ರಾಜ್ಯ

ಬಾಲವಿಕಾಸ ಅಕಾಡೆಮಿಯ ಬಾಲಗೌರವ ಪ್ರಶಸ್ತಿ : ಮೈಸೂರಿನ ತಬಲಾ ಬಾಲ ಪ್ರತಿಭೆ ಪಂಚಮಿ ಬಿದನೂರು ಸೇರಿದಂತೆ ಅನೇಕರಿಗೆ ಪ್ರಶಸ್ತಿ

ಬೆಳಗಾವಿ : ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ಇದೇ ಪ್ರಥಮಬಾರಿಗೆ ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದ ಬಳಿ ಇರುವ ಸಭಾಭವನದಲ್ಲಿ ಡಿ.16 ರಂದು ಬೆಳಿಗ್ಗೆ 11ಗಂಟೆಗೆ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರಧಾನ ಸಮಾರಂಭ ಹಮ್ಮಿಕೊಂಡಿದ್ದು, 2022-23 ಹಾಗೂ 2023-24 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ವಿತರಿಸಲಾಗುತ್ತಿದೆ.

ಕರ್ನಾಟಕ ಬಾಲವಿಕಾಸ ಅಕಾಡೆಮಿಯು ರಾಜ್ಯದ ಸುಮಾರು 2 ಕೋಟಿ ಮಕ್ಕಳ ಶ್ರಯೋಭಿವೃದ್ಧಿಗಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರಮಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2022-23 ಮತ್ತು 2023-24 ಸಾಲಿನ ಗೌರವ ಪ್ರಶಸ್ತಿ, ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಬಾಲ ಗೌರವ ಪ್ರಶಸ್ತಿ ಹಾಗೂ ವಿಶೇಷ ಗೌರವ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಆಯ್ಕೆ ಮಾಡಿರುವ ಪ್ರಶಸ್ತಿ ಪುರಸ್ಕೃತರು ಆಗಮಿಸಲಿದ್ದಾರೆ.

ಈ ಪ್ರಶಸ್ತಿಗಳು ಮಕ್ಕಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರೇರಣೆಯಾಗಲಿವೆ. ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:-ಅಕ್ರಮ ಗಾಂಜಾ ಮಾರಾಟ : ಮಹಿಳೆ ಪೊಲೀಸ್ ವಶಕ್ಕೆ

2022 ನೇ ಸಾಲಿನ ಮಕ್ಕಳ ಚಂದಿರ ಪ್ರಶಸ್ತಿಗೆ ಆಯ್ಕೆಯಾದ ಲೇಖಕ ಪುಸ್ತಕ ಪಟ್ಟಿ ಇಂತಿವೆ….
ಮೈಸೂರಿನ ಕೊಳ್ಳೆಗಾಲ ಶರ್ಮಾ ಅವರ ಗುಬ್ಬಿಯ ಬ್ರಹ್ಮಾಸ್ತ್ರ ಪುಸ್ತಕ, ವಿಜಯಪೂರದ ಎಸ್. ಎಸ್ ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಪುಸ್ತಕ, ಬೆಂಗಳೂರಿನ ಡಾ. ಬೇಲೂರ ರಘುನಂದನ ಅವರ ಚಿಟ್ಟೆ ಪುಸ್ತಕ, ವಿಜಯಪೂರನ ಹ.ಮ. ಪೂಜಾರ ಅವರ ಅಜ್ಜನ ಮನೆಯ ಅಂಗಳದಲ್ಲಿ ಪುಸ್ತಕ, ಬಾಗಲಕೋಟಯ ಡಾ. ಕರವೀರ ಪ್ರಭು ಕ್ಯಾಲಕೊಂಡ ಅವರ ಮಗುವಿಗೆ ಲಸಿಕೆ ಕೊಡಿಸಿದ್ದೀರಾ? ಪುಸ್ತಕಗಳ 2022 ನೇ ಸಾಲಿನ ಮಕ್ಕಳ ಚಂದಿರ ಪ್ರಶಸ್ತಿಗೆ ಆಯ್ಕೆಯಾಗಿವೆ.

