ಅರೋಪಿಯ ಅರೆಸ್ಟ್ ಮಾಡಲು ತೆರಳಿದ್ದ ಯಶವಂತಪುರ ಠಾಣೆ ಸಬ್​​ಇನ್ಸ್​​ಪೆಕ್ಟರ್​​ಗೆ ಚಾಕು ಇರಿತ‌

ಬೆಂಗಳೂರು: ಅರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದ ಪೊಲೀಸ್​ ಸಬ್​​ಇನ್ಸ್​​ಪೆಕ್ಟರ್​​ಗೆ (ಪಿಎಸ್​ಐ) ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಯಶವಂತಪುರ ಠಾಣೆ ಪಿಎಸ್​ಐ ವಿನೋದ್ ರಾಥೋಡ್ ಚಾಕು ಇರಿತ‌ಕ್ಕೆ ಒಳಗಾದ ಅಧಿಕಾರಿ. ಪಿಎಸ್​ಐ ವಿನೋದ್ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಿಎಸ್​ಐ ವಿನೋದ್​ಗೆ ಚಾಕು ಇರಿದು ಅರೋಪಿ ಪರಾರಿಯಾಗಿದ್ದಾನೆ. ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

× Chat with us