ವಿಜಯನಗರ : ರಾಜ್ಯದ ಬಿ.ಸಿ.ಎಂ ಹಾಸ್ಟೆಲ್ ಗಳಲ್ಲಿ ಶೇಕಡಾ 25 ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ವತಿಯಿಂದ ಇಂದು ನಡೆದ ಹಿಂದುಳಿದ ವರ್ಗಗಳ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲು ಬಂದಿದ್ದ ಅವರು ಮಾಧ್ಯಮಗಳೋಟ್ಟಿಗೆ ಮಾತನಾಡಿ ಈ ವಿಚಾರವನ್ನು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 1.25 ಲಕ್ಷ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಆ ಪೈಕಿ ಸ್ಥಳಾವಕಾಶ ಲಭ್ಯವಿರುವ ಕಡೆಗೆ 21 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಹಂತ ಹಂತವಾಗಿ ಎಲ್ಲಾ ಕಡೆಗಳಲ್ಲೂ ಹಾಸ್ಟೆಲ್ ಗಳನ್ನು ಆರಂಭಿಸಿ ಮೀಸಲಾತಿ ಅನ್ವಯ ಎಲ್ಲಾ ವರ್ಗದವರಿಗೂ ಪ್ರವೇಶಕ್ಕೆ ಅವಕಾಶವನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ಮುಂದೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಕೌನ್ಸ್ ಲಿಂಗ್ ಮಾಡಲಾಗಿದೆ ಇದರಿಂದ ಹೆಚ್ಚಿನ ತೊಂದರೆಗಳು ಬರುವುದಿಲ್ಲ ಎಂದರು.