2023 ನೇ ಸಾಲಗೆ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ ಲೇಖಕ ಪುಸ್ತಕ ಪಟ್ಟಿ ಇಂತಿವೆ
ದಕ್ಷಿಣ ಕನ್ನಡದ ನಿರ್ಮಲಾ ಸುರತ್ಕಲ್ ಅವರ ಪುಟ್ಟಿಗೆ ಸಿಟ್ಟಿಲ್ಲ ಪುಸ್ತಕ, ಧಾರವಾಡದ ಲಲಿತಾ ಪಾಟೀಲ ಅವರ ಗಪ್ ಚುಪ್ ಪುಸ್ತಕ. ಹಾವೇರಿಯ ಮಾಲತೇಶ ಅಂಗೂರ ಅವರ ಕಾಡು-ಮೇಡು ಪುಸ್ತಕ ಹಾಗೂ ನಾಗರಾಜ ಹುಡೇದ ಬೆರಗು ಪುಸ್ತಕಗಳಿಗೆ 2023 ನೇ ಸಾಲಿನ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ ಲಭಿಸಿದೆ.

2022-23ನೇ ಸಾಲಗೆ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದವರು
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ತುಮಕೂರ ಜಿಲ್ಲೆಯ ತಿಪಟೂರು ಪ್ರೋ ಕೃಷ್ಣಮೂರ್ತಿ ಬಿಳಿಗೆರೆ. ವಿಜಯಪುರದ ಲಲಿತಾ ಕೆ ಹೊಸಪ್ಯಾಟಿ, ಮಂಗಳೂರಿನ ಭಾಸ್ಕರ ಅಚ್ಚಳ, ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ರಾಯಚೂರಿನ ವಿ. ಎನ್ ಅಕ್ಕಿ, ಮಕ್ಕಳ ಸಾಂಸ್ಕೃತಿಕ, ಚಿತ್ರಕಲೆ ಕ್ಷೇತ್ರದಲ್ಲಿ ಮೈಸೂರಿನ ಎಸ್. ಎಫ್. ಹುಸೇನಿ, ಮಕ್ಕಳ ವಿಕಲಚೇತನ ಕ್ಷೇತ್ರದಲ್ಲಿ ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ಮಕ್ಕಳ ಮನೋವಿಕಾಸ. ಹಕ್ಕುಗಳ ಕ್ಷೇತ್ರದಲ್ಲಿ ಶಿವಮೊಗ್ಗದ ಡಾ ಕೆ. ಎಸ್ ಪವಿತ್ರಾ ಅವರು 2022-23ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2023-24ನೇ ಸಾಲಿಗೆ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದವರು
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಂಡಿತ ರಾಮಕೃಷ್ಣಶಾಸ್ತ್ರಿ, ಮೈಸೂರಿನ ಬೆ. ಗೋ. ರಮೇಶ, ಕೊಪ್ಪಳದ ಅರುಣಾ ನರೇಂದ್ರ, ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಬೆಂಗಳೂರಿನ ಮಾಲತೇಶ ಬಡಿಗೇರ, ಮಕ್ಕಳ ಸಾಂಸ್ಕೃತಿಕ, ಶೈಕ್ಷಣಿಕ, ಚಿತ್ರಕಲೆ ಕ್ಷೇತ್ರದಲ್ಲಿ ಹುಬ್ಬಳ್ಳಿಯ ಪ್ರತಾಪ ಆರ್ ಬಹುರೂಪಿ, ಮಕ್ಕಳ ಶೈಕ್ಷಣಿಕ.ಸಾಮಾಜಿಕ ಕ್ಷೇತ್ರದಲ್ಲಿ ಬೀದರನ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್, ಮಕ್ಕಳ ಮನೋವಿಕಾಸ ಹಕ್ಕುಗಳ ಕ್ಷೇತ್ರದಲ್ಲಿ ಬೆಂಗಳೂರಿನ ನಾಗಸಿಂಹ ಜಿ. ರಾವ್ ಅವರು 2023-24ನೇ ಸಾಲಿನ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

