ರಾಜ್ಯ

ಬೆಂಗಳೂರು ಮೆಟ್ರೋಗೆ ಬಸವೇಶ್ವರರ ಹೆಸರಿಡಬೇಕು: ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು : ಬೆಂಗಳೂರು ಮೆಟ್ರೋಗೆ ನಿಶ್ವಿತವಾಗಿ ಬಸವೇಶ್ವರರ ಹೆಸರಿಡಬೇಕು. ಇದು ಜನರ ಒತ್ತಾಯ, ನನ್ನ ಒತ್ತಾಯವೂ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಿದರು. ಅವರ ಹೆಸರನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದೇವೆ. ಬಸವೇಶ್ವರರು ಇನ್ನೋರ್ವ ಮಹಾತ್ಮರು, 12 ನೇ ಶತಮಾನದಲ್ಲಿ ಸಮಾನತೆ ತಂದವರು. ಅನುಭವ ಮಂಟಪದ ಪರಿಕಲ್ಪನೆ ತಂದವರು. ಜಗತ್ತಿಗೆ ಪ್ರಥಮ ಸಂಸತ್ ಕೊಟ್ಟವರು. ಅವರ ಹೆಸರನ್ನು ಮೆಟ್ರೋಗೆ ಇಡುವುದು ಸೂಕ್ತ. ಜನರ ಈ ಬೇಡಿಕೆ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡ್ತೇವೆ ಎಂದರು.

ವಿಜಯಪುರ ಜಿಲ್ಲೆಗೆ ಬಸವೇಶ್ವರರ ಹೆಸರು ನಾಮಕರಣಕ್ಕೆ ಸಚಿವ ಶಿವಾನಂದ ಪಾಟೀಲ್ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕೆಲವು ಸಂಘಟನೆಗಳ ಒತ್ತಾಯವಿದೆ. ಬಸವೇಶ್ವರನಗರ ಹೆಸರಿಡುವಂತೆ ಸಾಕಷ್ಟು ಮನವಿಗಳನ್ನು ರಾಜ್ಯಸರ್ಕಾರಕ್ಕೆ ನೀಡಲಾಗಿದೆ. ಬಸವೇಶ್ವರ ಹೆಸರು ಇಡಲು ಯಾರ ತಕರಾರಿಲ್ಲ, ಹೆಸರು ಬದಲಾವಣೆ ಮಾಡಿದ್ರೆ ಅನುಕೂಲ ಹಾಗೂ ಅನಾನುಕೂಲ ಎರಡು ಆಗುತ್ತದೆ. ಸಾಧಕಭಾದಕಗಳ ಬಗ್ಗೆ ಚರ್ಚೆ ಮಾಡ್ತೇವೆ. ಮರುನಾಮಕರಣದ ಬಗ್ಗೆ ವಿರೋಧ ಇಲ್ಲ. ತಾಂತ್ರಿಕ ಸಮಸ್ಯೆ ಇದೆ. ಅದರ ಬಗ್ಗೆ ಚಿಂತೆ ಮಾಡುತ್ತಿದ್ದೇವೆ ಎಂದರು.

ಗೃಹ ಸಚಿವರ ಪರಮೇಶ್ವರ್ ನಿವಾಸದಲ್ಲಿ ಬೋಜನಕೂಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರು ಮುಖ್ಯಮಂತ್ರಿ ಅವರನ್ನು ಊಟಕ್ಕೆ ಕರೆದಿದ್ದರು. ಮೊನ್ನೆ ಸಿಎಂ ಹೋಗಿದ್ದಾರೆ. ಎಷ್ಟೋ ಬಾರಿ ನಾನು ಕೂಡ ಕರೆದಿದ್ದೇನೆ. ನಾನು ಕರೆದಾಗಲೂ ಬಂದಿದ್ದರು. ಅದರಲ್ಲಿ ಏನು ತಪ್ಪಿದೆ. ಊಟಕ್ಕೆ ಹೋಗೋದು ತಪ್ಪಾ? ಎಂದು ಪ್ರಶ್ನಿಸಿದ ಎಂ.ಬಿ.ಪಾಟೀಲ್, ಊಟದ ವೇಳೆ ಪಕ್ಷ ಸಂಘಟನೆ ಬಗ್ಗೆಯೂ ಚರ್ಚೆ ಆಗಿರಬಹುದು . ಊಟಕ್ಕೆ ಕೂತಾಗ ರಾಜಕೀಯ ಚರ್ಚೆ ಆಗಿರುತ್ತೆ ಎಂದರು.

