ಸುಮನ್‌ ಡಿ. ಪನ್ನೇಕರ್‌ ಸೇರಿ ರಾಜ್ಯದಲ್ಲಿ 9 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕರ್ನಾಟಕದಲ್ಲಿ 9 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಎಸ್‌ಪಿ ಮತ್ತು ನಿರ್ದೇಶಕರಾಗಿದ್ದ ಪಾಟಿಲ್‌ ವಿನಾಯಕ್‌ ವಸಂತರಾವ್‌ ಅವರನ್ನು ಬೆಂಗಳೂರು ಉತ್ತರಕ್ಕೆ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ರಾಯಚೂರು ಜಿಲ್ಲೆಯ ಎಸ್‌ಪಿಯಾಗಿದ್ದ ನಿಖಮ್‌ ಪ್ರಕಾಶ್‌ ಅಮ್ರಿತ್‌ ಅವರನ್ನು ಕಾರ್ಕಳದ ನಕ್ಷಲ್‌ ವಿರೋಧಿ ಪಡೆಯ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಕೋಲಾರ ಚಿನ್ನದ ಗಣಿ ಪ್ರದೇಶದ ಎಸ್‌ಪಿಯಾಗಿದ್ದ ಇಲಕ್ಕಿಯಾ ಕರುನಾಗರನ್‌ ಅವರನ್ನು ಬೆಂಗಳೂರಿನ ತಣ್ಣಿಸಂದ್ರದ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲರನ್ನಾಗಿ ವರ್ಗಾಯಿಸಲಾಗಿದೆ.

ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಧರ್ಮೇಂದ್ರ ಕುಮಾರ್‌ ಮೀನ ಅವರನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಮುಖ್ಯ ಕಚೇರಿಯ ಅಸಿಸ್ಟೆಂಟ್‌ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಆಗಿದ್ದ ಎಸ್.ಸವಿತಾ ಅವರನ್ನು ಬೆಂಗಳೂರು ನಗರ ಸಂಚಾರಿ (ದಕ್ಷಿಣ) ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಮಂಡ್ಯ ಜಿಲ್ಲೆಯ ಎಸ್‌ಪಿಯಾಗಿದ್ದ ಎಂ.ಅಶ್ವಿನಿ ಅವರನ್ನು ಬೆಂಗಳೂರಿನ ಮುಖ್ಯ ಕಚೇರಿಯ ಅಸಿಸ್ಟೆಂಟ್‌ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಆಗಿ ವರ್ಗಾವಣೆ ಮಾಡಲಾಗಿದೆ.

ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯ ಎಸ್‌ಪಿ ಮತ್ತು ಉಪ ನಿರ್ದೇಶಕರಾಗಿದ್ದ ಸುಮನ್‌ ಡಿ.ಪನ್ನೇಕರ್‌ ಅವರನ್ನು ಮಂಡ್ಯ ಜಿಲ್ಲೆಯ ಎಸ್‌ಪಿ ಆಗಿ ವರ್ಗಾಯಿಸಲಾಗಿದೆ.

ಕಾರ್ಕಳದ ನಕ್ಷಲ್‌ ವಿರೋಧಿ ಪಡೆಯ ಎಸ್‌ಪಿಯಾಗಿದ್ದ ಬಿ.ನಿಖಿಲ್‌ ಅವರನ್ನು ರಾಯಚೂರು ಜಿಲ್ಲೆಯ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಉಪ ವಿಭಾಗದ ಎಎಸ್‌ಪಿಯಾಗಿದ್ದ ಎಂ.ಎನ್.ದೀಪನ್‌ ಅವರನ್ನು ಕಲಬುರ್ಗಿ ಜಿಲ್ಲೆಯ ಬಿ ಉಪ ವಿಭಾಗದ ಎಸಿಪಿ ಆಗಿ ವರ್ಗಾಯಿಸಲಾಗಿದೆ.

× Chat with us