ಮೈಸೂರು: ಸಾಂಸ್ಕೃತಿಕನಗರಿ ಮೈಸೂರಿನಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿರುವ ಸಂದರ್ಭದಲ್ಲಿೆುೀಂ ಜನರಿಗೆ ಮನರಂಜನೆಯ ಜತೆಗೆ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾ ಬಂದಿರುವ ೯೩.೫ ರೆಡ್ ಎಫ್.ಎಂ.ನವರ ರೆಡ್ ಅಂಬಾರಿ ಲೈವ್ ಸ್ಟುಡಿೋಂ ಆನ್ವ್ಹೀಲ್ಸ್ಗೆ ಸೋಮವಾರ ಚಾಲನೆ ನೀಡಲಾಯಿತು.
ರೆಡ್ ಅಂಬಾರಿ ಸೀಸನ್-೧೦ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ರಮೇಶ್ ನರಸಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಚಿತ್ರನಟಿ ಅನು ಪ್ರಭಾಕರ್, ನಟಿ ಶ್ರುತಿ ನಾಯ್ಡು, ‘ಆಂದೋಲನ’ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ, ನಟ ಶ್ರೀ, ಉರಗ ತಜ್ಞ ಸ್ನೇಕ್ ಶ್ಯಾಮ್ ಮತ್ತಿತರರು ಪಾಲ್ಗೊಂಡಿದ್ದರು.
ಕಳೆದ ಹತ್ತು ವರ್ಷಗಳಿಂದ ರೆಡ್ ಎಫ್ಎಂ ನವರು ಅರಮನೆ ನಗರಿಯ ನವರಾತ್ರಿಯ ಸಂಭ್ರಮವನ್ನು ಚಲಿಸುವ ವಾಹನದ ಮೂಲಕ ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಜನ ಸ್ಪಂದನೆಗಾಗಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ರೆಡ್ ಅಂಬಾರಿ ಸಂಚರಿಸಲಿದೆ.