ಬೆಂಗಳೂರು : ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವದ ಕಥಾ ಸ್ಪರ್ಧೆ 2022 ರಲ್ಲಿ ಪೂರ್ಣಿಮಾ ಮಾಳಗಿಮನಿ ಅವರು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಭಾನುವಾರದಂದು ನಡೆದ ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2022 ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೊಂಕಣಿ ಕಥೆಗಾರರಾದ ದಾಮೋದರ ಮಾವಜೋ ಅವರು ಕಥಾ ಸ್ಪರ್ಧೆಯ ವಿಜೇತೆ ಪೂರ್ಣಿಮಾ ಮಾಳಗಿಮನಿ ಅವರನ್ನು ಅಭಿನಂದಿಸಿದ್ದಾರೆ. ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವದ ಕಥಾ ಸ್ಪರ್ಧೆ 2022 ರಲ್ಲಿಯಲ್ಲಿ ದ್ವಿತೀಯ ಬಹುಮಾನವನ್ನು ಪತ್ರಕರ್ತ ಸಂದೀಪ ನಾಯಕ ಅವರು ಪಡೆದುಕೊಂಡಿದ್ದಾರೆ.

ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದ ದಾಮೋದರ ಮಾವಜೋ ಅವರು ಕಥನದಲ್ಲಿ ಕೌಶಲ್ಯವೆಂಬುದು ನಿರಂತರವಾದ ಅಭ್ಯಾಸದಿಂದ ಬರುವಂಥದ್ದು, ಕಥೆಗಳು ನನ್ನ ಬಳಿಗೆ ಬರಬೇಕು. ಕಥಾ ಪ್ರಕಾರವನ್ನೇ ನಾನು ನನ್ನ ಅಭಿವ್ಯಕ್ತಿಯ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡೆ ಎಂಬುದನ್ನು ವಿವರಿಸುವುದು ಕಷ್ಟ ಎಂದರು.
ಈ ಸಂದರ್ಭದಲ್ಲಿ 3 ಪ್ರಶಸ್ತಿಗಳನ್ನು ಘೋಷಣೆ ಮಾಡಿದ ಅವರು “ವಿನ್ನರ್ ವಿನ್ನರ್ ಚಿಕನ್ ಡಿನ್ನರ್ “ ಕಥೆಗಾಗಿ ಪ್ರಥಮ ಬಹುಮಾನವನ್ನು ಪಡೆದ ಪೂರ್ಣಿಮಾ ಮಾಳಗಿಮನಿ ಅವರಿಗೆ 51 ಸಾವಿರ ನಗದು ಹಾಗೂ ಪುಸ್ತಕ,ಪದಕವನ್ನು ನೀಡಿ ಗೌರವಿಸಿದರು.

ದ್ವಿತೀಯ ಬಹುಮಾನವನ್ನು ಪಡೆದ ಬಸವಣೆಪ್ಪ ಕಂಬಾರ ಅವರು ಬರೆದ “ನೆರಳ ನರ್ತನ” ಕಥೆಗಾಗಿ 25 ಸಾವಿರ ನಗದು ಹಾಗೂ ಪುಸ್ತಕ,ಪದಕವನ್ನು ಅವರು ಅನಾರೋಗ್ಯದಿಂದ ಗೈರಾಗಿದ್ದ ಕಾರಣ ಅವರ ಪರವಾಗಿ ಹಿರಿಯ ಕವಿ ಹೆಚ್.ಎಸ್.ವೆಂಕಟಮೂರ್ತಿ ಅವರು ಪಡೆದರು.
“ಚಂದ್ರಶಾಲೆಯಲ್ಲಿ ನಿಂತ ತೇರು “ ಕಥೆಯು 3ನೇ ಬಹುಮಾನವನ್ನು ಪಡೆದುಕೊಂಡಿದ್ದು ಇದನ್ನು ಕಥೆಗಾರ ಸಂದೀಪ ನಾಯಕ ಅವರು 15 ಸಾವಿರ ನಗದು ಹಾಗೂ ಪುಸ್ತಕ,ಪದಕವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಅಂತಿಮ ಸುತ್ತಿನ ಬಹುಮಾನ ಘೋಷಣೆಗೂ ಮುನ್ನ ಬುಕ್ ಬ್ರಹ್ಮಾ ದ ಸಹ ಸಂಸ್ಥಾಪಕರಾದ ಸತೀಶ್ ಚಪ್ಪರಿಕೆ ಅವರು ಇಬ್ಬರು ಕಥೆಗಾರರ ಜೊತೆ ಸಂವಾದ ನಡೆಸಿದರು.

ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವದ ಕಥಾ ಸ್ಪರ್ಧೆ 2022 ರ ಸ್ಪರ್ಧೆಯ ಮೂರು ಸಮಾಧಾನಕರ ಬಹುಮಾನಗಳನ್ನು ನಿರ್ದೇಶಕರು ಹಾಗೂ ರಾಷ್ಟ್ರಪ್ರಶಸ್ತಿ ಪಡೆದಿರುವ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರು ಘೋಷಿಸಿದರು. ಸಮಾಧಾನಕರ ಬಹುಮಾನ ಪಡೆದುಕೊಂದ ಕಥೆಗಳಾದ ಅನುಪಮಾ ಪ್ರಸಾದ್ ಅವರ ಕುಂತ್ಯಮ್ಮಳ ಮಾರಾಪು; “ಮೌನೇಶ ಬಡಿಗೇರ ಅವರ ಒಂಟಿ ಓಲೆಯ ಮುತ್ತು“, ನಂದಿನಿ ಹೆದ್ದುರ್ಗ ಅವರ “ಬಾಗಿದ ರೆಪ್ಪೆಯ ಅಡಗು ತಾಣದಲ್ಲಿ” ಕಥೆಗಳು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡವು ಇವುಗಳಿಗೆ 5000 ರೂಗಳ ನಗದು ಬಹುಮಾನ ಹಾಗೂ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಪಡೆದುಕೊಂಡರು.
ಉಳಿದ ಕಥೆಗಾರರಿಗೆ 1000 ರೂ ನಗದು ಬಹುಮಾನವನ್ನು ವಿತರಿಸಲಾಯಿತು.

ಕಥಾ ಸ್ಪರ್ಧೆಗೆ ಒಟ್ಟು 518 ಕಥೆಗಳು ಬಂದಿದ್ದು, ಅಂಇತಮ ಸುತ್ತಿಗೆ 50 ಕಥೆಗಳು ಆಯ್ಕೆಗೊಂಡು ಮೊದಲ, ದ್ವಿತೀಯ ಹಾಗೂ ತೃತೀಯ ಮತ್ತು ಸಮಾಧಾನಕರ ಉಳಿದಂತೆ ಬಹುಮಾನಗಳನ್ನು ಪಡೆದುಕೊಂಡಿವೆ.
ಕಾರ್ಯಕ್ರಮದಲ್ಲಿ ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಭಾಗವಹಿಸಿದ್ದರು. ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರ ನೃತ್ಯದ ಮೂಲಕ ಆರಂಭವಾಯಿತು. ಬುಕ್ ಬ್ರಹ್ಮ ದ ಪ್ರದಾನ ಸಂಪಾದಕರಾದ ದೇವು ಪತ್ತಾರ್ ಅವರು ಸ್ವಾಗತಿಸಿದರು, ಬುಕ್ ಬ್ರಹ್ಮದ ಸಿಇಒ ಉಷಾ ಪ್ರಸಾದ್ ಅವರು ವಂದಿಸಿದರು, ವತ್ಸಲಾ ಮೋಹನ್, ಸ್ವಸ್ತಿಕಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.