ಕಾರಣ ಹೆಚ್ಚುವರಿ ಸಾಲದ ಮೊರೆ ಹೋಗುವ ಸಾಧ್ಯತೆ ಕಡಿಮೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಯುವತಿಯ ಸ್ಕೂಟಿಯೊಂದಿಗೆ ಪರಾರಿಯಾದ ಫೇಸ್ಬುಕ್ ಗೆಳೆಯ