ಹಾನಗಲ್‌ ನಲ್ಲಿ ವಿಧಾನಸಭಾ ಚುನಾವಣೆ ಪ್ರಣಾಳಿಕೆ ಬಿಡುಗಡೆ

ಹಾನಗಲ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ಲಿನ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರ ಮನೆಯಲ್ಲಿ ವಿಧಾನಸಭಾ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಜನತಾ ಪಕ್ಷ ಕಾಯಕದಲ್ಲಿ ನಂಬಿಕೆ ಇಟ್ಟಿದೆ. ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣ ಅಂದರೆ ಜನರನ್ನು ಮರುಳು ಮಾಡುವುದಲ್ಲ. ಕೆಳಮಟ್ಟದಲ್ಲಿ ಭಾಷೆ ಬಳಸಿದರೆ ದೊಡ್ಡವರಾಗುವುದಿಲ್ಲ. ಅಭಿವೃದ್ಧಿ ಒಂದೇ ನಮ್ಮ ಪಕ್ಷದ ಅಜೆಂಡಾ ಎಂದು ಅವರು ಹೇಳಿದರು. ನಮ್ಮ ಜನಕೃತಜ್ಞರು ಕಷ್ಟಕಾಲದಲ್ಲಿ ಕೈಹಿಡಿದ ಸರ್ಕಾರವನ್ನು ಹಾನಗಲ್ ತಾಲೂಕಿನ ಜನ ಕೈ ಬಿಡುವುದಿಲ್ಲ ಎಂದು ಹೇಳಿದರು.

ಬಿಎಸ್ ಯಡಿಯೂರಪ್ಪ ಅವರು ಈ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಾನಗಲ್ ಕ್ಷೇತ್ರದ ಜನ ಕೆರೆ ತುಂಬಿಸುವ ಯೋಜನೆಯ ಬೇಡಿಕೆ ಇಟ್ಟಿದ್ದರು. ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಂದೇ ದಿನದಲ್ಲಿ 625 ಕೋಟಿ ಅನುದಾನವನ್ನು ಬಿಎಸ್ ಯಡಿಯೂರಪ್ಪ ಅವರು ಮಂಜೂರು ಮಾಡಿದರು. ಇದುನ ಭಾರತೀಯ ಜನತಾ ಪಕ್ಷ ಅಭಿವೃದ್ಧಿಗೆ ನೀಡುವ ಮಹತ್ವ ಎಂದು ಹೇಳಿದರು.

× Chat with us