ಬೆಂಗಳೂರು : ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದಾಗ ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದಾರೆ ಎಂದು ಗೊತ್ತು. ನಾವೇಕೆ ಆ ಪಕ್ಷಕ್ಕೆ ಏಕೆ ಹೋಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅನರ್ಹರಾದಾಗ ಇದೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಸದನದಲ್ಲಿ ಏನೆಲ್ಲ ಮಾತನಾಡಿದ್ದಾರೆ ಎಂಬುದು ಎಲ್ಲರೂ ನೋಡಿದ್ದಾರೆ. ಇಂದು ನಮ್ಮ ರಾಜಕೀಯ ಸಮಾದಿ ಆಯಿತು ಎಂದ ಪಕ್ಷಕ್ಕೆ ಹೋಗಬೇಕಾ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇರಬಹುದು. ಹಾಗಾಗಿ ಪಕ್ಷ ಬಿಟ್ಟು ಹೋದವರನ್ನು ಪುನಃ ಬನ್ನಿ ಎಂದು ಕರೆಯುತ್ತಿರಬಹುದು. ನಾವ್ಯಾರು ಅರ್ಜಿಯನ್ನು ಹಾಕಿಲ್ಲ. ನಮ್ಮಿಂದ ಯಾರೂ ಕೂಡ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ವದಂತಿಗಳಿಗೆ ತೆರೆ ಎಳೆದರು.
ಅರ್ಜಿ ಹಾಕಲು ಅಭ್ಯರ್ಥಿಗಳ ಕೊರತೆ ಇರುವುದರಿಂದ ಹಳೆ ಗಂಡನ ಪಾದವೇ ಗತಿ ಎಂದು ಕರೆಯುತ್ತಿರಬಹುದು. ಕಾಂಗ್ರೆಸ್ನಿಂದಲೇ ಅನೇಕ ಜನ ಬಿಜೆಪಿಗೆ ಬರುತ್ತಾರೆ ಕಾದು ನೋಡಿ ಎಂದು ಪಾಟೀಲ್ ಬಾಂಬ್ ಸಿಡಿಸಿದರು.
ಮಾಜಿ ಶಾಸಕ ಯು.ಬಿ. ಬಣಕಾರ್ ಗೆ ತಿರುಗೇಟು ನೀಡಿದ ಬಿ.ಸಿ.ಪಾಟೀಲ್, ಅವರು ಯಾವ ಪಕ್ಷ ಸೇರಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಕಾಂಗ್ರೆಸ್ ಸೇರಿದ ಮೇಲೆ ನನ್ನ ಎದುರಾಳಿ ಆಗಿ ಸ್ರ್ಪರ್ಧಿಸಬಹುದು. ಬಣಕಾರ್ ಅವರನ್ನು ನಾನು ಹೊಸದಾಗಿ ಎದುರಿಸುತ್ತಿಲ್ಲ. ಈಗಾಗಲೇ ಮೂರು ಸಲ ಅವರ ವಿರುದ್ಧ ಕುಸ್ತಿ ಮಾಡಿದ್ದೇನೆ ಎದು ಗುಡುಗಿದರು.
ಹಿರೇಕೆರೂರಿನಲ್ಲಿ ಅವರನ್ನು ಮೂರು ಬಾರಿ ಸೋಲಿಸಿದ್ದೇನೆ. ಅವರು ಏನು ಅಭಿವೃದ್ಧಿ ಮಾಡಿದ್ದಾರೆಂದು ಹೇಳಲಿ, ನಾನೇನು ಮಾಡಿದ್ದೀನಿ ಎಂದು ಹೇಳುತ್ತೇನೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಪುಸ್ತಕವನ್ನೇ ಪ್ರಿಂಟ್ ಮಾಡಿ ಜನರಿಗೆ ಕೊಡುತ್ತೇನೆ. ಯಾರು ಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ನಾನು ರಾಜೀನಾಮೆ ಕೊಡುತ್ತಿದ್ದ ಹಾಗೆ ಬಣಕಾರ್ ಉಗ್ರಾಣ ನಿಗಮದ ಅಧ್ಯಕ್ಷರಾದರು. ನಾವು ಆರು ತಿಂಗಳು ವನವಾಸ ಅನುಭವಿಸಿದೆವು. ಬಣಕಾರ್ ಅವರಿಗೆ ನಾನು ಯಾವುದೇ ಕಿರುಕುಳ ಕೊಟ್ಟಿಲ್ಲ. ಯಾವ ರೀತಿ ಕಿರುಕುಳ ಕೊಟ್ಟೆ ಎಂದು ಹೇಳಲಿ ಎಂದು ತಿರುಗೇಟು ನೀಡಿದರು.
ನನಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದು ಅವರಿಗೆ ಕಿರುಕುಳ ಆಗಿದೆಯೇ? ಮುಂಬರುವ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀನಿ. ಜನ ನನ್ನನ್ನು ಇಷ್ಟಪಟ್ಟಿದ್ದಾರೆ. ಮೂರ್ನಾಲ್ಕು ಸಲ ಗೆಲ್ಲಿಸಿದ್ದಾರೆ. ಈ ಸಲವೂ ಖಂಡಿತವಾಗಿ ಜನ ಗೆಲ್ಲಿಸುತ್ತಾರೆ
ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿಲುಮೆ ಸಂಸ್ಥೆಯ ಮೂಲಕ ಆಪರೇಷನ್ ವೋಟರ್ ಕಾರ್ಡ್ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವರಿಂದ ಹೈಕಮಾಂಡ್ ರಿಪೋರ್ಟ್ ಕಾರ್ಡ್ ಕೇಳಿರುವ ವಿಚಾರದ ಕುರಿತು ಮಾತನಾಡಿದ ಅವರು, ಪಕ್ಷದ ವರಿಷ್ಠರು ಸಚಿವರಿಂದ ವರದಿ ಕೇಳುವುದು ಸಹಜ. ಸಚಿವರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂದು ಕೇಳುತ್ತಾರೆ. ಇದರಲ್ಲಿ ಹೊಸದೇನಿಲ್ಲ. ವರದಿ ಆಧಾರದಲ್ಲಿ ಟಿಕೆಟ್ ಕೊಡುವ ವಿಚಾರ ಗೊತ್ತಿಲ್ಲ ಇದರ ಬಗ್ಗೆ ಮುಂದೆ ಗೊತ್ತಾಗುತ್ತದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದ ವಿಚಾರಕ್ಕೆ,, ನಾವ್ಯಾರೂ ಅವರನ್ನು ಮರೆತಿಲ್ಲ. ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡ್ ಗೆ ಕೇಳಬೇಕು. ಜೆಡಿಎಸ್ ಸೇರುವ ಸುದ್ದಿ ಹರಿದಾಡುತ್ತಿರುವ ವಿಚಾರವೂ ಗೊತ್ತಿಲ್ಲ ಎಂದು ಸರಿಯಾಗಿ ಉತ್ತರ ಕೊಡದೆ ನುಣುಚಿಕೊಂಡರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ನಮ್ಮಿಂದ ಯಾರೂ ಕೂಡ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ : ಸಚಿವ ಬಿ.ಸಿ.ಪಾಟೀಲ್
Previous Articleಆನ್ ಲೈನ್ನಲ್ಲಿ ಚಲನಚಿತ್ರ ಟಿಕೆಟ್ ಮಾರಾಟ: ಸಿನಿಪ್ರಿಯರಲ್ಲಿ ಅಸಮಾಧಾನ