ಸಚಿವರೊಬ್ಬರ ಎನ್ವಲಪ್ ಕವರ್, ಲೆಟರ್ಹೆಡ್, ನೋಟು ಎಣಿಕೆ ಯಂತ್ರ ಪತ್ತೆ
ಬೆಂಗಳೂರು: ಮತದಾರರ ಗುರುತಿನ ಚೀಟಿ ಪರಿಷ್ಕರಣೆ ನೆಪದಲ್ಲಿ ವೈಯಕ್ತಿಕ ವಿವರಗಳನ್ನು ಕಲೆ ಹಾಕಲಾಗಿದೆ ಎಂಬ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಪ್ರಕರಣದಲ್ಲಿ ಪ್ರಭಾವಿ ಸಚಿವರೊಬ್ಬರಿಗೆ ಸೇರಿದ ಚೆಕ್ ಮತ್ತು ಎನ್ವಲಪ್ ಕವರ್ ಪತ್ತೆಯಾಗಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆಮಾಡಿದೆ.
ಮಲ್ಲೇಶ್ವರಂನಲ್ಲಿರುವ ಚಿಲುಮೆ ಸಂಸ್ಥೆಯಲ್ಲಿ ಬೆಂಗಳೂರು ಪ್ರತಿನಿಧಿಸುವ ಪ್ರಭಾವಿ ಸಚಿವರಿಗೆ ಸೇರಿದ ಖಾಲಿ ಚೆಕ್ಗಳು, ಎನ್ವಲಪ್ ಕವರ್, ಕೆಲವು ಮತದಾರರ ಗುರುತಿನಚೀಟಿ, ಲೆಟರ್ ಹೆಡ್ಗಳು ಪತ್ತೆಯಾಗಿವೆ. ಅಲ್ಲದೆ, ಕಚೇರಿಯಲ್ಲಿ ನೋಟುಗಳನ್ನು ಎಣಿಕೆ ಮೆಷಿನ್ ಕೂಡ ಪತ್ತೆಯಾಗಿರುವುದು ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಸಂಸ್ಥೆಯಲ್ಲಿ ಚುನಾವಣಾ ಸಮನ್ವಯ ಅಧಿ ಕಾರಿ ಎಂದು ಕೆಲವರು ಕರ್ತವ್ಯ ನಿರ್ವಹಿಸು ತ್ತಿದ್ದು, ೫೦ ಗುರುತಿನ ಚೀಟಿ, ಬಿಲ್ಗಳು, ಸಿಸಿಟಿವಿ, ಕಂಪ್ಯೂಟರ್, ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಪೆನ್ಡ್ರೈವ್, ಸಿಡಿ, ಡಿವಿಆರ್ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಲುಮೆ ಸಂಸ್ಥೆಯಲ್ಲಿ ಯಾವ ಕಾರಣಕ್ಕಾಗಿ ಇವೆಲ್ಲವನ್ನೂ ಇಟ್ಟುಕೊಳ್ಳಲಾಯಿತು ಎಂಬ ಪ್ರಶ್ನೆ ಎದುರಾಗಿದೆ.
ಚಿಲುಮೆ ಸಂಸ್ಥೆಯ ೨೦ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಗೌಪ್ಯ ಮಾಹಿತಿಯನ್ನು ನೀಡುವುದಾಗಿ ರಾಜಕಾರಣಿ ಗಳಿಗೆ ಗಾಳ ಹಾಕಿರುವುದು ಬೆಳಕಿಗೆ ಬಂದಿದೆ. ಈ ಸಂಸ್ಥೆಯ ರಾಜಕಾರಣಿಗಳಿಗೆ ನಿರಂತರವಾಗಿ ಇ-ಮೇಲ್ ಮಾಡಿರುವುದು ಬಹಿರಂಗವಾಗಿದೆ.
ತನಿಖೆಗೆ ಚುನಾವಣಾ ಆಯೋಗ ಸೂಚನೆ
ಇನ್ನು ಚಿಲುಮೆ ಸಂಸ್ಥೆಯ ಅಕ್ರಮದ ಬಗ್ಗೆ ಈಗಾಗಲೇ ತನಿಖೆಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.
ನ್ಯಾಯಾಂಗ ತನಿಖೆ ಇಲ್ಲ: ಸಿಎಂ
ಬೆಂಗಳೂರಿನ ‘ಚಿಲುಮೆ’ ಪ್ರಕರಣದ ಬಗ್ಗೆ ಉಚ್ಚ ನ್ಯಾಾಂಲಯದ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೇಡಿಕೆಯನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ, ‘ನಮ್ಮ ಪೊಲೀಸರೇ ತನಿಖೆ ಮಾಡುತ್ತಿದ್ದಾರೆ. ಅವರಿಂದಲೇ ತನಿಖೆ ನಡೆಯಲಿದೆ ಎಂದರು.
ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿವಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಎಲ್ಲದಕ್ಕೂ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು ಎಂದು ಹೇಳುತ್ತಾರೆ. ಅವರು ಅಧಿಕಾರದಲ್ಲಿದ್ದಾಗ ಬಿಡಿಎ ಪ್ರಕರಣದ ತನಿಖೆಯನ್ನು ನ್ಯಾಯಾಧೀಶರಿಗೆ ವಹಿಸಲಾಗಿತ್ತು. ಅವರು ಹಗರಣದಿಂದ ಪಾರಾಗಲು ಆ ವಿಚಾರಣೆ ಅನುಕೂಲವಾಯಿತು ಅಷ್ಟೇ ಎಂದರು.
ಪೊಲೀಸ್ ತನಿಖೆಯೇ ಬಹಳ ತ್ವರಿತಗತಿಯಲ್ಲಿ ನಡೆುುಂತ್ತಿದೆ. ಚಿಲುಮೆ ಸಂಸ್ಥೆ ವಿರುದ್ಧ ಗುರುವಾರ ದೂರು ದಾಖಲಾಗಿದ್ದು, ಶುಕ್ರವಾರ ಕೆಲವರ ಬಂಧನವಾಗಿದೆ. ಅಪರಾಧದ ವಿರುದ್ಧ ತೀವ್ರಗತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗ ನಿಯಮಿತವಾಗಿ ಕೈಗೊಳ್ಳುವ ಪ್ರಕ್ರಿಯೆ. ಅದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಕಾಂಗ್ರೆಸ್ನವರು ಸೋಲುವ ಭೀತಿಯಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.