ಬೆಂಗಳೂರು: ಲಂಡನ್ನ ಸಿಟಿ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡಿಗ ಅಧಿಶ್ ಆರ್. ವಾಲಿ ಅವರು ಕನ್ನಡ ಧ್ವಜ ಹಾರಿಸಿ ಸಂಭ್ರಮಿಸಿದ್ದಾರೆ.
ವಾಲಿ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಡಿಯೊವನ್ನೂ ಹಂಚಿಕೊಂಡಿದ್ದಾರೆ. ಲಂಡನ್ನ ಸಿಟಿ ವಿಶ್ವವಿದ್ಯಾಲಯದ ಬೆಯೆಸ್ ಬ್ಯುಸಿನೆಸ್ ಸ್ಕೂಲ್ನಲ್ಲಿ ವ್ಯಾವಹಾರಿಕ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದೇನೆ. ಇಂಗ್ಲೆಂಡ್ನ ಲಂಡನ್ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ ಎಂದು ಅವರು ಹೇಳಿಕೊಂಡಿದ್ದಾರೆ.
I graduated with MS in Management from City University of London – Bayes Business School (Cass). A moment of pride as I unfurled our Karnataka state flag during the ceremony in London, UK.
– ARW #ARW😎 #karnataka #bidar #kannada #kannadiga #london #uk #England @bidarupdates pic.twitter.com/Hofb01W0WX— Adhish R. Wali (@AdhishWali) January 21, 2023
ವಾಲಿ ಹಂಚಿಕೊಂಡಿರುವ ವಿಡಿಯೊಗೆ 8 ಸಾವಿರಕ್ಕೂ ಹೆಚ್ಚು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ರೀಶೇರ್ ಮಾಡಿಕೊಂಡಿದ್ದಾರೆ.
ಇದೇ ವಿಡಿಯೊವನ್ನು ಕರ್ನಾಟಕ ಕಾಂಗ್ರೆಸ್ ಸಹ ಹಂಚಿಕೊಂಡಿದ್ದು, ‘ಎಲ್ಲಾದರೂ ಇರು, ಎಂತಾದರು ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಮಾತಿನಂತೆ ದೂರದ ಲಂಡನ್ನಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡದ ಬಾವುಟವನ್ನು ಹೆಮ್ಮೆಯಿಂದ ಹಾರಿಸಿದ ಅಧಿಶ್ ವಾಲಿ ಅವರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು. ಶುಭವಾಗಲಿ ನಿಮಗೆ’ ಎಂದು ಹಾರೈಸಿದೆ.