ಬೆಂಗಳೂರು : ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗೃಹ ಜ್ಯೋತಿ ಯೋಜನೆಯಿಂದ ಎಸ್ಕಾಂಗಳು ನಷ್ಟಕ್ಕೆ ಒಳಗಾಗುತ್ತವೆ ಎಂಬ ಮಾತುಗಳು ಕೇಳುಬರುತ್ತಿದ್ದವು. ಆದರೆ ಇದರ ಮಧ್ಯೆ ಬೆಸ್ಕಾಂ ೨೦೨೩ ಮತ್ತು೨೦೨೪ ರ ಹಣಕಾಸು ವರ್ಷದಲ್ಲಿ ೭ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಲಾಭ ಕಂಡಿರುವುದು ಗೊತ್ತಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ ನಗರಕ್ಕೆ ಮಾತ್ರವಲ್ಲದೆ ದಕ್ಷಿಣದ ಸುಮಾರು ೮ ಜಿಲ್ಲೆಗಳಿಗೂ ಕೂಡ ವಿದ್ಯುತ್ ಪೂರೈಕೆ ಮಾಡುತ್ತಿದೆ. ಕಳೆದ ೧೦ ವರ್ಷದ ಆದಾಯ ಅಂಕಿ ಅಂಶ ಬಿಡುಗಡೆಯಾಗಿದ್ದು, ಆದಾಯ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ.
೨೦೧೩-೧೪ ಹಣಕಾಸು ವರ್ಷದಲ್ಲಿ ೧೧ ಸಾವಿರ ಕೋಟಿ ರೂಪಾಯಿಗಳ ಆದಾಯ ಸಂಗ್ರಹ ಮಾಡಿದ್ದ ಬೆಸ್ಕಾಂ ಬಳಿಕ ಪ್ರತಿ ವರ್ಷವೂ ಕೂಡ ಲಾಭದ ಹಳಿಯಲ್ಲಿಯೇ ಇದೆ. ತದನಂತರ ಪ್ರಮುಖವಾಗಿ ಕಳೆದ ೫ ವರ್ಷಗಳನ್ನ ಗಮನಿಸಿದರೆ ೨೦೨೦ -೨೧ ರಲ್ಲಿ ೧೯,೨೩೩ ಕೋಟಿ, ೨೦೨೧-೨೨ ರಲ್ಲಿ ೨೦,೭೧೨ ಕೋಟಿ, ಹಾಗೂ ೨೨-೨೩ ರಲ್ಲಿ ೨೪,೭೦೦ ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಕಳೆದ ಹಣಕಾಸು ವರ್ಷ ಅಂದರೆ ೨೦೨೩-೨೪ ರಲ್ಲಿ ಬರೋಬ್ಬರಿ ೩೧,೩೭೮ ಕೋಟಿ ರೂಪಾಯಿಗಳ ಭರ್ಜರಿ ಆದಾಯ ಕಂಡಿದ್ದು, ಸಂತಸವನ್ನು ಬೆಸ್ಕಾಂ ವ್ಯಕ್ತಪಡಿಸಿದೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…