ರಾಜ್ಯ

ಕೆಎಸ್‌ಆರ್‌ಟಿಸಿ ಅಶ್ವಮೇಧ ಓಟಕ್ಕೆ 9 ಬಹುಮಾನ

ಬೆಂಗಳೂರು: ರಾಜ್ಯದ ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಗೆ 9 ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಿದೆ.

6 ಆಡ್‌ವರ್ಲ್ಡ್‌ ಶೊಡೌನ್, ಚಿನ್ನದ ಪ್ರಶಸ್ತಿ, 2 ಗ್ರೊವ್‌ ಕೇರ್‌ ಇಂಡಿಯಾ ಹಾಗೂ 1 ಪಿಆರ್‌ಎಸ್‌ಐ ರಾಷ್ಟ್ರೀಯ ಪ್ರಶಸ್ತಿ 2024 ಸಿಕ್ಕಿದೆ.

6 ಆಡ್‌ವರ್ಲ್ಡ್‌ ಶೊಡೌನ್
1. ಅಶ್ವಮೇಧ ಕ್ಲಾಸಿಕ್‌ ಬಸ್ಸುಗಳ ಪರಿಚಯ-ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ
2. ಅಂಬಾರಿ ಉತ್ಸವ ಬಸ್‌ ಅತ್ಯುತ್ತಮ ಬ್ರಾಂಡ್‌ ಅನುಭವ
3. ಅಶ್ವಮೇಧ ಕ್ಲಾಸಿಕ್‌ ಬಸ್ಸುಗಳ-ಅತ್ಯುತ್ತಮ ಕಾರ್ಪೊರೇಟ್‌ ಸಂವಹನ ಹಾಗೂ ನಿರ್ವಹಣೆ
4.ಪಲ್ಲಕ್ಕಿ ಬಸ್ಸುಗಳ- ಅತ್ಯುತ್ತಮ ಗ್ರಾಹಕ ಸ್ವೀಕೃತ
5.ಪ್ರತಿಷ್ಠಿತ ಬಸ್ಸು ಸೇವೆಗಳ ಬ್ರಾಂಡಿಂಗ್-‌ ಅತ್ಯುತ್ತಮ ಸಾರ್ವಜನಿಕ ಸಂಪರ್ಕ
6. ಅಶ್ವಮೇಧ ಕ್ಲಾಸಿಕ್‌ ಬಸ್ಸುಗಳು-ವರ್ಷದ ಅತ್ಯುತ್ತಮ ಬ್ರ್ಯಾಂಡ್‌

ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳು ಅನುಷ್ಟಾನಕ್ಕಾಗಿ ಗ್ರೋ ಕೇರ್‌ ಇಂಡಿಯಾ ಪ್ರಶಸ್ತಿ ಎರಡು ವಿಭಾಗದಲ್ಲಿ ಪಡೆದಿದೆ. ಪಿಆರ್ಎಸ್‌ಐ ರಾಷ್ಟ್ರೀಯ ಪ್ರಶಸ್ತಿಯನ್ನು ನಿಗಮಕ್ಕೆ ಕಾರ್ಪೋರೇಟ್‌ ಚಿತ್ರ ವಿಭಾಗದಲ್ಲಿ ಲಭಿಸಿರುತ್ತದೆ.

ನಿಗಮಕ್ಕೆ ಆಡ್‌ವರ್ಲ್ಡ್‌ ಪ್ರಶಸ್ತಿಗಳನ್ನು ಹೊಸದಿಲ್ಲಿಯ ಗ್ರೋ ಕೇರ್‌ ಇಂಡಿಯಾ ಪ್ರಶಸ್ತಿಗಳನ್ನು ಗೋವಾದಲ್ಲಿ ಹಾಗೂ ಪಿಆರ್‌ಎಸ್‌ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಪ್ರದಾನ ಮಾಡಲಾಯಿತು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಎಲ್ಲಾ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ಇಂಧನ ಇಲಾಖೆ ಸಿಬ್ಬಂದಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಸೌಲಭ್ಯವನ್ನು ಎಲ್ಲಾ ವಿದ್ಯುತ್…

4 mins ago

ಸರ್ಕಾರ ತೊಲಗುವವರೆಗೂ ಕರ್ನಾಟಕದ ಏಳಿಗೆ ಸಾಧ್ಯವಿಲ್ಲ: ಆರ್.ಅಶೋಕ್‌ ಕಿಡಿ

ಬೆಂಗಳೂರು: ಈ ದರಿದ್ರ ಸರ್ಕಾರ ಇರುವವರೆಗೂ ಕರ್ನಾಟಕದ ಏಳಿಗೆ ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಅವರು ರಾಜ್ಯ ಕಾಂಗ್ರೆಸ್‌…

51 mins ago

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ಮಾಡಿದ ಸಂಸದ ಯದುವೀರ್‌ ಒಡೆಯರ್‌

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಭೇಟಿ ಮಾಡಿ…

58 mins ago

ಚರಂಡಿಯಲ್ಲಿ ನವಜಾತ ಶಿಶು ಪತ್ತೆ: ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನೆ

ಮೈಸೂರು: ಚರಂಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ರಾಜೇಗೌಡನ ಹುಂಡಿ ಗ್ರಾಮದಲ್ಲಿ ನಡೆದಿದೆ. ಮಗುವನ್ನು ರಕ್ಷಣೆ ಮಾಡಿ,…

1 hour ago

ರಾಜ್ಯದಲ್ಲಿ ಡಿನ್ನರ್‌ ಮೀಟಿಂಗ್‌ ವಿಚಾರ: ಡಿಸಿಎಂ ಡಿ.ಕೆ.ಶಿವಕುಮಾರ್‌ ರಿಯಾಕ್ಷನ್‌

ನವದೆಹಲಿ: ನಿಮ್ಮ ಮನೆಗೆ ನಾವು, ನಮ್ಮ ಮನೆಗೆ ನೀವು ಬರುವುದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ನಾನೂ ಸಹ ಆಗಾಗ್ಗೆ ಔತಣಕೂಟ,…

2 hours ago

60% ಕಮಿಷನ್ ಸುಲಿಗೆ ಆರೋಪ ಪುನರುಚ್ಚರಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ 60% ಕಮಿಷನ್ ಸುಲಿಗೆ ಮಾಡುತ್ತಿದೆ ಎಂದು ಮತ್ತೆ ಆರೋಪ ಮಾಡಿರುವ ಕೇಂದ್ರ ಸಚಿವ…

2 hours ago