ಬೆಂಗಳೂರು : ಶಾಲಾ ಮಕ್ಕಳಿಗೆ ಅಜೀಮ್ ಪ್ರೇಮ್ ಜೀ ಪ್ರತಿಷ್ಠಾನದಿಂದ ವಾರದಲ್ಲಿ ೪ ಸಲ ಮೊಟ್ಟೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅಜೀಮ್ ಪ್ರೇಮ್ ಜೀ ಪ್ರತಿಷ್ಠಾನವು ಮೊಟ್ಟೆ ಒದಗಿಸಲಿದೆ. ವಾರದಲ್ಲಿ ೪ ದಿನಗಳ ಕಾಲ ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ಒಂದು ಮೊಟ್ಟೆ ವಿತರಿಸಲಿದೆ ಎಂದು ತಿಳಿಸಿದರು.
ಅಲ್ಲದೆ ಮೊಟ್ಟೆ ವಿತರಿಸುವ ಯೋಜನೆ ಎಂದಿನಿಂದ ಆರಂಭವಾಗಲಿದೆ ಅಂತ ಬಹಿರಂಗ ಪಡಿಸಲಿಲ್ಲ. ಅಜೀಮ್ ಪ್ರೇಮ್ ಜಿ ಹೇಳಿದ್ದಾರೆಂದರೆ ಅದು ಬೇಗ ಶುರುವಾಗುವುದರಲ್ಲಿ ಅನುಮಾನವಿಲ್ಲ. ಇದು ನಿಜಕ್ಕೂ ಬಹುದೊಡ್ಡ ಕೊಡುಗೆ ಅನಿಸಲಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಲಕ್ಷಾಂತರ ಮಕ್ಕಳು ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ವಾರದಲ್ಲಿ ೪ ಮೊಟ್ಟೆ ನಿಸ್ಸಂದೇಹವಾಗಿ ಅವರ ದೇಹಕ್ಕೆ ಬೇಕಿರುವ ಪೌಷ್ಠಿಕಾಂಶ ಒದಗಿಸಲಿದೆ ಎಂದು ಹೇಳಿದರು.
ಬೆಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ…
ಚಾಮರಾಜನಗರ: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಮುಂದುವರಿದಿದ್ದು, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಪರಿಣಾಮ ಸೋಷಿಯಲ್ ಮೀಡಿಯಾದಲ್ಲಿ ಪೆಟ್ರೋಲ್, ಡೀಸೆಲ್…
ನಂಜನಗೂಡು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಂಜನಗೂಡು ತಾಲ್ಲೂಕಿನ ಹನುಮನಪುರ…
ವಾಷಿಂಗ್ಟನ್: ಇರಾನ್ ಜೊತೆ ಕದನ ವಿರಾಮ್ ಮಾಡಿಕೊಳ್ಳಲು ಬಯಸಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. NATO ಮಿತ್ರರಾಷ್ಟ್ರಗಳನ್ನು…
ದಣಿವರಿಯದೆ ದುಡಿದಿರಿ ಆರೋಗ್ಯ ಶಿಕ್ಷಣ ಕ್ಷೇತ್ರಗಳಲಿ ಉಸಿರಾಗಿತ್ತು ನಿಮಗೆ ಸಮಾಜಸೇವೆ! ಧಿಕ್ಕರಿಸಿದಿರಿ ಮೌಢ್ಯಕಂದಾಚಾರಗಳ ಪ್ರೀತಿಸಿದಿರಿ ಎಲ್ಲರನೂ ಸಮಭಾವದಲಿ! ಮನಮಾಗಿದ ನಗುಮೊಗದ…
ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ( ನಾಟೋ) ದೇಶಗಳ ಗುಂಪಿಗೆ ಸೇರಿದ ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮುಂತಾದ ದೇಶಗಳು ಇರಾನಿನ…