ರಾಜ್ಯ

ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 981 ಮಂದಿ ಅನ್ನದಾತರ ಆತ್ಮಹತ್ಯೆ

ಬೆಂಗಳೂರು: ಉಚಿತ ವಿದ್ಯುತ್, ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ, ಕೃಷಿ, ತೋಟಗಾರಿಕೆ, ರೈಷೆ ಹಾಗೂ ಪಶುಪಾಲನೆ ಇಲಾಖೆಗಳ ಮೂಲಕ ಸಹಾಯಧನ, ರಿಯಾಯಿತಿ ನೀಡುವ ಹಲವು ಯೋಜನೆಗಳು ಜಾರಿಯಲ್ಲಿದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ.

ಅಲ್ಲದೆ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ನೆರವಿಗೆ ಧಾವಿಸಿದೆ. ಆದರೂ ಕಳೆದೊಂದು ವರ್ಷದ ಅವಧಿಯಲ್ಲೇ ರಾಜ್ಯದಲ್ಲಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಬಾಧೆ, ಬೆಳೆನಷ್ಟ ಮೊದಲಾದ ಕಾರಣಗಳಿಗೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಭ್ಯವಿರುವ ಮಾಹಿತಿ ಪ್ರಕಾರ 2024ರ ಏಪ್ರಿಲ್ ಒಂದರಿಂದ ಮೇ 2025ರವರೆಗೆ ರಾಜ್ಯದಲ್ಲಿ 981 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಸರ್ಕಾರದಿಂದ 807 ಪ್ರಕರಣಗಳಲ್ಲಿ ಮೃತ ರೈತರ ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ.

138 ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಿರಸ್ಕರಿಸಿದ್ದು, ಬೇರೆ ಕಾರಣಗಳಿಗೆ ಆತ್ಮಹತ್ಯೆಮಾಡಿಕೊಂಡ ಪ್ರಕರಣಗಳೆಂದು ಪರಿಗಣಿಸಲಾಗಿದೆ. 825 ಪ್ರಕರಣಗಳನ್ನು ಅರ್ಹವೆಂದು ಪರಿಗಣಿಸಲಾಗಿದೆ. ಇನ್ನೂ 18 ಪ್ರಕರಣಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕಿದೆ.

ಈ ಅವಧಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಹಾವೇರಿ ಜಿಲ್ಲೆಯಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 21 ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಹಾಗೂ ಆರು ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾವೇರಿ -128, ಕಲಬುರಗಿ- 82, ಮೈಸೂರು-73, ಧಾರವಾಡ-72, ಬೆಳಗಾವಿ-71, ಹಾಸನ- 47, ಬೀದರ್-45, ಶಿವಮೊಗ್ಗ-45, ಗದಗ-44, ಯಾದಗಿರಿ-43, ದಾವಣಗೆರೆ-42, ಚಿಕ್ಕಮಗಳೂರು-39, ಮಂಡ್ಯ-39, ಬಾಗಲಕೋಟೆ-35, ಚಿತ್ರದುರ್ಗ-34, ರಾಯಚೂರು-26, ಕೊಪ್ಪಳ-25, ವಿಜಯಪುರ-23, ವಿಜಯನಗರ, ತುಮಕೂರು-17, ಉತ್ತರ ಕನ್ನಡ-14 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ದಾಖಲೆ: ಏನದು ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಅತಿ ಹೆಚ್ಚು ಕಾಲ ಸರ್ಕಾರದ ಮುಖ್ಯಸ್ಥರಾದ ದಾಖಲೆ ಬರೆದಿದ್ದಾರೆ. ಈ ಮೂಲಕ ಸಿಕ್ಕಿಂನ…

50 mins ago

ಏಪ್ರಿಲ್.‌1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭೇಟಿ

ತುಮಕೂರು: ಏಪ್ರಿಲ್.‌1ರಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು…

1 hour ago

ರಂಗೇರಿದ ಉಪಚುನಾವಣೆ ಕಣ: ಸಮರ್ಥ್‌ ಮಲ್ಲಿಕಾರ್ಜುನ್‌, ಉಮೇಶ್‌ ಮೇಟಿಗೆ ಕಾಂಗ್ರೆಸ್‌ ಟಿಕೆಟ್‌

ಬೆಂಗಳೂರು: ಏಪ್ರಿಲ್‌.9ರಂದು ನಡೆಯಲಿರುವ ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಬಾಗಲಕೋಟೆ…

1 hour ago

ಅಮೇರಿಕಾದ ಅಕ್ಕ ವಿಶ್ವ ಕನ್ನಡ ಸಮ್ಮೇಳನ ರಾಯಭಾರಿಯಾಗಿ ನಟ ರಿಷಬ್‌ ಶೆಟ್ಟಿ ಆಯ್ಕೆ

ಬೆಂಗಳೂರು: ಅಮೇರಿಕಾದಲ್ಲಿರುವ ಕನ್ನಡಿಗರ ಅತಿ ದೊಡ್ಡ ಸಾಂಸ್ಕೃತಿಕ ಸಂಭ್ರಮವಾಗಿರುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ರಾಯಭಾರಿಯಾಗಿ ನಟ ರಿಷಬ್‌ ಶೆಟ್ಟಿ…

2 hours ago

ಹಾರ್ಮುಜ್‌ ಜಲಸಂಧಿ ಸಂಪೂರ್ಣ ಓಪನ್‌ ಮಾಡಿ: ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ ಟೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್:‌ ಹಾರ್ಮುಜ್‌ ಜಲಸಂಧಿಯನ್ನು 48 ಗಂಟೆಯೊಳಗೆ ಸಂಪೂರ್ಣ ಓಪನ್‌ ಮಾಡಬೇಕು ಎಂದು ಇರಾನ್‌ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗಡುವು…

2 hours ago

ಓದುಗರ ಪತ್ರ: ನಿಲ್ದಾಣದಲ್ಲಿ ಬಸ್ ನಿಲುಗಡೆಯಾಗಲಿ

ಮೈಸೂರಿನ ಶಾರದಾದೇವಿ ನಗರದ ಸರ್ಕಲ್‌ನಲ್ಲಿ ಒಂದು ವರ್ಷದ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆದರೆ…

3 hours ago