ಕಸಾಯಿಖಾನೆಗೆ ಜಾನುವಾರು ಸಾಗಾಣೆ ಯತ್ನ ಆರೋಪಿಗಳ ಬಂಧನ

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಸಮೀಪದ ಸೋಮಹಳ್ಳಿ ರಸ್ತೆಯಲ್ಲಿ 4 ಜನರು 11 ಜಾನುವಾರು ಗಳನ್ನು ಹೊಡೆದುಕೊಂಡು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಬೆಗೂರು ಪೊಲೀಸರು ಜಾನುವಾರು ಗಳನ್ನು ರಕ್ಷಿಸಿ 4 ಅರೋಪಿತರ ವಿರುದ್ದ ಬೇಗೂರು ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ 2020 ರೀತ್ಯಾ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಯಿತು.

ನಾಲ್ಕು ಆರೋಪಿಗಳಲ್ಲಿ ಒಬ್ಬ ಆರೋಪಿಯು ತಪ್ಪಿಸಿಕೊಂಡಿರುತ್ತಾನೆ.ರಕ್ಷಿಸಿದ 11 ಜಾನುವಾರುಗಳನ್ನು ಮೈಸೂರಿನ ಪಿಂಜಿರಾಪೋಲ್ ಸೊಸೈಟಿ ಗೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ರೆಹಾನ ಬೇಗಂ, ಮುಖ್ಯ ಪೇದೆ ಶಂಭು,ಮತ್ತು ತಂಡ ಆರೋಪಿ ಗಳನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.

× Chat with us