2022-23ನೇ ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳು:
ಸಂಗೀತ ಕ್ಷೇತ್ರದಲ್ಲಿ : ಕಲಬುರ್ಗಿ ವಿಭಾಗದ ಅಪೇಕ್ಷಾ ಎಸ್. ಎನ್ ಸರಕಿಲ್, ಮೈಸೂರು ವಿಭಾಗದ ಪಂಚಮಿ ಬಿದನೂರ, ಬೆಳಗಾವಿ ವಿಭಾಗದ ಅಥರ್ವಾ ಆರ್. ಘಂಟೆಣ್ಣವರ ಹಾಗೂ ನೃತ್ಯ ಕ್ಷೇತ್ರದಲ್ಲಿ ಕಲಬುರ್ಗಿ ವಿಭಾಗದ ಸೃಷ್ಟಿ ಅಡಿಗ, ಮೈಸೂರು ವಿಭಾಗದ ಸಿಂಚನ ಹೆಚ್. ಎಮ್. ಬೆಂಗಳೂರು ವಿಭಾಗದ ಎನ್ ಶ್ರಿಯ ನರೇಂದ್ರ, ಬೆಳಗಾವಿ ವಿಭಾಗದ ಶ್ರೇಯಾ ಪ್ರಲ್ಲಾದ ಕುಲಕರ್ಣಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮೈಸೂರು ವಿಭಾಗದ ಬಿ. ದಿಯಾ ಭೀಮಯ್ಯ. ಬೆಂಗಳೂರು ವಿಭಾಗದ ಚಾರ್ವಿ ಎ.. ಬೆಳಗಾವಿ ವಿಭಾಗದ ಕಾವ್ಯಾ ತುಕಾರಾಮ ದಾನ್ವೇನವರ, ಕಲಬುರ್ಗಿ ವಿಭಾಗದ ಬಸವಪ್ರಸಾದ ಜ. ಪಾಟೀಲ, ಚಿತ್ರಕಲೆ ಕ್ಷೇತ್ರದಲ್ಲಿ ಮೈಸೂರು ವಿಭಾಗದ ದೃತಿ ಎಸ್.. ಕಲಬುರ್ಗಿ ವಿಭಾಗದ ಅಮೂಲ್ಯ ಮಠಪತಿ, ಬೆಳಗಾವಿ ವಿಭಾಗದ ಸುಖದಾ ಸತೀಶ ಮುರಗೋಡ. ಬಹುಮುಖ ಕ್ಷೇತ್ರದಲ್ಲಿ ಕಲಬುರ್ಗಿ ವಿಭಾಗದ ಮಯಾಂಕ ವಿ ಹಿರೇನೂರ. ಮೈಸೂರು ವಿಭಾಗದ ಧನ್ವಿ, ಬೆಂಗಳೂರು ವಿಭಾಗದ ಧವನಿ ಎನ್. ಬೆಳಗಾವಿ ವಿಭಾಗದ ಎಂ. ವಿ. ಶ್ರೇಯಾ, ಅಭಿನವ ಕರಡಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಮೈಸೂರು ವಿಭಾಗದ ಲಿಖಿತ್ ಆರ್., ಬೆಳಗಾವಿ ವಿಭಾಗದ ಪ್ರಿಯಾಂಕಾ ಪುಂಡಲಿಕ ಪವಾರ, ಬೆಂಗಳೂರು ವಿಭಾಗದ ಪ್ರಜ್ವಲ್ ಎನ್ ಹಲಾಳೆ 2022-23ನೇ ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

