ರಾಜವಂಶಸ್ಥೆಗೆ ಜನ್ಮದಿನದ ಶುಭಕೋರಿದ ಎಸ್.ಟಿ.ಸೋಮಶೇಖರ್

ಮೈಸೂರು: ಮೈಸೂರು ಸಂಸ್ಥಾನಕ್ಕೆ ಅದರದ್ದೇ ಆದ ವಿಶೇಷ, ಗೌರವ, ಸ್ಥಾನಮಾನಗಳು ಇವೆ. ಇಂಥ ಒಂದು ರಾಜಪರಂಪರೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು, ಸಾರ್ವಜನಿಕವಾಗಿಯೂ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ರಾಜವಂಶಸ್ಥೆ ಶ್ರೀಮತಿ ಡಾ. ಪ್ರಮೋದಾದೇವಿ ಒಡೆಯರ್ ಅವರಿಗೆ ಜನ್ಮದಿನದ ಶುಭಾಶಯಗಳು.

ರಾಜ್ಯ ಹಾಗೂ ಮೈಸೂರು ವಿಷಯಕ್ಕೆ ಬಂದಾಗ ಮೈಸೂರು ಒಡೆಯರು ಸದಾ ಸರ್ಕಾರದ ಬೆನ್ನುಲುಬಾಗಿ ನಿಲ್ಲುತ್ತಾರೆ. ಈಗಲೂ ಸಹ ಆ ಪರಂಪರೆಯನ್ನು ತಾವುಗಳು ಮುಂದುವರಿಸಿಕೊಂಡು ಬರುತ್ತಿರುವಿರಿ. ಕಾಲ ಕಾಲಕ್ಕೆ ಸರ್ಕಾರಕ್ಕೆ ಸಲಹೆ, ಸಹಕಾರ ಹಾಗೂ ಮಾರ್ಗದರ್ಶವನ್ನೂ ನೀಡುತ್ತಿರುವಿರಿ. ಇನ್ನು ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ನೀವು ತೋರುವ ಕಾಳಜಿ ಸಹ ಅವಿಸ್ಮರಣೀಯ.

ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ತಾವು ಪ್ರತಿ ವರ್ಷ ಸಹಕಾರವನ್ನು ನೀಡುತ್ತಿದ್ದೀರಿ. ಈ ವರ್ಷವೂ ಸಹ ತಮ್ಮ ಸಹಕಾರವನ್ನು ನಾನು ಹಾಗೂ ನಮ್ಮ ಸರ್ಕಾರ ಮರೆಯದು. ನಿಮಗೆ ನನ್ನ ವೈಯಕ್ತಿಕ ಧನ್ಯವಾದಗಳನ್ನು ಸಲ್ಲಿಸಬಯಸುತ್ತೇನೆ.

ನಾಡಿನ ಅಧಿದೇವತೆ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯು ತಮಗೆ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ. ತಮ್ಮಿಂದ ಮತ್ತಷ್ಟು ಉತ್ತಮ ಸಮಾಜಮುಖಿ ಕಾರ್ಯಗಳಾಗಲಿ ಎಂದು ಆಶಿಸುವೆ ಎಂದು ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರಮೋದಾದೇವಿ ಅವರಿಗೆ ಶುಭಾಷಯವನ್ನು ಕೋರಿದ್ದಾರೆ.

× Chat with us