ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಅಧಿಕಾರಿಗಳು ಹಾಗೂ ರೈತರ ಆತ್ಮಹತ್ಯೆ, ಬಾಣಂತಿಯರ ಸರಣಿ ಸಾವು, ಪೋಲಿಸರ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳ ಬಳಕೆ ಸೇರಿದಂತೆ ಈ ಎಲ್ಲಾ ಘಟನೆಗಳಿಗೆ ಕಾಂಗ್ರೆಸ್‌ನ ನಾಯಕರೇ ಮುಖ್ಯ ಕಾರಣ ಎಂದು ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಯೂ, ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡಲು ರೈತರು, ಅಧಿಕಾರಿಗಳ ಹತ್ಯೆಗೆ – ಸಿಎಂ ಸಿದ್ದರಾಮಯ್ಯ, ಧಮ್ಕಿಗೆ – ಡಿಸಿಎಂ ಡಿ.ಕೆ. ಶಿವಕುಮಾರ್, ಕೊಲೆಗೆ – ವಿನಯ್ ಕುಲಕರ್ಣಿ, ಆತ್ಮಹತ್ಯೆ ಸುಪಾರಿಗೆ – ಪ್ರಿಯಾಂಕ್ ಖರ್ಗೆ, ಶಾಸಕರ ಕೊಲೆಗೆ – ಲಕ್ಷ್ಮೀ ಹೆಬ್ಬಾಳ್ಕರ್, ಆಸ್ಪತ್ರೆಗಳಲ್ಲಿನ ಕೊಲೆಗೆ – ದಿನೇಶ್ ಗುಂಡೂರಾವ್, ದಲಿತರ ಮೇಲಿನ ಹಲ್ಲೆಗೆ – ಹಿರಿಯೂರು ಡಿ. ಸುಧಾಕರ್, ಪೊಲೀಸರ ಮೇಲೆ ಹಲ್ಲೆಗೆ – ವಿಜಯಾನಂದ ಕಾಶಪ್ಪನವರ್ ಹಾಗೂ ಅವಾಚ್ಯ ಶಬ್ಧ ಬಳಸಿ ಬೈಯಲು – ಅರಸೀಕೆರೆ ಶಿವಲಿಂಗೇಗೌಡ ಅವರನ್ನು ಅವಶ್ಯಕತೆ ಇರುವವರು ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸಂಪರ್ಕಿಸಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯೂ ವಾಗ್ದಾಳಿ ನಡೆಸಿದೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್ ಬಗ್ಗೆ ನಟ ಕಿಚ್ಚ ಸುದೀಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯುದ್ಧಕ್ಕೆ ಸಿದ್ಧ ಮಾತಿಗೆ…
ಮೈಸೂರಿನ ಸುಭಾಷ್ ನಗರದ ೪ನೇ ಮುಖ್ಯರಸ್ತೆಯಲ್ಲಿರುವ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದು, ಗಾಳಿ ಅಥವಾ ಮಳೆಯ ಸಮಯದಲ್ಲಿ ಶಾರ್ಟ್…
ರಾಜ್ಯದಲ್ಲಿ ೩೧೫ ಕುಸ್ತಿಪಟುಗಳಿಗೆ ಉಚಿತವಾಗಿ ನುರಿತ ಕುಸ್ತಿ ತರಬೇತುದಾರರಿಂದ ವೈಜ್ಞಾನಿಕ ಕ್ರೀಡಾ ತರಬೇತಿ ನೀಡಲಾಗುತ್ತಿದೆ ಹಾಗೂ ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿಗಾಗಿ…
ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಕೆಲವು…
ಮೈಸೂರಿನ ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿರುವ ಮಾರ್ವೆಲ್ ಶಾಲಾ- ಕಾಲೇಜು ಮುಂಭಾಗದಿಂದ ಸ್ವಲ್ಪ ದೂರ ಸಾಗಿದರೆ ವರುಣ ನಾಲೆ ಕಾಲುವೆ ಸಿಗುತ್ತದೆ.…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ…