ರಾಜ್ಯ

ಪ್ರಶ್ನಿಸುವ ಗುಣಗಳುಳ್ಳ ಪ್ರಾಮಾಣಿಕ ಪತ್ರಕರ್ತ ಬಾನಾಸು: ನಟಿ ಉಮಾಶ್ರೀ

ಕಾಸರಗೋಡು : ಕಳೆದ ಐದು ದಶಕಗಳಿಂದ ಸಿನಿಮಾ ಕ್ಷೇತ್ರದ ಒಳ ಹೊರಗನ್ನು ಅತೀ ಹತ್ತಿರದಿಂದ ಬಲ್ಲ ಬಾನಾಸು ಅವರ ಅನುಭವಗಳನ್ನು ದಾಖಲಿಸಿ ಪುಸ್ತಕರೂಪವನ್ನು ಹೊರ ತರಬೇಕು. ಅದರಿಂದ ಮುಂದಿನ ತಲೆಮಾರಿನವರಿಗೆ ಕನ್ನಡ ಚಿತ್ರರಂಗದ ಮಾಹಿತಿಗಳನ್ನು ನೀಡಿದಂತಾಗುತ್ತದೆ ಎಂದು ಶಾಸಕಿ ಉಮಾಶ್ರೀ ತಿಳಿಸಿದರು.

ಅವರು ಕಾಸರಗೋಡಿನ *ಸಾಂಸ್ಕೃತಿಕ -ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿ ಮತ್ತು ಅದರ ಸಹ ಘಟಕಗಳಾದ ನಾರಿ ಚಿನ್ನಾರಿ,  ಸ್ವರ ಚಿನ್ನಾರಿ ಜೊತೆಗೆ ಕಾಸರಗೋಡಿನ ಕನ್ನಡ ಪರ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ 2021 ನೇ ಸಾಲಿನ 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿಗೆ ಭಾಜನರಾದ ಸುಬ್ರಹ್ಮಣ್ಯ ಬಾಡೂರು (ಬಾನಾಸು) ಅವರಿಗೆ ಪದ್ಮಗಿರಿ ಕಲಾ ಕುಟೀರ ದಲ್ಲಿ ದಿನಾಂಕ 1.12.2023 ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಹುಟ್ಟೂರ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಒಬ್ಬ ಸೃಜನಶೀಲ, ಸೌಮ್ಯ ಸ್ವಭಾವದ ಪ್ರಶ್ನಿಸುವ ಗುಣಗಳುಳ್ಳ ಪ್ರಾಮಾಣಿಕ ಪತ್ರಕರ್ತ, ನನ್ನ ಗೆಳೆಯ ಅನ್ನುವುದೇ ನನಗೆ ಅಭಿಮಾನ ಎಂದರು.

ಹುಟ್ಟೂರ ಗೌರವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಕಾಸರಗೋಡಿನ ಕನ್ನಡ ಪರ ಸಂಘಟನೆಗಳು ಕೈ ಜೋಡಿಸಿದರೆ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು ಎಂದರಲ್ಲದೆ ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರ ಮಟ್ಟದ ಸಾಧನೆ ಕಾಸರಗೋಡಿನ ಕನ್ನಡಿಗರಿಗೆಲ್ಲ ಕೀರ್ತಿ ತಂದಿದೆ ಎಂದರು.

ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ ಬಾನಾಸು ಕಾಸರಗೋಡಿಗೆ ಅಭಿಮಾನ ತರುವ ಕೆಲಸ ಮಾಡಿದ್ದಾರೆ. ಅವರು ಮತ್ತಷ್ಟು ಪ್ರಶಸ್ತಿ ಗಳಿಸಲಿ ಎಂದು ಶುಭ ಹಾರೈಸಿದರು.ರಾಷ್ಟ್ರ ಪ್ರಶಸ್ತಿ ವಿಜೇತ,ನಟ,ಶಿವಧ್ವಜ ಶೆಟ್ಟಿ ಮಾತನಾಡಿ,ಬಾನಾಸು ಅವರು ನನ್ನ ಸಿನಿಮಾ ರಂಗದ ಪ್ರವೇಶದ ಸಂದರ್ಭಗಳಲ್ಲಿ ಗುರುಸ್ಥಾನದಲ್ಲಿದ್ದು, ಬೆನ್ನು ತಟ್ಟಿ ಆಶೀರ್ವದಿಸಿ ತಿದ್ದಿದವರು.ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಇರುವ ಮಾಹಿತಿ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ .ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಅವರು ಕನ್ನಡ ಚಿತ್ರರಂಗದ ಎನ್ಸೈಕ್ಲೋಪೀಡಿಯಾ ಎಂದರು.

ಮೈಸೂರಿನ ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಅವರು. ಮಾತನಾಡಿ, ‘ಆಂದೋಲನ’ ಪತ್ರಿಕೆಯ ವರದಿಗೆ ರಾಷ್ಟ್ರ ಪ್ರಶಸ್ತಿ ಬಂದ ವಿವರವನ್ನು ತಿಳಿಸಿ, ಅವರಿಗೆ ಶುಭ ಹಾರೈಸಿದರು.

ಕಾಸರಗೋಡಿನ ಕನ್ನಡ ಪರ 25 ಸಂಸ್ಥೆಗಳು ಬಾನಾಸು ಅವರಿಗೆ ಶಾಲು,ಹಾರ ನೀಡಿ ಗೌರವಿಸಿದರು. ರಂಗ ಚಿನ್ನಾರಿ ಸಂಸ್ಥೆಯ ಪರವಾಗಿ ಪೇಟ,ಶಾಲು,ಫಲ, ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಬಾಡೂರು , ಚಿತ್ರರಂಗದಲ್ಲಿ ತಾನು ನಡೆದು ಬಂದ ದಾರಿಯನ್ನು ಹೇಳಿ, ‘ಹುಟ್ಟೂರ ಗೌರವ’ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಹೇಳಿದರು..ಕಾರ್ಯಕ್ರಮದ ಮುಂಚಿತವಾಗಿ ಅಂತರರಾಷ್ಟ್ರೀಯ ಗಾಯಕ ಶ್ರೀ ರವೀಂದ್ರ ಪ್ರಭು ಅವರಿಂದ ಭಕ್ತಿ ಭಾವಗೀತೆಗಳ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಆರ್ಗಾನ್ ನಲ್ಲಿ ಪುರುಷೋತ್ತಮ ಕೊಪ್ಪಳ ಹಾಗೂ ತಬಲಾದಲ್ಲಿ ರಾಜೇಶ್ ಭಾಗವತ್ ಸಾಥ್ ನೀಡಿದರು.

ರಂಗ ಚಿನ್ನಾರಿ ನಿರ್ದೇಶಕ, ಕಾರ್ಯಕ್ರಮ ಸಂಯೋಜಕ, ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಕಿಶೋರ್ ಪೆರ್ಲ ಅವರು ಪ್ರಾರ್ಥನೆ ಹಾಡಿದರು.

ನಾರಿ ಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್, ಕಾರ್ಯದರ್ಶಿ ದಿವ್ಯಾಗಟ್ಟಿ ಪರಕ್ಕಿಲ, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಸರ್ವಮಂಗಳ ‘ಸ್ವರ ಚಿನ್ನಾರಿ’ ಘಟಕದ ಗೌರವಾಧ್ಯಕ್ಷರಾದ ಶ್ರೀಕೃಷ್ಣಯ್ಯ ಅನಂತಪುರ, ರಂಗ ಚಿನ್ನಾರಿ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಅಧ್ಯಕ್ಷರಾದ ಪುರುಷೋತ್ತಮ ಕೊಪ್ಪಳ, ಜನಾರ್ದನ ಅಣಂಗೂರು, ಉದಯ ಮನ್ನಿಪ್ಪಾಡಿ, ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

andolanait

Recent Posts

ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ: ನಾಳೆ ಮನೆ ಮನೆಗೆ ತೆರಳಿ ಮತಯಾಚನೆ

ಬೆಂಗಳೂರು: ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ…

13 hours ago

ಮಣಿಪುರದಲ್ಲಿ ಮನೆ ಮೇಲೆ ಬಾಂಬ್‌ ದಾಳಿ: ಇಬ್ಬರು ಮಕ್ಕಳು ಸಾವು

ಇಂಪಾಲ: ಮಣಿಪುರದಲ್ಲಿ ಮನೆಯೊಂದರ ಮೇಲೆ ಬಾಂಬ್‌ ದಾಳಿ ನಡೆದಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯ…

14 hours ago

ನನ್ನ ತಾಳ್ಮೆಗೆ ಕಾಲವೇ ಉತ್ತರ ನೀಡುತ್ತದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಹುಬ್ಬಳ್ಳಿ: ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂಬ ಸಚಿವ ಜಮೀರ್‌ ಅಹ್ಮಮದ್‌ ಖಾನ್‌ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.…

14 hours ago

ನಮ್ಮಣ್ಣ ಇವತ್ತೇ ಸಿಎಂ ಆಗಬೇಕು ಎಂದೇನಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ನಮ್ಮ ಅಣ್ಣ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ ಇವತ್ತೇ ಸಿಎಂ ಆಗಬೇಕು ಅಂತೇನಿಲ್ಲ. ಇನ್ನೂ ಸಮಯವಿದೆ…

14 hours ago

ಏಪ್ರಿಲ್.‌17ರಂದು ಸಿಎಂ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ಸಾಧ್ಯತೆ

ಮಡಿಕೇರಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಪ್ರಿಲ್.‌17ರಂದು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ…

14 hours ago

ಇರಾನ್‌ಗೆ ಇಸ್ರೇಲ್‌ ಖಡಕ್‌ ಎಚ್ಚರಿಕೆ: ಏನದು ಗೊತ್ತಾ.?

ಟೆಹರಾನ್:‌ ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್‌ ಈಗ ಇರಾನ್‌ ನಾಗರಿಕರಿಗೆ ಅತ್ಯಂತ ಗಂಭೀರವಾದ ಎಚ್ಚರಿಕೆಯನ್ನು…

14 hours ago