ಬಳ್ಳಾರಿ: ಬಳ್ಳಾರಿಯ ವಿಜಯನಗರದ ಹಂಪಿಯ ಯುವಕ ಅನಂತರಾಜು, ಬೆಲ್ಜಿಯಂ ಯುವತಿ ಕೆಮಿಲ್ರನ್ನು ಮದುವೆಯಾಗಿದ್ದಾನೆ. ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ದೂರಿ ವಿವಾಹ ನಡೀತು. 9: 25 ಬೆಳಗಿನ ಕುಂಭ ಲಗ್ನ ಶುಭ ಮುಹೋರ್ಥದಲ್ಲಿ ವಿವಾಹವಾದ ಜೋಡಿ, ಭಾರತೀಯ ಸಂಪ್ರದಾಯದಂತೆ ಜೋಡಿ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದಿದ್ದಾರೆ.
ಅನಂತರಾಜು ಹಾಗೂ ಕೆಮಿಲ್ ಸರಿ ಸುಮಾರು ನಾಲ್ಕೈದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನಂತರಾಜು ಆಟೋ ಚಾಲಕನಾಗಿ ಕಲಸ ಮಾಡ್ತಿದ್ದು, ಕೆಮಿಲ್, ಸೋಷಿಯಲ್ ವರ್ಕರ್ ಆಗಿ ಕೆಲಸ ಮಾಡ್ತಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಕೆಮಿಲ್ ಕುಟುಂಬ ಹಂಪಿ ವೀಕ್ಷಣೆಗೆಂದು ಬಳ್ಳಾರಿಗೆ ಬಂದಿದ್ದರು. ಈ ಸಂದರ್ಭಲ್ಲಿ ಅನಂತರಾಜು ಪ್ರಾಮಾಣಿಕತೆಗೆ ಕೆಮಿಲ್ ಕುಟುಂಬಸ್ಥರು ಮನಸೋತಿದ್ದರು. ಮೂರು ವರ್ಷದ ಹಿಂದೆಯೇ ಈ ಜೋಡಿ ಪ್ರೇಮ ವಿವಾಹ ಆಗಬೇಕಿತ್ತು. ಆದ್ರೆ ಕೊರೊನಾ ಮಾಹಾಮಾರಿ ಇವರ ಪ್ರೇಮ ವಿವಾಹಕ್ಕೆ ಅಡ್ಡಿ ಆಗಿತ್ತು.
ಮಗಳ ಮದುವೆಯಲ್ಲ ಬೆಲ್ಜಿಯಂನಲ್ಲೇ ಅದ್ದೂರಿಯಾಗಿ ಮಾಡಬೇಕು ಎಂದು ಕೆಮಿಲ್ ಕುಟುಂಬ ಅಂದುಕೊಂಡಿತ್ತು. ಆದ್ರೆ ಕೆಮಿಲ್ ತಂದೆ ಜೀಪ್ ಫಿಲಿಪ್ಪೆ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆ ಮಾಡಲು ನಿರ್ಧರಿಸಿದರು. ನಿನ್ನೆ ಸಂಜೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ಜೋಡಿ, ಇಂದು ಬೆಳಗ್ಗೆ 8:30 ರಿಂದ 9:30ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅದ್ದೂರಿಯಾಗಿ ಮದುವೆಯಾಗಿದೆ. ಅನಂತರಾಜು ಹಂಪಿ ಜನತಾ ಪ್ಲಾನ್ ನ ರೇಣುಕಮ್ಮ ದಿ. ಅಂಜಿನಪ್ಪ ಅವರ ಸುಪುತ್ರ. ಕೆಮಿಲ್, ಬೆಲ್ಜಿಯಂನ ಜೀಪ್ ಫಿಲಿಪ್ಪೆ ಅವರ ತೃತೀಯ ಪುತ್ರಿ. ಇಬ್ಬರೂ ಈಗ ವೈವಾಹಿಕ ಜೀವನಕ್ಕೆ ಖುಷಿಯಿಂದ ಕಾಲಿಟ್ಟಿದ್ದಾರೆ.