ಅಧಿಕಾರಿ ಹಂಚಿಕೆ ವಿಚಾರ. ಅದು ನಮ್ಮ ಯಾರ ಕೈಯಲ್ಲಿ ಇಲ್ಲ, ನನ್ನ ಒಳಗೊಂಡು ಶಾಸಕರಾಗಿರಬಹುದು ಸಚಿವರಾಗಿರಬಹುದು. ಏನು ಬದಲಾವಣೆ ಆಗಬೇಕು ಎಂಬುದನ್ನು ಹೈಕಮಾಂಡ್ ಮಾಡುತ್ತೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್‍ಗಾಂಧಿ ಮಾಡುತ್ತಾರೆ. ಕಾಲ ಕಾಲಕ್ಕೆ ಆಗಬೇಕಿರುವುದನ್ನು ನಿರ್ಧರಿಸಲಾಗುತ್ತದೆ. ಯಾರೇ ಹೇಳಿಕೆ ಕೊಟ್ಟರೂ ಅದು ವೈಯುಕ್ತಿಕ ಎಂದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶಾಸಕರ ಜೊತೆ ದುಬೈ ಪ್ರವಾಸ ಮಾಡುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಪ್ರವಾಸಕ್ಕೆ ನನನ್ನೂ ಕರೆದಿದ್ದರು. ಬಿಡುವು ಇದ್ದರೆ ನಾನು ಹೋಗುತ್ತಿದ್ದೆ. ವಿದೇಶಿ ಪ್ರವಾಸಕ್ಕೆ ಹೋದರೆ ತಪ್ಪೇನಿದೆ ಎಂದರು.

ಎಲ್ಲರೂ ಶಾಸಕರಾದ ಮೇಲೆಯೇ ಸಚಿವರಾಗೋದು. ಒಮ್ಮೆಗೆ ಸಚಿವರಾಗುವುದಿಲ್ಲ. ನಮ್ಮ ಶಾಸಕರ ಜೊತೆ ಮೈಸೂರು ಪ್ರವಾಸವೂ ಇತ್ತು. ನಮಗೆ ಆ ದಿನ ಸಚಿವ ಸಂಪುಟ ಉಪಸಮಿತಿ ಸಭೆ ಇತ್ತು. ಹಾಗಾಗಿ ಪ್ರವಾಸಕ್ಕೆ ಹೋಗೋಕೆ ಆಗಲಿಲ್ಲ ಎಂದರು.

ಎರಡು ಉಪಮುಖ್ಯಮಂತ್ರಿ ಸೃಷ್ಟಿಸುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿರುವುದಕ್ಕೆ ತಿರುಗೇಟು ನೀಡಿದ ಎಂ.ಬಿ.ಪಾಟೀಲ್, ಮೊದಲು ಅವರು ತಮ್ಮ ಪಕ್ಷದ ಬಗ್ಗೆ ಮಾತನಾಡಲಿ. ವಿರೋಧ ಪಕ್ಷದ ನಾಯಕರಿಲ್ಲ. ಬಿಜೆಪಿ ಮುಳಗಿ ಹೋಗಿದೆ. ಅವರ ಪಕ್ಷ ಮುಳುಗುತ್ತಿರುವ ಹಡಗಲ್ಲ ಮುಳುಗಿರುವ ಹಡಗು. ಅಧ್ಯಕ್ಷರಿಲ್ಲ, ವಿರೋಧ ನಾಯಕರಿಲ್ಲ ಮೊದಲು ಅದನ್ನ ನೋಡಿ. ಎಲ್ಲಾ ಶಾಸಕರು ಬಿಜೆಪಿ ಬಿಟ್ಟು ಹೋಗುತ್ತಿದ್ದಾರೆ. ಮೊದಲು ಅದನ್ನ ಸರಿಪಡಿಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

10 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago