ಹರಪನಹಳ್ಳಿ : ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಉಚ್ಚಂಗಿದುರ್ಗ ಕೋಟೆ ಕ್ಯಾಂಪ್‌ನ ಮದ್ಯಕೋಟೆ ಬಳಿ ಪುರಾತನ ಕಾಲದ ಬಾವಿ ಪತ್ತೆಯಾಗಿದೆ.
ಗ್ವಾಲಿಯರ್ ಖ್ಯಾತಿಯ ಕೋಟೆಗೆ ತೆರಳುವ ಮಾರ್ಗ ದುರಸ್ತಿ ಕಾರ್ಯ ನಡೆಸುವಾಗ ಏಕಾಏಕಿ ವಾಹನ ಸಹಿತ ಚಕ್ರಗಳು ಕುಸಿದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಾವಿಯು ೨೦ ಅಡಿಯಷ್ಟು ಅಳವಾಗಿದ್ದು, ಅಡ್ಡವಾಗಿ ಕಲ್ಲುಗಳು ಇವೆ. ಮೇಲ್ನೋಟಕ್ಕೆ ಬಾವಿಯಂತೆ ಗೋಚರವಾಗುತ್ತಿದ್ದರೂ ಅಗೆವು ಅಥವಾ ಟಂಕಸಾಲೆಯಂತೆ ಕಾಣುತ್ತಿದೆ.
ಇತಿಹಾಸದಲ್ಲಿ ಹಿಂದೆ ಕೋಟೆ ಬೀದಿಯಲ್ಲಿ ಹಿಂದೆ ಗ್ರಾಮವೊಂದಿತ್ತು. ರಾಜರು ಆಳ್ವಿಕೆ ಕಾಲದಲ್ಲಿ ಪ್ರತಿ ಸಮುದಾಯಕ್ಕೊಂದು ಕುಡಿಯುವ ನೀರಿನ ಬಾವಿ ಕೊರೆಯಲಾಗಿತ್ತು. ಒಂದೆರಡು ಬಾವಿಯನ್ನು ಹೊರತು ಪಡಿಸಿದರೆ, ಹಲವು ಬಾವಿಗಳು ಮುಚ್ಚಲ್ಪಟ್ಟಿವೆ. ಅವುಗಳ ಉತ್ಖನನದ ಕುರಿತು ಅಧ್ಯಯನ ನಡೆಯಬೇಕು ಎನ್ನುತ್ತಾರೆ ಸ್ಥಳೀಯರು.
ಕೋಟೆಯ ಸುತ್ತಲೂ ಹಲವು ದೇವಾಲಯಗಳು, ಬಾವಿಗಳು ಪುರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿ ನಶಿಸಿಹೋಗಿವೆ. ಹಿರಿಯರು ನೀಡಿದ ಬಳುವಳಿಯನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಅಽಕಾರಿಗಳು ಸಮಗ್ರ ಉತ್ಖನನ ಕೈಗೊಳ್ಳಬೇಕು ಎಂದು ಸ್ಥಳೀಯ ಮುಖಂಡ ಕುಲುಮಿ ಸುರೇಶ್ ಒತ್ತಾಯಿಸಿದರು.
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…