ಶಾಸಕ ಜಿಟಿಡಿ ಆರೋಪ ಹಿನ್ನೆಲೆ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ವಾಗ್ದಾಳಿ

ಮೈಸೂರು: ನನ್ನ ಗಮನಕ್ಕೆ ತಾರದೆ ಚಾಮುಂಡೇಶ್ವರಿ ಜೆಡಿಎಸ್ ಅಧ್ಯಕ್ಷ ನೇಮಕ ಮಾಡಲಾಗಿದೆ ಎಂಬ ಶಾಸಕ ಜಿಟಿಡಿ ಆರೋಪ ಹಿನ್ನೆಲೆ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಹೇಳಿಕೆ‌ ನೀಡಿದ್ದಾರೆ.

ಜಿಟಿಡಿ ಪಕ್ಷದಲ್ಲೇ ಉಳಿಯುವುದಾದರೆ ನಾನು ರಾಜೀನಾಮೆ‌ ನೀಡುತ್ತೇನೆ. ನನ್ನ ನೇಮಕದಿಂದ ಅವರು ಪಕ್ಷ ತೊರೆಯೋದು ಬೇಡ. ನನಗೆ ಪಕ್ಷ ಮುಖ್ಯ, ಅಧಿಕಾರ ಮುಖ್ಯವಲ್ಲ ಎಂದು ಹೇಳಿದ್ದಾರೆ.

ಜಿಟಿಡಿಗೆ ಪಕ್ಷದ ಬಗ್ಗೆ ಕಾಳಜಿ ಇದ್ರೆ ಹಿಂದಿನ ಅಧ್ಯಕ್ಷರು ರಾಜೀನಾಮೆ ಕೊಡದಂತೆ ನೋಡಿಕೊಳ್ಳಬಹುದಿತ್ತು. ಜಿಟಿಡಿಯದ್ದು ಅಧಿಕಾರಕ್ಕೇರಲು ಹಾಕಿದ ಏಣಿಯನ್ನ ಒದೆಯುವ ಪ್ರವೃತ್ತಿ. ಹಿಂದೆ ಸಿದ್ದರಾಮಯ್ಯನವರು ಜೆಡಿಎಸ್ ತೊರೆದಾಗ ಅಧಿಕಾರಕ್ಕೊಸ್ಕರ ಅಲ್ಲೇ ಉಳಿದರು. ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರೂ ಬಿಎಸ್‌ವೈ ಜೊತೆ ಹೋಗಲಿಲ್ಲ. ಮತ್ತೆ ಮರಳಿ ಗೂಡಿಗೆ ಎಂದು ಜೆಡಿಎಸ್‌ಗೆ ಬಂದು ಸಚಿವರಾದರು.
ಇಲ್ಲಿ ಸಚಿವರಾಗಿ ಉಂಡು ತಿಂದು ಈಗ ಕುಮಾರಸ್ವಾಮಿಗೆ ದ್ರೋಹ ಮಾಡುತ್ತಿದ್ದಾರೆ. ಹೀಗೆ ಅಧಿಕಾರಕ್ಕೋಸ್ಕರ ಜಿಟಿಡಿ ಪಕ್ಷಾಂತರ ಮಾಡುತ್ತಿದ್ದಾರೆ.
ಶಾಸಕ ಜಿ.ಟಿ.ದೇವೆಗೌಡ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

× Chat with us