ರಾಜ್ಯ

ಬೆಳಗಾವಿ: ಶಹಾಪುರದ ಕಪಿಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಳಗಾವಿ: ಜಿಲ್ಲೆಯ ಶಹಾಪುರದ ಕಪಿಲೇಶ್ವರನಿಗೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಇಂದು(ಜನವರಿ.19) ವಾಸ್ತವ್ಯ ಹೂಡಿದ್ದ ಸರ್ಕಾರಿ ಪ್ರವಾಸಿ ಕೇಂದ್ರದಿಂದ ನೇರವಾಗಿ ಕಪಿಲೇಶ್ವರ ದೇವಾಲಯಕ್ಕೆ ತೆರಳಿ, ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ.

ಶಿವಲಿಂಗಕ್ಕೆ ಪೂಜೆಯನ್ನು ನೆರವೇರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನೊಬ್ಬ ದೈವ ಭಕ್ತ. ದೈವಶಕ್ತಿ ನೆನಪಿಸಿಕೊಂಡೇ ತಮ್ಮ ನಿವಾಸದಿಂದ ಹೋಗುತ್ತೇನೆ. ಈ ಕಾರಣಕ್ಕೆ ಇಂದು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿರುವೆ. ಅಲ್ಲದೇ ನಿಮ್ಮಿಂದ ರಕ್ಷಣೆ ಬೇಕಾಗಿದೆ ಎಂದರು.

ಬಿಜೆಪಿ ಸದಸ್ಯತ್ವ ಹೊಂದಿರುವವರನ್ನು ಬಿಟ್ಟು, ಯಾರೂ ಬೇಕಾದರೂ ಸಮಾವೇಶಕ್ಕೆ ಬರಬಹುದು

ಇದೇ ಸಂದರ್ಭದಲ್ಲಿ ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ ಸಮಾವೇಶದ ಬಗ್ಗೆ ಮಾತನಾಡಿದ ಅವರು,
ಬೆಳಗಾವಿ ಜಿಲ್ಲೆಯಲ್ಲಿ ಜನವರಿ.21 ರಂದು ಸಮಾವೇಶ ಜರುಗಲಿದೆ. ಆ ಕಾರ್ಯಕ್ರಮಕ್ಕೆ ಬಿಜೆಪಿ ಸದಸ್ಯತ್ವ ಹೊಂದಿರುವವರನ್ನು ಬಿಟ್ಟು, ಯಾರೂ ಬೇಕಾದರೂ ಸಮಾವೇಶಕ್ಕೆ ಬರಬಹುದು. ಅಲ್ಲದೇ 21 ರಂದು ಸಮಾವೇಶಕ್ಕೆ ಆಗಮಿಸುವ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ವಿಮಾನದ ಮೂಲಕ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು.

ನಾನು ಇಂದು ಸಂಜೆಯೊಮ್ಮೆ ಮತ್ತೊಂದು ಬಾರಿಗೆ ಸಮಾವೇಶದ ಸಿದ್ಧತೆಯನ್ನು ಪರಿಶೀಲಿಸುತ್ತೇನೆ. ಬಳಿಕ ಸಮಾವೇಶದ ಮುಂಚಿತವಾಗಿ ಗೃಹ ಸಚಿವ ಜಿ.ಪರಮೇಶ್ವರ್‌ ಬಂದು ಪರಿಶೀಲನೆ ಮಾಡುತ್ತಾರೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸತೀಶ್‌ ಜಾರಕಿಹೊಳಿ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.

ಅರ್ಚನ ಎಸ್‌ ಎಸ್

Recent Posts

ಇರಾನ್‌ ಡ್ರೋನ್‌ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ : ಚಿತ್ರ ಬಿಡುಗಡೆ

ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…

44 mins ago

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

59 mins ago

ಚಾ.ನಗರ | ಮಳೆಯಿಂದ ಹಾನಿ, ಶಾಸಕರಿಂದ ಪರಿಶೀಲನೆ

ಚಾಮರಾಜನಗರ : ಇತ್ತೀಚೆಗೆ ಸುರಿದ ಗಾಳಿ ಸಹಿತ ಮಳೆಯಿಂದಾಗಿ ತಾಲ್ಲೂಕು ವ್ಯಾಪ್ತಿಯ ದೊಡ್ಡಮೋಳೆ, ಕಟ್ನವಾಡಿ, ಗ್ರಾಮಗಳಲ್ಲಿ ಮನೆ ಗೋಡೆ ಕುಸಿದಿದ್ದ…

1 hour ago

ಮೈಸೂರು | ನೆಲಕಪ್ಪಳಿಸಿದ ಭಾರಿ ಗಾತ್ರದ ಮರ; ಕಾರು,ಆಟೋ ಜಖಂ

ಮೈಸೂರು : ಬೇರುಗಳಲ್ಲಿ ಸತ್ವ ಕಳೆದುಕೊಂಡು ಭಾರಿಗಾತ್ರದ ಬೇವಿನ ಮರ ಶನಿವಾರ ಧರೆಗುಳಿರದ ಪರಿಣಾಮ, ಒಂದು ಕಾರು, ಆಟೋ, ಬೈಕ್…

1 hour ago

ಇರಾನ್‌ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ

ಹೊಸದಿಲ್ಲಿ : ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯನ್‌…

2 hours ago

IPL | ಈ ಬಾರಿಯೂ ಕಪ್‌ ಗೆಲ್ಲಲು ಪರಿಶ್ರಮ ಅಗತ್ಯ ; ಆಟಗಾರರಿಗೆ ಕಿಂಗ್‌ ಕೊಹ್ಲಿ ಸಲಹೆ

ಬೆಂಗಳೂರು : ಇದೇ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್-2026 ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್​ರೈಸರ್ಸ್…

2 hours ago