ಬೆಂಗಳೂರು: ನಾಳೆ ಮಾಜಿ ಶಾಸಕರು, ಮಾಜಿ ಸಂಸದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಭೋಜನಕೂಟ ಏರ್ಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಡಿನ್ನರ್ ಪಾರ್ಟಿ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಿಜೆಪಿಯಲ್ಲಿಯೂ ಡಿನ್ನರ್ ಪಾರ್ಟಿ ಪಾಲಿಟಿಕ್ಸ್ ಶುರುವಾಗಿದೆ.
ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಿಜಯೇಂದ್ರ ಅವರು ಭೋಜನಕೂಟ ಆಯೋಜಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು, ಬಳಿಕ ಔತಣಕೂಟ ನಡೆಯಲಿದೆ. ಇದರಲ್ಲಿ ಮಾಜಿ ಶಾಸಕರು ಹಾಗೂ ಮಾಜಿ ಸಂಸದರು ಕೂಡ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಹಾಲಿ ಹಾಗೂ ಮಾಜಿಗಳ ವಿಶ್ವಾಸಗಳಿಸಲು ವಿಜಯೇಂದ್ರ ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಹದಿನಾರಕ್ಕೆ ಕಾಲಿಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಂಸ್ಕೃತಿಕ ವೈಭವದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುತ್ತಿರುವ ಈ ಉತ್ಸವಕ್ಕೆ…
ಮೈಸೂರು: ನಗರದಲ್ಲಿರುವ ಪಾಲಿಕೆ ಆಸ್ತಿಯನ್ನು ಸರಿಯಾಗಿ ನಿರ್ವಹಣೆ ಮಾಡಿ ಪಾಲಿಕೆಯು ತೆರಿಗೆ ವಸೂಲಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು, ಆಸ್ತಿ ತೆರಿಗೆ ಹೊರತುಪಡಿಸಿ…
ಬೆಂಗಳೂರು: ಆರು ಮಂದಿ ನಕ್ಸಲರ ಶರಣಾಗತಿಯಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಂತಸ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿವಾದದಿಂದ ಮಾವೋವಾದಕ್ಕೆ ಹೊರಳಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸರ್ಕಾರದ ನಕ್ಸಲ್ ಪ್ಯಾಕೇಜ್…
ಮೈಸೂರು: ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಟ್ರೈನಿ ಉದ್ಯೋಗಿಗಳಿಗೆ ಜನವರಿ.26ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಕ್ಯಾಂಪಸ್ ಒಳಗೆ ಅಳವಡಿಸಲಾದ…
ತಿರುವನಂತಪುರಂ: ಒಲವಿನ ಉಡುಗೊರೆ ಕೊಡಲೇನು ಸೇರಿದಂತೆ ಹಲವು ಜನಪ್ರಿಯ ಚಿತ್ರಗೀತೆಗಳನ್ನು ಹಾಡಿದ್ದ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ನಿಧನರಾಗಿದ್ದಾರೆ. ಅವರಿಗೆ 80…