2023-24ನೇ ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಗೆ ಆಯ್ಕೆಯಾದವರು
ಸಂಗೀತ ಕ್ಷೇತ್ರದಲ್ಲಿ ಸ್ವಾತಿಕ ಗು. ಮಹಾಮನೆ. ಅನುರಾಗ ನಾಯಕ್. ಸಮರ್ಥ ಗೂಳಪ್ಪಾ ವಿಜಯನಗರ. ನೃತ್ಯ ಕ್ಷೇತ್ರದಲ್ಲಿ ವರ್ಷಿಣಿ ಪತ್ತಾರ. ದಿವ್ಯಶ್ರೀ ಎಚ್.ಆರ್.. ಪೃಥ್ವಿ ಎಮ್ ಹೆಗಡೆ, ಪಲ್ಲವಿ ಚಾಕಲಬ್ಬಿ, ಪ್ರತಿಫಲಾ ಮೆಂಚ, ನಿಶಾಂತ ಹಿರೇಮಠ, ರಚನಾ ಹಂಚಿನಮನಿ, ಕ್ರೀಡಾ ಕ್ಷೇತ್ರದಲ್ಲಿ ಅನಿಕೇತ ಬಳ್ಳಾರಿ. ಸ್ನೇಹ ಎಚ್ ಕೊಟ್ಯಾನ್, ಗ್ಲೋರಿಯಾ ಮುರ್ತೋಟಿ, ಸಮರ್ಥ ವಿ. ಕುಲಕರ್ಣಿ, ಕುಮಾರಿ ಜಾಹ್ನವಿ ಎಂ.ಆರ್., ಜೋನ್ನಾ ಭಾಸ್ಕರ್ ಹಾಗೂ ಬಹುಮುಖ ಕ್ಷೇತ್ರದಲ್ಲಿ ಸಾಹಿತ್ಯ ಗೊಂಡಬಾಳ, ಸಾನಿಧ್ಯ ಆಚಾರ್ಯ, ಸಂಕೇತ ಹೊಳೆಆಲೂರ. ಅನುಪ್ರಿಯಾ ಕುಲಕರ್ಣಿ, ಪುನಂ ಜಾಧವ, ಸುಪ್ರಿಯಾ ಇಟಗಿ, ಭೈರವಿ ಎಮ್.. ಶ್ರೀಲಕ್ಷ್ಮೀ ಭಟ್, ವಿಜ್ಞಾನ ಕ್ಷೇತ್ರದಲ್ಲಿ ನಮ್ರತಾ ಸಿನ್ನೂರ. ಕುಮಾರಿ ಉದ್ಭವಿ ಶೆಟ್ಟಿ, ಕುಮಾರಿ ಭಾಗ್ಯಶ್ರೀ ಡೊಣಗಿ, ಕುಮಾರಿ ಖುಷಿ ಎಮ್.. ನಾಟಕ ಕ್ಷೇತ್ರದಲ್ಲಿ ಕುಮಾರ ದಿಗಂತ ತುಂಬರಗುದ್ದಿ ಆಯ್ಕೆಯಾಗಿದೆ.

2022-23 ನೇ ಸಾಲಿನ ವಿಶೇಷ ಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ವಿವರ
ಪೂಜಾ ಭರಮಪ್ಪ ಹೊಂಬಳೇರ, ರೇಷ್ಮಾ ನದಾಫ್, ಸಾತವ್ವಾ ಸಿ ಹರಿಜನ್, ಸಿದ್ದಾರ್ಥ ಅಗ್ನಿ, ಗೌತಮ ವಿಶ್ವನಾಥ ಭಾವಿಕಟ್ಟಿ, ಅಂಬಿಕಾ, ಕುಮಾರ ಭೀಮಾ ಎಸ್. ರಂಗನಾಥ ಕೆ.. ಮಂಜುಶ್ರೀ ಟಿ.. ಕುಮಾರ ನಿಶ್ಚಲ್ ಸಾಯಿ, ನಾಗವೇಣಿ. ಲಾವಣ್ಯ, ಶಿವಕುಮಾರ ಹೆಚ್. ಆರ್., ಡೇವಿಡ, ಲಕ್ಷ್ಮೀ, ಜಯಭೀಮರಾವ, ಸಾಗರ, ನಾಗು ಮಂ.. ಸಂತೋಷ್, ಜೀವನ್, ಗಾಯತ್ರಿ, ಲಕ್ಷ್ಮೀ, ಮೀನಾಕ್ಷಿ, ಸಮೀಕ್ಷಾ, ನಾಗವೇಣಿ, ಕಿರಣ ಇಂಗಳ ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.

