ರಾಜ್ಯ

ಸಾರಿಗೆ ಬಸ್‌ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ಬೆಲೆ ಹೆಚ್ಚಳಕ್ಕೆ ಒತ್ತಡ

ಬೆಂಗಳೂರು: ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಇದೀಗ ಆಟೋರಿಕ್ಷಾ ಪ್ರಯಾಣ ದರ ಕೂಡ ಏರಿಕೆ ಮಾಡಬೇಕೆಂದು ಕೆಲ ಆಟೋ ಚಾಲಕ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಮಾಡಿವೆ.

ಸಾರಿಗೆ ನಿಗಮಗಳ ನಷ್ಟ ತುಂಬಿಸಲು ರಾಜ್ಯ ಸರ್ಕಾರ ಬಸ್‌ ಟಿಕೆಟ್‌ ಪ್ರಯಾಣ ದರವನ್ನು 7 ರೂಪಾಯಿಂದ 115 ರವರೆಗೆ ದರ ಏರಿಕೆ ಮಾಡಿದೆ. ಈ ನಡುವೆ ಆಟೋರಿಕ್ಷಾ ಪ್ರಯಾಣದ ದರವನ್ನು ಏರಿಸುವಂತೆ ಮನವಿ ಮಾಡಿದ್ದಾರೆ.

ಆಟೋರಿಕ್ಷಾ ಪ್ರಯಾಣ ದರ 1 ಕಿಲೋ ಮೀಟರ್‌ಗೆ 5 ರೂಪಾಯಿ 2 ಕಿಲೋ ಮೀಟರ್‌ಗೆ 10 ರೂಪಾಯಿ ಏರಿಕೆ ಮಾಡುವಂತೆ ಮನವಿ ಮಾಡಿವೆ. ಸದ್ಯ ಆಟೋರಿಕ್ಷಾ ಪ್ರಯಾಣ ದರ ಕಿಲೋಮೀಟರ್‌ಗೆ 30 ರೂಪಾಯಿ ಇದೆ. ಇದೀಗ 40ಕ್ಕೆ ಏರಿಸುವಂತೆ ಕೋರಿವೆ.

ದರ ಏರಿಕೆ ಸಂಬಂಧ ಇದೇ ತಿಂಗಳ ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣದ ದರ ಏರಿಕೆ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಆಗಲಿದೆ.

ಈ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಯನಗರ ಆರ್‌ಟಿಓ ಕಚೇರಿಯ ಓರ್ವ ಅಧಿಕಾರಿ-ಕಾರ್ಯದರ್ಶಿ ಹಾಗೂ ಟ್ರಾಫಿಕ್‌ ಡಿಸಿಪಿ, ಗ್ರಾಹಕರ ವೇದಿಕೆಯಿಂದ ಓರ್ವ ಅಧಿಕಾರಿ ಕಮಿಟಿ ಸದಸ್ಯರು ಇರಲಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಅಸ್ಸಾದಿಯವರ ಸಾವು ದೇಶಕ್ಕೆ ತುಂಬಲಾರದ ನಷ್ಟ

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಚಾರಿಕ ಚಿಂತನೆಯ ಉಪನ್ಯಾಸವನ್ನು ನೀಡುವುದರ ಮೂಲಕ ಪ್ರಖ್ಯಾತಿ…

19 mins ago

ಸಮ್ಮೇಳನದಲ್ಲಿ ಕಂಡ ಮುಖಗಳು

ಕೀರ್ತಿ ಸಾಹಿತ್ಯ ಸಮ್ಮೇಳನದ ಮೂರೂ ದಿನಗಳು ಇವರನ್ನು ಭೇಟಿಯಾಗುತ್ತಲೇ ಇದ್ದೆ. ತಿಂದವರ ಊಟದ ಎಲೆಗಳನ್ನು ತೆಗೆಯುತ್ತಾ, ತಮಿಳು ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿದ್ದರು.…

42 mins ago

ವಿಕಸಿತ ಭಾರತದ ಕನಸು ನನಸಾಗಬೇಕಾದರೆ….

ಪ್ರೊ. ಆರ್‌.ಎಂ. ಚಿಂತಾಮಣಿ ನಾವು ಸ್ವಾತಂತ್ರ್ಯ ಪಡೆದು ನೂರು ವರ್ಷಗಳಾಗುವ ಹೊತ್ತಿಗೆ ಭಾರತ ವಿಕಸಿತ ದೇಶವಾಗುತ್ತದೆ ಎಂದು ನಮ್ಮ ಪ್ರಧಾನಿಗಳು…

51 mins ago

ಚಳಿಗಾಲ; ಮಾನವ – ಹುಲಿ ಸಂಘರ್ಷ ಕಾಲ

ಪ್ರಶಾಂತ್.‌ ಎಸ್ ಮೈಸೂರು: ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹುಲಿ-ಮಾನವ ಸಂಘರ್ಷ ಹೆಚ್ಚಾಗುತ್ತದೆ. ಇದು ಅಚ್ಚರಿಯಾದರೂ ಸತ್ಯ. ನವೆಂಬರ್‌ನಿಂದ ಪ್ರಾರಂಭವಾಗಿ ಫೆಬ್ರವರಿ ತಿಂಗಳ…

2 hours ago

ಎಚ್ಎಂಪಿವಿ ಬಗ್ಗೆ ಆತಂಕ ಬೇಡ, ಇರಲಿ ಎಚ್ಚರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಎಚ್‌ಎಂಪಿವಿ ವೈರಸ್‌ನ ಎರಡು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಿದೆ…

12 hours ago

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ರಾಜೀನಾಮೆ ಘೋಷಣೆ

ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ…

12 hours ago