ರಾಜ್ಯ

ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಬಿಎಸ್‌ವೈ ಮತ್ತು ಅನಂತಕುಮಾರ್‌: ಬಿವೈ ವಿಜಯೇಂದ್ರ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಿರಿಯ ಮತ್ಸದಿ ಅನಂತ ಕುಮಾರ್‌ ಅವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೆನೆದಿದ್ದಾರೆ.

ಭಾನುವಾರ ನಗರದ ಲಾಲ್‌ಬಾಗ್‌ನಿಂದ ಅದಮ್ಯ ಚೇನತನದವರೆಗೆ ಆಯೋಜಿಸಲಾಗಿದ್ದ 4ನೇ ಅನಂತ ಸ್ಮಂತಿ ನಡಿಗೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು.

ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಪಕ್ಷದ ಸಂಘಟನೆ ಬಗ್ಗೆ ಸದಾ ಕಾಲ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳ್ಳಲು ಈ ಇಬ್ಬರೂ ನಾಯಕರ ಪರಿಶ್ರಮ ಅನನ್ಯ. ಅಷ್ಟೇ ಮಾತ್ರವಲ್ಲದೆ, ಇವರ ನಡುವೆ ಅವಿನಾಭಾವ ಸಂಬಂಧವಿತ್ತು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಸಿ.ರಾಮಮೂರ್ತಿ, ರವಿ ಸುಬ್ರಮಣ್ಯ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷ ಪಿ.ವಿ.ಕೃಷ್ಣ ಭಟ್ ಸೇರಿದಂತೆ ಪ್ರಮುಖರು ಹಾಜರಿದ್ದರು.

andolanait

Recent Posts

ಕಕ್ಕೆಹೊಳೆ, ಗಾಂಧಿ ವೃತ್ತದಲ್ಲಿ ಕ್ಯಾಮೆರಾ ಕಾರ್ಯಾರಂಭ

ಸಂಚಾರ ನಿಯಮ ಉಲ್ಲಂಸಿದವರ ವಿರುದ್ಧ ೮೧ ಪ್ರಕರಣ ದಾಖಲು! ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ಹೊಸ ವರ್ಷಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ…

3 mins ago

ರಸ್ತೆಗಳು ಗುಂಡಿಮಯ; ಸಂಚಾರ ಅಯೋಮಯ

ಪ್ರಶಾಂತ್ ಎಸ್. ಮೈಸೂರು: ನಗರದ ಸುಗಮ ಸಂಚಾರಕ್ಕಾಗಿ ನಿರ್ಮಿಸಿದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತುಂಬಾ ತೊಡಕಾಗಿದೆ. ಗಂಗೋತ್ರಿ…

7 mins ago

‘ಶಾಲೆಗೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಡಿ’

ಕುರುಬನದೊಡ್ಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಸಿಎಂ, ಶಾಸಕರಿಗೆ ಪತ್ರ ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಡೆ ಕುರುಬನದೊಡ್ಡಿ…

13 mins ago

ಶಾಲೆ ತೊರೆದ ಬಾಲಕಿಯರಿಗೆ ವೇಶ್ಯಾವಾಟಿಕೆ ಬಲೆ

ಎಚ್.ಎಸ್.ದಿನೇಶ್‌ಕುಮಾರ್ ಕಣ್ಮುಚ್ಚಿ ಕುಳಿತಿರುವ ಇಲಾಖೆಗಳು; ಕೆಲ ದಿನಗಳ ಹಿಂದೆ ೧೫ರ ಬಾಲೆ ರಕ್ಷಿಸಿದ ಒಡನಾಡಿ ಮೈಸೂರು: ಬಡತನ, ಕೀಳರಿಮೆ ಇನ್ನಿತರ…

18 mins ago

ರೈತರ ಹಿತರಕ್ಷಣೆಗೆ ಕೇಂದ್ರದ ಕದ ತಟ್ಟಿದ ಚಲುವರಾಯಸ್ವಾಮಿ : ತುರ್ತು ಪರಿಹಾರಕ್ಕೆ ಮನವಿ

ಬೆಂಗಳೂರು :  ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬುಧವಾರ (ಜನವರಿ 7)  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ…

9 hours ago