ಬೆಂಗಳೂರು : ಪಿಂಚಣಿ ಪರಿಷ್ಕರಣೆ, ಆರೋಗ್ಯ ವಿಮೆ ವ್ಯವಸ್ಥೆ ಸುಧಾರಣೆ ಒಳಗೊಂಡಂತೆ ಹಲವು ದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬ್ಯಾಂಕ್ ನಿವೃತ್ತರ ಒಕ್ಕೂಟಗಳ ಸಂಯುಕ್ತ ವೇದಿಕೆ ನಗರದ ಫ್ರೀಡಂ ಪಾರ್ಕ್ ನಲ್ಲಿಂದು(ಮಾ.29) ಬೃಹತ್ ಪ್ರತಿಭಟನೆ ನಡೆಸಿತು.
ಬ್ಯಾಂಕ್ ನಿವೃತ್ತರ ಸಂಯುಕ್ತ ವೇದಿಕೆಯು” ದೇಶದ ಸುಮಾರು ಏಳು ಬ್ಯಾಂಕ್ ನಿವೃತ್ತರ ಸಂಘಟನೆಗಳ ಒಂದು ರಾಷ್ಟ್ರೀಯ ಬೃಹತ್ ಸಂಘಟನೆಯಾಗಿದೆ. ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ, ಅಖಿಲ ಭಾರತ ನಿವೃತ್ತ ಬ್ಯಾಂಕ್ ನಿವೃತ್ತರ ಸಂಘ, ಫೋರಂ ಆಫ್ ರಿಟೈರ್ಡ್ ಬ್ಯಾಂಕ್ ಎಂಪ್ಲಾಯೀಸ್, ವಾಣಿಜ್ಯ ಬ್ಯಾಂಕ್ ಗಳ ನಿವೃತ್ತರ ಸಂಘ, ರಿಟೈರ್ಡ್ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್, ಬ್ಯಾಂಕ್ ರ್ಸ್ ಡಿಸರ್ವ್ ಜಸ್ಟಿಸ್ ಸೊಸೈಟಿ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ನ ಗುಂಪುಗಳ ನಿವೃತ್ತರ ಸಂಘಟನೆಗಳು ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾದರು.
“ಸಂಯುಕ್ತ ವೇದಿಕೆ”ಯ ಸಂಚಾಲಕರಾದ ಎಸ್.ಸಿ ಜೈನ್ ಮಾತನಾಡಿ, 1995 ರಿಂದ ಬಾಕಿ ಇರುವ ಬ್ಯಾಂಕ್ ನಿವೃತ್ತರ ಪಿಂಚಣಿ ಪರಿಷ್ಕರಣೆ, ವಿಶೇಷ ಭತ್ಯೆಗಳ ಮೇಲೆ ಪಿಂಚಣಿ ನೀಡುವ, ಖಾಸಗಿ ಬ್ಯಾಂಕ್ ನಿವೃತ್ತರಿಗೂ ಎಕ್ಸ್ ಗ್ರೇಶಿಯಾ ಕೊಡುವ, ಅರೋಗ್ಯ ವಿಮೆಯ ಸುಧಾರಣೆ ಮತ್ತು ಅರೋಗ್ಯ ವಿಮೆಯ ಮೇಲಿನ ಜಿ. ಎಸ್. ಟಿಯಿಂದ ಸಂಪೂರ್ಣ ವಿನಾಯತಿ ನೀಡುವ, ವಾಣಿಜ್ಯ ಬ್ಯಾಂಕುಗಳ ಪಿಂಚಣಿದಾರರಿಗೆ ಆಗುತ್ತಿರುವ ತಾರತಮ್ಯ ತಪ್ಪಿಸುವ ಜೊತೆಗೆ ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿದವರಿಗೂ ಆದಷ್ಟು ಬೇಗ ಪಿಂಚಣಿ ನೀಡುವಲ್ಲಿ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕು ಎಂದರು.
ಒಕ್ಕೂಟದ ಜಂಟಿ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ ನಾಯ್ಕ್ ಮಾತನಾಡಿ, ಬ್ಯಾಂಕ್ ನಿವೃತ್ತರ ಬೇಡಿಕೆಗಳ ಬಗ್ಗೆ ಚರ್ಚಿಸಲು ನೇರವಾಗಿ ಬ್ಯಾಂಕ್ ನಿವೃತ್ತರ ಸಂಘಟನೆಗಳ ನಾಯಕರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆದು ಮಾತನಾಡಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಬಾರದು. ಇಲ್ಲವಾದಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎ.ಆರ್.ಬಿ.ಇ.ಎ ಪ್ರಧಾನ ಕಾರ್ಯದರ್ಶಿ ಸಿ.ಎನ್. ಪ್ರಸಾದ್, ಕರ್ನಾಟಕ ರಾಜ್ಯ ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆಯ ಸಂಚಾಲಕ ಗಿರಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಲೋಕ್ ಅದಾಲತ್‌ನಲ್ಲಿ ಗಾಂಜಾ ಆರೋಪದ ಕೇಸುಗಳನ್ನು ಸೆಟಲ್ ಮಾಡಲಾಗುತ್ತದೆಯೇ ಎಂದು ಹೈಕೋರ್ಟ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದೆ. ಗಾಂಜಾ ಮಾರಾಟದ…
ಮಡಿಕೇರಿ: ಅನಧಿಕೃತವಾಗಿ ವಾಹನದ ಸ್ವರೂಪ ಬದಲಾಯಿಸಿಕೊಂಡು ಕರ್ಕಶ ಶಬ್ಧದ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಭಾರೀ ಕಿರಿಕಿರಿ ಮಾಡುತ್ತಿದ್ದ ಜಿಪ್ಸಿ ವಾಹನವೊಂದನ್ನು…
ಹಾಸನ: ಪುಂಡರಿಬ್ಬರು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮುದುಡಿ ರಸ್ತೆಯಲ್ಲಿ…
ಚಿಕ್ಕಮಗಳೂರು: ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ ಅನಾಹುತವಾಗಿದ್ದು, ಸೂಕ್ಷ್ಮ ಹುಲ್ಲುಗಾವಲು ಬೆಂಕಿಯಲ್ಲಿ ಭಸ್ಮವಾಗಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪವಿರುವ ಚಾರ್ಮಾಡಿ…
ವಿರಾಜಪೇಟೆ: ಟಿಪ್ಪರ್ ಮೇಲೆ ಮಣ್ಣು ಕುಸಿದು ಚಾಲಕ ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆಯ ಕದನೂರಿನಲ್ಲಿ ನಡೆದಿದೆ.…
ಕುಶಾಲನಗರ: ಪುರಸಭೆ ವ್ಯಾಪ್ತಿಯ ಎರಡನೇ ವಾರ್ಡ್‌ನ ನಿಂಗೇಗೌಡ ಬಡಾವಣೆಯ ರಸ್ತೆಯ ಕಾಮಗಾರಿ ಉದ್ಘಾಟನೆಗೆ ಬಂದ ಶಾಸಕರು ಕಾಮಗಾರಿ ವೀಕ್ಷಿಸಿ ಅತೃಪ್ತಗೊಂಡು…