2ನೇ ದಿನವೂ ಮುಂದುವರೆದ ಎಸಿಬಿ ದಾಳಿ

ಮಂಡ್ಯ: ಜಿಲ್ಲೆಯಲ್ಲಿ 2ನೇ ದಿನವಾದ ಗುರುವಾರವೂ ಎಸಿಬಿ ಅಧಿಕಾರಿಗಳ ಬೇಟೆ ಮುಂದುವರಿದಿದೆ. ಕೆಆರ್‌ಪೇಟೆ ಎಚ್‌ಎಲ್‌ಬಿಸಿ ಇಇ ಕೆ.ಶ್ರೀನಿವಾಸ್ ಮನೆಯ ಮೇಲೆ ನಡೆದ ದಾಳಿಯ ಪರಿಶೀಲನೆ ಗುರುವಾರವೂ ನಡೆಯಿತು.

ಬುಧವಾಋ ಮೈಸೂರಿನ ನಿವಾಸ, ನಂಜನಗೂಡಿನ ಫಾರಂ ಹೌಸ್ ಹಾಗೂ ಕೆಆರ್ ಪೇಟೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ದಾಳಿ ವೇಳೆ ನಗದು, ಚಿನ್ನ, ಬೆಳ್ಳಿ, ಜಮೀನು, ನಿವೇಶನದ ಕಡತಗಳು ಪತ್ತೆಯಾಗಿವೆ. ಶ್ರೀನಿವಾಸ್ ಕೆನರಾ ಬ್ಯಾಂಕ್‌ನಲ್ಲಿ ಎರಡು ಲಾಕರ್ ಹೊಂದಿದ್ದಾರೆ. ಮೈಸೂರಿನ ಕೆನರಾ ಬ್ಯಾಂಕ್‌ವೊಂದರಲ್ಲಿ ಇರುವ ಲಾಕರ್ ತೆರೆದು ಅಧಿಕಾರಿಗಳು ಪರಿಶೀಲನೆ ನಡೆಸಿದರು.

× Chat with us