ಮೇರಿ ಲೋರಿ ಹೆರಾಲ್ ಪ್ಯಾರಿಸ್ನಿಂದ ಭಾರತಕ್ಕೆ ಬಂದಿದ್ದು ಸುತ್ತಾಡಬೇಕೆಂದು. ದೆಲ್ಲಿಯ ಪ್ರವಾಸಿ ಸ್ಥಳಗಳು, ಅವುಗಳ ವಿಶೇಷವನ್ನು ತಿಳಿಸುತ್ತಿದ್ದ ಬಿಹಾರದ ಟೂರ್ ಗೈಡ್ ರಾಕೇಶ್ ಜೊತೆ ಸುತ್ತುತ್ತಾ ಅವನ ಮೇಲೇ ಮೇರಿಗೆ ಪ್ರೀತಿಯಾಗಿ ಬಿಟ್ಟಿತು. ಬಿಹಾರದ ಪುಟ್ಟ ಹಳ್ಳಿ ಬೆಗುಸರಾಯ್ನ ರಾಕೇಶ್ ಕೂಡಾ ಅದಾಗಲೇ ಫ್ರೆಂಚ್ ಬೆಡಗಿಗೆ ಮನಸೋತಿದ್ದ. ಇದೆಲ್ಲ ಆಗಿದ್ದು 6 ವರ್ಷಗಳ ಹಿಂದೆ. ಮೇರಿ ಪ್ಯಾರಿಸ್ಸಿಗೆ ಮರಳಿದ ಮೇಲೂ ರಾಕೇಶ್ ಜೊತೆ ಫೋನ್ ಸಂಪರ್ಕದಲ್ಲಿದ್ದಳು. ಮಾತಾಡುತ್ತಾ ಮಾತಾಡುತ್ತಾ ಇಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಂಡರು.
ಈ ಲಾಂಗ್ ಡಿಸ್ಟೆನ್ಸ್ ರಿಲೇಶನ್ಶಿಪ್ ಹೇಗೆ ಮುಂದುವರಿಸುವುದೆಂದು ಯೋಚಿಸಿದ ಮೇರಿ, ರಾಕೇಶ್ನನ್ನೇ ಪ್ಯಾರಿಸ್ಸಿಗೆ ಕರೆಸಿಕೊಂಡು ತನ್ನೊಂದಿಗೆ ಟೆಕ್ಸ್ಟೈಲ್ ಬಿಸ್ನೆಸ್ ಆರಂಭಿಸಲು ಹೇಳಿದಳು. ಇಬ್ಬರೂ ಒಟ್ಟಾಗಿ ಬಿಸ್ನೆಸ್ ಮಾಡತೊಡಗಿದ ಮೇಲೆ ಅವರ ಪ್ರೀತಿ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತಲೇ ಹೋಯಿತು. ಕಡೆಗೆ ಈ ವರ್ಷ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದರು.
ಭಾರತೀಯ ಸಂಸ್ಕೃತಿ, ಸಂಪ್ರದಾಯಗಳಿಗೆ ಮಾರು ಹೋಗಿರುವ ಮೇರಿ ಬಿಹಾರದಲ್ಲಿ ಹಿಂದೂ ಶಾಸ್ತ್ರದ ಪ್ರಕಾರ ರಾಕೇಶ್ನನ್ನು ವಿವಾಹವಾದಳು. ಮೇರಿ ಹಾಗೂ ರಾಕೇಶ್ನ ಎರಡೂ ಕುಟುಂಬಗಳು ಮದುವೆಯಲ್ಲಿ ಭೋಜ್ಪುರಿ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಇನ್ನೊಂದು ವಾರದಲ್ಲಿ ಜೋಡಿ ಪ್ಯಾರಿಸ್ಸಿಗೆ ಮರಳಲಿದೆ. ಇದು ವಿದೇಶದಲ್ಲಿ ಸೆಟಲ್ ಆಗಲು ನಿಶ್ಚಯಿಸಿರುವ ಜೋಡಿಯಾದರೆ, ಭಾರತದಲ್ಲೇ ಇರಬೇಕೆಂದು ಬಯಸಿ ಬರುವ ವಿದೇಶಿ ಹುಡುಗಿಯರ ಸಂಖ್ಯೆಯೂ ಕಡಿಮೆಯೇನಿಲ್ಲ.