2023-24 ನೇ ಸಾಲಿನ ವಿಶೇಷ ಗೌರವ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ವಿವರ
ದರ್ಶನ ಕುಂಟಗೌಡ್ರು, ಸುದೀಪ ಉಪ್ಪಾರ, ಪರಶುರಾಮ ದೊಡ್ಡಮನಿ, ಮಹೇಶ ಚವಡಿ. ಸಂಜನಾ ಪೂಜಾರಿ, ಕೃಷ್ಣಾ ಪೂಜಾರಿ, ಸಂಜೀವ ತೆಗ್ಗಿ. ಲಕ್ಷ್ಮೀ ವೆಂಕಟಪ್ಪ, ಭಾಗ್ಯಲಕ್ಷ್ಮೀ ಬಸವರಾಜ, ಕಾವ್ಯಶ್ರೀ ಜಿ.ಜೆ. ಸಾಗರ್ ಬಿ. ಎಸ್. ರಾಮಚರಣ, ಲಾವಣ್ಯ ಎಸ್.. ದಿವ್ಯಾ ಎನ್ ನಾಗರಾಜ, ಚಂದನ್ ಪಿ. ಆರ್., ಲಕ್ಷ್ಮೀ, ಸುಕನ್ಯ, ಪ್ರತಿಕ್ಷಾ, ಸ್ವಪ್ಪಾ, ಪ್ರವೀಣ ಜೆ. ಎನ್.. ರೋಜಾ, ವಸಂತಿ, ಭಾಗ್ಯಲಕ್ಷ್ಮೀ, ಆಕಾಶ, ನೇತ್ರಾವತಿ, ಸುಜನ್. ಮೌನೇಶ, ಶ್ರೀನಿವಾಸ ಬಿಸಲದಿನ್ನಿ ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.

ಆಂದೋಲನ ಡೆಸ್ಕ್

Recent Posts

ಯತೀಂದ್ರ ನಮ್ಮ ಹೈಕಮಾಂಡ್‌, ಅವರು ಹೇಳಿದ ಮೇಲೆ ಇನ್ನೇನಿದೆ : ಡಿಸಿಎಂ ಡಿಕೆಶಿ

ಮಂಗಳೂರು : ಯತೀಂದ್ರ ಸಿದ್ದರಾಮಯ್ಯ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗಿಯಿತು. ಈ ಬಗ್ಗೆ ನನಗೆ…

15 mins ago

ಆರ್‌ಬಿಐ ರೆಪೊ ದರ ಯಥಾಸ್ಥಿತಿ : ಹಣಕಾಸು ಸಮಿತಿ ನಿರ್ಣಯ

ಹೊಸದಿಲ್ಲಿ : ಕಳೆದ ಡಿಸೆಂಬರ್‌ನಲ್ಲಿ 25 ಬೇಸಿಸ್ ಪಾಯಿಂಟ್ ದರ ಕಡಿತದ ನಂತರ, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆ ರಿಸರ್ವ್…

42 mins ago

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ : ಯತೀಂದ್ರ ಸಿದ್ದರಾಮಯ್ಯ

ಮೈಸೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲವಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರಲಿದ್ದಾರೆ ಎಂದು ಎಂಎಲ್‌ಸಿ…

2 hours ago

ನಟ, ರಾಜಕಾರಣಿ ವಿಜಯ್‌ಗೆ 1.5ಕೋಟಿ ದಂಡ : ರಿಟ್‌ ಅರ್ಜಿ ವಜಾಗೊಳಿಸಿದ ಹೈ ಕೋರ್ಟ್‌

ಚೆನ್ನೈ : ಆದಾಯ ತೆರಿಗೆ ಇಲಾಖೆ 1.50 ಕೋಟಿ ರೂಪಾಯಿ ದಂಡ ಪಾವತಿಸುವಂತೆ ನಿರ್ದೇಶಿಸಿದ್ದ ಆದೇಶವನ್ನು ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ…

2 hours ago

ಡ್ರಗ್ಸ್‌ ಸಮೇತ ಸಿಕ್ಕಿಬಿದ್ದ ನಟಿ ಅಂಜುಕೃಷ್ಣ : 8 ಮಂದಿ ಬಂಧನ

ಚೆನ್ನೈ : ತಮಿಳು ಚಿತ್ರರಂಗದ ಒಬ್ಬ ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಡ್ರಗ್ಸ್ ಸಮೇತ…

2 hours ago

ಪರೀಕ್ಷಾ ಪೇ ಚರ್ಚಾ | ಇಂಟರ್‌ನೆಟ್‌ನಲ್ಲಿ ಸಮಯ ಕಳೆಯಬೇಡಿ : ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ

ಹೊಸದಿಲ್ಲಿ : ದೇಶದಲ್ಲಿ ಡೇಟಾ ಅಗ್ಗವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಇಂಟರ್ನೆಟ್‍ನಲ್ಲಿ ಸಮಯ ವ್ಯರ್ಥ ಮಾಡಬೇಡಿ ಮತ್ತು ಅವರ ಜೀವನ…

3 hours ago