ಬೆಂಗಳೂರು– : ಆಪರೇಷನ್ ಕಮಲ ಮಾಡಿಸಿದವರು, ಆಪರೇಷನ್ ಮಾಡಿದವರು ಇಬ್ಬರನ್ನೂ ಬಿಜೆಪಿ ಕೆಡವಿ ಹಾಕಿದೆ. ಆಪರೇಷನ್ ಆದವರನ್ನೂ ಕೆಡವಲಿದೆ. ಬಿಜೆಪಿ ಎಂದರೆ ಭಸ್ಮಾಸುರ ಇದ್ದಂತೆ ಯಾರ ತಲೆ ಮೇಲೆ ಕೈ ಬಿದ್ದರೂ ಅವರು ಭಸ್ಮವಾಗುತ್ತಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿಯವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಗೋಳಾಡುತ್ತಿದ್ದಾರೆ. ಅವರ ಅಸಮಧಾನ ಯಾರ ವಿರುದ್ಧ ? ಗೆಳೆಯನನ್ನು ಬಿಟ್ಟಿರುವ ಸಚಿವ ಶ್ರೀರಾಮುಲು ವಿರುದ್ಧವೇ ? ಋಣ ಮರೆತಿರುವ ಬಿಜೆಪಿ ವಿರುದ್ಧವೇ? ಆಪರೇಷನ್ ಕಮಲ ಎಂಬ ಕೊಳಕು ರಾಜಕೀಯಕ್ಕೆ ನಾಂದಿ ಹಾಡಿದವರನ್ನು ತುಳಿದು ಹಾಕಿದ
ಬಿ.ಎಸ್.ಯಡಿಯೂರಪ್ಪ ವಿರುದ್ಧವೇ ? ಎಂದು ಪ್ರಶ್ನಿಸಲಾಗಿದೆ.
ರೆಡ್ಡಿ ಬಳಸಿ ಸಿಎಂ ಆದವರೇ ಈಗ ಆತಂತ್ರರಾಗಿದ್ದಾರೆ, ರೆಡ್ಡಿಯವರಿಗೆ ನೆರವು ನೀಡಲು ಸಾಧ್ಯವೇ @BasanagoudaBJP ಅವರೇ?
ಆಪರೇಷನ್ ಮಾಡಿಸಿದವರು, ಆಪರೇಷನ್ ಮಾಡಿದವರು ಇಬ್ಬರನ್ನೂ ಬಿಜೆಪಿ ಕೆಡವಿ ಹಾಕಿದೆ.
ಆಪರೇಷನ್ ಆದವರನ್ನೂ ಕೆಡವಲಿದೆ.ಬಿಜೆಪಿ ಎಂದರೆ ಬಸ್ಮಾಸುರ ಇದ್ದಂತೆ ಯಾರ ತಲೆ ಮೇಲೆ ಕೈ ಬಿದ್ದರೂ ಅವರು ಭಸ್ಮವಾಗುತ್ತಾರೆ!#BJPvsBJP pic.twitter.com/oQutykh26J
— Karnataka Congress (@INCKarnataka) November 2, 2022
ರೆಡ್ಡಿ ಬಳಸಿ ಸಿಎಂ ಆದವರೇ ಈಗ ಆತಂತ್ರರಾಗಿದ್ದಾರೆ, ರೆಡ್ಡಿಯವರಿಗೆ ನೆರವು ನೀಡಲು ಸಾಧ್ಯವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಎಂದು ವ್ಯಂಗ್ಯವಾಡಿದೆ.
