ಹುಬ್ಬಳ್ಳಿ: ನನ್ನ ಮೇಲೆ ಯಾವುದೇ ಕೇಸ್ ಇರಲಿಲ್ಲ. ಎಲ್ಲಾ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡ ಬಳಿಕವೇ ಬೆಳಗಾವಿಗೆ ಹೋಗಿದ್ದೆ. ಬಂಧನಕ್ಕೀಡಾಗಿದ್ದ ದಿನ ನಾನು ಬೆಳಿಗ್ಗೆ ಬೆಳಗಾವಿಯಿಂದ ಬಂದಿದ್ದೆ. ನಿಮ್ಮ ಜೊತೆ ಮಾತನಾಡಬೇಕು ಎಂದು ಹೇಳಿ, ಹಾಗೆ ಕರೆದುಕೊಂಡು ಹೋದವರು ಸೀದಾ ಜೈಲ್‌ಗೆ ಹಾಕಿದ್ರು. ಇದು ಇಂದು ಹುಬ್ಬಳ್ಳಿ ಕಾರಾಗೃಹದಿಂದ ಬಿಡುಗಡೆಗೊಂಡ ಕರಸೇವಕ ಶ್ರೀಕಾಂತ್ ಪೂಜಾರಿ ಅವರ ಮೊಲದ ಪ್ರತಿಕ್ರಿಯೆಯಾಗಿದೆ.
ಬಿಡುಗಡೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಮೇಲೆ ಯಾವುದೇ ಪ್ರಕರಣ ಬಾಕಿ ಇರಲಿಲ್ಲ, ನನ್ನ ಮೇಲೆ ಹಿಂದೆ ಇದ್ದ ಎಲ್ಲಾ ಪ್ರಕರಣಗಳು ಇತ್ಯರ್ಥವಾಗಿದ್ದವು. ಎಲ್ಲಾ ಪ್ರಕರಣಗಳನ್ನು ಮರೆತು ಜೀವನ ನಡೆಸುತ್ತಿದ್ದ ನನ್ನನ್ನು ಸುಮ್ಮನೇ ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.
ನನ್ನನ್ನು ಬಂಧಿಸಿದ ದಿನ ನಾನು ಬೆಳಗಾವಿಯಿಂದ ಹುಬ್ಬಳ್ಳಿಗೆ ಬಂದ ಸಮಯದಲ್ಲಿ ಬಸ್ ನಿಲ್ದಾಣದಲ್ಲಿಯೇ ಪೊಲೀಸರು ನನ್ನ ತಡೆದು, ನಿಮ್ಮ ಜೊತೆಯಲ್ಲಿ ಮಾತನಾಡವುದಿದೆ ಎಂದು ಕರೆದರು. ನಂತರ ಬರುವುದಾಗಿ ತಿಳಿಸಿದರು ಸಹಾ ನಾವೇ ನಿಮ್ಮನ್ನು ಮನೆಗೆ ಬಿಡುವುದಾಗಿ ಹೇಳಿ ಜೀಪ್ ಹತ್ತಿಸಿಕೊಂಡು ಶಹರ ಪೊಲೀಸ್ ಠಾಣೆಗೆ ಕರೆದೊಯ್ದರು.
ನಾನು ಇಲ್ಲಿಗೆ ಏಕೆ ಕರೆ ತಂದಿದ್ದೀರಿ ಎಂದು ಕೇಳಿದ್ದಕ್ಕೆ, ಒಳಗೆ ನಡೆಯಿರಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು, ಇದರ ಬಗ್ಗೆ ಚರ್ಚೆ ನಡೆಸಬೇಕು ಎಂದು ಕರೆದೊಯ್ದು ನನ್ನನ್ನು ಬಂಧಿಸಿದರು ಎಂದು ಶ್ರೀಕಾಂತ್ ಪೂಜಾರಿ ಸವಿವರವಾಗಿ ಮಾಹಿತಿ ನೀಡಿದರು.
ಇನ್ನೂ ಜೈಲಿನಲ್ಲಿದ್ದಾಗ ಪೂಜಾರಿ ಪರ ವಿವಿಧ ಸಂಘ ಸಂಸ್ಥೆಗಳು ಹೋರಾಟ ಮಾಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ಈ ಬಗ್ಗೆ ಸ್ವಲ್ಪ-ಸ್ವಲ್ಪ ಮಾಹಿತಿಯಿದೆ. ನನ್ನ ಪರವಾಗಿ ಧನಿಯೆತ್ತಿದ ಬಿಜೆಪಿ ನಾಯಕರು, ಕಾರ್ಯಕ್ರತರು ಮತ್ತು ಹಿಂದೂಪರ ಸಂಘಟನೆಗಳಿಗೆ ಧನ್ಯವಾಗಳನ್ನು ಅರ್ಪಿಸಿದರು.
ಇನ್ನು ಇದೇ ವೇಳೆ ಜನವರಿ ೨೨ ರಿಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಖಚಿತವಾಗಿಯೂ ಹೋಗುತ್ತೇನೆ, ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಬೆಂಗಳೂರು: ನನ್ನ ವಿರುದ್ಧ 17 ಕೇಸ್ ಇದೆ. ಇನ್ನೂ ಹಾಕೋಕೆ ಹೇಳಿ ಆದರೆ ದಾರಿ ತಪ್ಪಿಸಬೇಡಿ ಎಂದು ಮಾಜಿ ಸಂಸದ…
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಪರಮೇಶ್ವರ್…
ಕೇರಳ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಅಕ್ರಮ ಒತ್ತುವರಿ ತೆರವು ಸಂಬಂಧಪಟ್ಟಂತೆ ಅನಪೇಕ್ಷಣೀಯವಾದಂತಹ ಹೇಳಿಕೆ ನೀಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ…
ಮೈಸೂರು: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ನ್ಯೂ ಇಯರ್ ಆಚರಿಸಲು ಪ್ರವಾಸಿಗರು ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ಅರಮನೆಗೆ…
ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್…
ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್…