ರಾಜ್ಯ

ಜಾಮೀನು ಪ್ರಕ್ರಿಯೆ ಮುಗಿಸಲು ಸೆಷನ್ಸ್‌ ಕೋರ್ಟ್‌ಗೆ ಹಾಜರಾದ ಆರೋಪಿ ದರ್ಶನ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಹಿನ್ನೆಲೆಯಲ್ಲಿ ಆರೋಪಿ ದರ್ಶನ್‌ ಬಿಜಿಎಸ್‌ ಆಸ್ಪತ್ರೆಯಿಂದ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಸೆಷನ್ಸ್‌ ಕೋರ್ಟ್‌ಗೆ ಹಾಜರಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌.13 ರಂದು ಆರೋಪಿ ದರ್ಶನ್‌ಗೆ ಹೈಕೋರ್ಟ್‌ ಷರತ್ತು ಬದ್ಧ ರೆಗ್ಯುಲರ್‌ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆದೇಶ ಹೊರಡಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 57ನೇ ಸಿಸಿಎಚ್‌ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.

ಈ ಕುರಿತು ಇಂದು(ಡಿಸೆಂಬರ್‌.16) 57ನೇ ಸಿಸಿಎಚ್‌ ನ್ಯಾಯಾಲಯದ ನ್ಯಾಯಾಧೀಶರಾದ ಜೈಶಂಕರ್‌ ಜಾಮೀನು ಬಾಂಡ್‌ ಕುರಿತು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿ ದರ್ಶನ್‌ 1 ಲಕ್ಷ ಜಾಮೀನು ಬಾಂಡ್‌ಗೆ ಸಹಿ ಹಾಕಿದ್ದಾರೆ. ಇದೇ ವೇಳೆ ಶ್ಯೂರಿಟಿಯಾಗಿ ಈ ಹಿಂದೆ ಮಧ್ಯಂತರ ಜಾಮೀನಿಗಾಗಿ ಸಹಿ ಹಾಕಿದ್ದ ದರ್ಶನ್‌ ಸಹೋದರ ದಿನಕರ್‌ ತೂಗುದೀಪ ಹಾಗೂ ಆಪ್ತ ಧನ್ವೀರ್‌ ಅವರೇ ಇಂದು ಸಹ ಶ್ಯೂರಿಟಿದಾರರಾಗಿ ಸಹಿ ಹಾಕಿದ್ದಾರೆ.

ಇನ್ನು ಈ ವೇಳೆ ನ್ಯಾಯಾಧೀಶರಿಗೆ ದರ್ಶನ್‌ ಪರ ವಕೀಲ ಸುನೀಲ್‌ ಕುಮಾರ್‌  ದರ್ಶನ್‌ಗೆ ಪಾಸ್‌ಪೋರ್ಟ್‌ ಹಿಂದಿರುಗಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಪಾಸ್‌ಪೋರ್ಟ್‌ ಹಿಂತಿರುಗಿಸುವಂತೆ ನ್ಯಾಯಾಧೀಶರು ಸೂಚನೆ ಹೊರಡಿಸಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌ ಕದನ ವಿರಾಮ ಘೋಷಣೆ: ಇರಾನ್‌ ಖಡಕ್‌ ತಿರುಗೇಟು

ಟೆಹರಾನ್: ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೇರಿಕಾ ಈಗ ಕದನ ವಿರಾಮ ಘೋಷಣೆ ಮಾಡಿದ ಎಂದು ಇರಾನ್‌ ತಿರುಗೇಟು ನೀಡಿದೆ.…

7 mins ago

ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು

ಮಂಡ್ಯ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.…

13 mins ago

ಕೆಪಿಎಸ್‌ಸಿ ಬದಲಿಗೆ ಕೆಇಎ ಮೂಲಕ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ನೇಮಕಾತಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಕಳೆದ ವರ್ಷ ಕೃಷಿ ಇಲಾಖೆಯ ಸಮಾರು 945 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು…

29 mins ago

ಗುಂಡ್ಲುಪೇಟೆ: ಬೇರಂಬಾಡಿ ಬಳಿ ಅರಣ್ಯ ಇಲಾಖೆಯಿಂದ ಹುಲಿ ಸೆರೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ತಾಲ್ಲೂಕಿನ ಬೇರಂಬಾಡಿ ಗ್ರಾಮದ ಜಮೀನೊಂದರಲ್ಲಿ ಉಪಟಳ ನೀಡುತಿದ್ದ ಹುಲಿಯನ್ನು ಅರಣ್ಯ ಇಲಾಖೆ…

42 mins ago

ಮಂಡ್ಯ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಗ್ರಾಮಸ್ಥರಿಂದ ದೂರು

ಮಂಡ್ಯ: ಯುಗಾದಿ ಹಬ್ಬದ ದಿನ ಪಚ್ಚಿ ಆಟವಾಡುತ್ತಿದ್ದ ನೂರಾರು ಮಂದಿ ಮೇಲೆ ದಾಳಿ ನಡೆಸಿದ್ದೂ ಅಲ್ಲದೆ ಯುವಕನ ಮೇಲೆ ಮಾರಣಾಂತಿಕ…

55 mins ago

ನಂಜನಗೂಡಿನಲ್ಲಿ 46 ಮರಗಳ ಹನನ: ಯಶಸ್ವಿಯಾಗಿ ನಡೆದ ಪ್ರತಿಭಟನೆ

ನಂಜನಗೂಡು: ದಿನಾಂಕ 7-3-26 ರಂದು ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ ದಂಡೆಯ ಮೇಲೆ 46 ಬೃಹತ್ ಮರಗಳನ್ನು…

58 mins ago