ನವದೆಹಲಿ : ತಮಿಳುನಾಡಿಗೆ ಮತ್ತೆ 2,600 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶ ಪ್ರಶ್ನಿಸಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋದ ಕರ್ನಾಟಕಕ್ಕೆ ಭಾರೀ ಹಿನ್ನಡೆಯಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಎತ್ತಿಹಿಡಿರುವ ಪ್ರಾಧಿಕಾರ, ನವೆಂಬರ್ 23ರ ವರೆಗೆ ತಮಿಳುನಾಡಿಗೆ ನಿತ್ಯ 2600 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿದೆ.
ಇದರೊಂದಿಗೆ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೋಮವಾರ ಸೂಚನೆ ನೀಡಿತ್ತು.
ಸಭೆಯ ಬಳಿಕ ಮಾಹಿತಿ ನೀಡಿದ ಎಸಿಎಸ್ ರಾಕೇಶ್ ಸಿಂಗ್, ನವೆಂಬರ್ 23 ರ ತನಕ 2600 ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಆದೇಶಿಸಿದೆ. ತಮಿಳುನಾಡು 13,000 ಕ್ಯೂಸೆಕ್ ನೀರು ಬಿಡಲು ಆಗ್ರಹಿಸಿತು ಎಂದರು.
ಇವತ್ತು ಮೇಕೆದಾಟು ವಿಚಾರವಾಗಿ ಸಕಾರಾತ್ಮಕ ಬೆಳವಣಿಗೆ ಆಗಿದೆ. ಮೇಕೆದಾಟು ಯೋಜನೆ ಚರ್ಚೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಪ್ರಾಧಿಕಾರ ಒಪ್ಪಿದೆ. ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಭರವಸೆ ನೀಡಿದೆ. ಅದೇ ರೀತಿ ತಮಿಳುನಾಡು ಅವರು ಇಂಟರ್ ಲಿಂಕಿಂಗ್ ಯೋಜನೆ ಬಗ್ಗೆ ಚರ್ಚೆ ಮಾಡಲು ಮುಂದಾಗಿದೆ. ಈ ಯೋಜನೆಗೆ ಕರ್ನಾಟಕದ ಆಕ್ಷೇಪ ಇದೆ. ಮುಂದಿನ ಸಭೆಯಲ್ಲಿ ಈ ಎರಡೂ ಯೋಜನೆಗಳು ಚರ್ಚೆಗೆ ಬರಬಹುದು ಎಂದು ರಾಕೇಶ್ ಸಿಂಗ್ ಹೇಳಿದರು.
ಈ ಮಧ್ಯೆ, ಮಂಡ್ಯದಲ್ಲಿ ರೈತರ ಹೋರಾಟ ಮುಂದುವರಿದಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟ ಭರವಸೆ ನೀಡದ ಹೊರತು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದೆ.
ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ…
ಕುವೈತ್/ನವದೆಹಲಿ: 26ನೇ ಅರೇಬಿಯನ್ ಗಲ್ಫ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್ ದೊರೆ ಶೇಖ್ ಮಿಶಾಲ್…
371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ…
‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ…
ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…
ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…