ಸಚಿವ ಶ್ರೀರಾಮುಲು ಅಹೋರಾತ್ರಿ ಧರಣಿ ನಡೆಸಿದ್ದಾರೆ, ಈ ಹೋರಾಟ ಯಾರ ವಿರುದ್ಧ ? ಅವರದೇ ಸರ್ಕಾರದ ವಿರುದ್ಧವೇ? ಮುಖ್ಯಮಂತ್ರಿ ವಿರುದ್ಧವೇ? ಅಥವಾ ಪ್ರಧಾನಿ ವಿರುದ್ಧವೇ? ಕ್ಯಾಬಿನೆಟ್ ಸಚಿವರು ತಮ್ಮದೇ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ಥಿತಿ ಒದಗಿದ್ದೇಕೆ? ಸಚಿವರ ಮಾತನ್ನು ಯಾರೂ ಕೇಳ್ತಿಲ್ಲವೇ? ಅಥವಾ ಇದು ಕೂಡ ತಳ್ಳುವ ಸರ್ಕಾರದ ನಾಟಕವೇ ಎಂದು ಪ್ರಶ್ನಿಸಲಾಗಿದೆ.
ಬಿಜೆಪಿಯವರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಗೋಳಾಡುತ್ತಿರುವುದು ಯಾರ ವಿರುದ್ಧ?
ಗೆಳೆಯನನ್ನು ಬಿಟ್ಟಿರುವ @sriramulubjp ವಿರುದ್ಧವೇ?
ಋಣ ಮರೆತಿರುವ @BSYBJP ವಿರುದ್ಧವೇ?
ಆಪರೇಷನ್ ಕಮಲ ಎಂಬ ಕೊಳಕು ರಾಜಕೀಯಕ್ಕೆ ನಾಂದಿ ಹಾಡಿದವರನ್ನು ತುಳಿದು ಹಾಕಿದ @BJP4Karnataka ವಿರುದ್ಧವೇ?#BJPvsBJP— Karnataka Congress (@INCKarnataka) November 2, 2022
ಬೆಂಗಳೂರನ್ನು ವಿಶ್ವ ದರ್ಜೆಯ ನಗರವನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ಚುನಾವಣೆ ಕಾಲದಲ್ಲಿ ಭರವಸೆ ನೀಡಿತ್ತು. ಈಗ ಉದ್ಯಮಗಳು ಇತರ ನಗರಗಳಿಗೆ ವಲಸೆ ಹೋಗುತ್ತಿವೆ ? ರಸ್ತೆ ಗುಂಡಿಗಳಿಗೆ ಜನ ಜೀವ ಬಿಡುತ್ತಿದಾರೆ ? ಮಳೆಯಿಂದಾಗಿ ಬ್ರಾಂಡ್ ಬೆಂಗಳೂರು ಕಳೆದುಹೋಗಿದೆ ? ಉದ್ಯಮಿಗಳು ಟೀಕಿಸುತ್ತಿದ್ದಾರೆ ಖ್ಯಾತಿ ಹಾಳು ಮಾಡಿ ಕುಖ್ಯಾತಿ ತಂದಿದ್ದೇಕೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಗುಜರಾತ್ನ ಮೊರ್ಬಿಯಾ ದುರಂತದಲ್ಲಿ ಗಾಯಗೊಂಡವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡುವ ವೇಳೆಗೆ ಸಿನೆಮಾದವರೂ ನಾಚುವಂತೆ ಗುಜರಾತ್ ಮಾಡೆಲ್ ಸೆಟ್ ಹಾಕಲಾಗಿದೆ. ಆ ಸೆಟ್ ಥೇಟ್ ಕರ್ನಾಟಕದಲ್ಲಿ ಮೋದಿಜಿಗಾಗಿ ರಸ್ತೆಗೆ ಪೈಂಟ್ ಹೊಡೆದಂತೆಯೇ ಇದೆ. ವಿಕಾಸ್, ಅಚ್ಛೆ ದಿನ್, ವಿಶ್ವಗುರು, ಆತ್ಮನಿರ್ಭರ್ ಎಲ್ಲವಕ್ಕೂ ಗುಜರಾತಿನ ಮೊರ್ಬಿಯಲ್ಲಿ ಸಾಕ್ಷ್ಯ ಸಿಕ್ಕಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.