ಬೆಂಗಳೂರು : ಬಿಬಿಎಂಪಿ ಯ ಚುನಾವಣೆಯ ಹಿನ್ನೆಲೆ ಸಲ್ಲಿಸಲಾಗಿದ್ಕ ಡಿ ಲಿಮಿಟೇಶನ್ ಗೆ ರಾಜ್ಯ ಸರ್ಕಾರ ಇಂದು ಅನುಮೋದನೆ ನೀಡಿದೆ.
ಇದೀಗ 198 ಇದ್ದಂತಹ ವಾರ್ಡಿನ ಸಂಖ್ಯೆಯು 243 ಕ್ಕೆ ಅಧಿಕೃತವಾಗಿ ಹೆಚ್ಚಿಸಲಾಗಿದೆ. ಈ ಬಗ್ಗೆ ಕಳೆದ ಜೂನ್ 9 ರಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಅನುಮೋದನೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಆಕ್ಷೇಪ ಹಾಗೂ ಸಲಹೆಗಳಿದ್ದರೆ ನಗರಾಭಿವೃದ್ಧಿ ಇಲಾಖೆಗೆ 15 ದಿನಗಳ ಒಳಗಾಗಿ ಸೂಚಿಸಬಹುದಾಗಿದೆ.