ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ಪ್ರಯಾಣಿಕ ವಾಹನಗಳ ಮುಷ್ಕರ ನಡೆದಿದೆ. ಕ್ಯಾಬ್, ಆಟೋ, ಖಾಸಗಿ ಬಸ್ ಸೇರಿದಂತೆ ಯಾವುದೇ ವಾಹನಗಳೂ ರಸ್ತೆಗೆ ಇಳಿದಿರಲಿಲ್ಲ. ಇದರ ಬಿಸಿ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೂ ತಟ್ಟಿದೆ. ಟ್ಯಾಕ್ಸಿ, ಕ್ಯಾಬ್ ಮುಷ್ಕರದಿಂದಾಗಿ ಜನರು ಬಿಎಂಟಿಸಿ ಬಸ್ ಅವಲಂಬಿಸಬೇಕಾಗಿದೆ. ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಕೂಡಾ ಕ್ಯಾಬ್ ಅಲಭ್ಯತೆಯಿಂದಾಗಿ ಬಿಎಂಟಿಸಿ ಬಸ್ ಹತ್ತಿದ್ದಾರೆ. ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದ ಅನಿಲ್ ಕುಂಬ್ಳೆ, ತಮ್ಮ ಸೆಲ್ಫಿ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