ರಾಜ್ಯ

7 ಕೋಟಿ ದರೋಡೆ ಪ್ರಕರಣ: ಕೃತ್ಯಕ್ಕೆ ಬಳಸಿದ್ದ ಕಾರು ಆಂಧ್ರಪ್ರದೇಶದಲ್ಲಿ ಪತ್ತೆ

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಏಳು ಕೋಟಿ ರೂ.ಗೂ ಹೆಚ್ಚಿನ ಮೊತ್ತದ ದರೋಡೆ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಪತ್ತೆಯಾಗಿದೆ.

ಘಟನೆ ನಡೆದ ತಕ್ಷಣವೇ ನಗರ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳ ಬೆನ್ನು ಹತ್ತಿದ್ದಾರೆ. ತಾಂತ್ರಿಕವಾಗಿ ಹಾಗೂ ಸಾಂಪ್ರದಾಯಿಕ ಮಾರ್ಗಗಳ ಮೂಲಕ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪರಿಶೀಲಿಸಿದಾಗ ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಭಟ್ಟರ ಹಳ್ಳಿ ರಸ್ತೆ ಮೂಲಕ ಸಂಚರಿಸಿರುವುದು ಕಂಡು ಬಂದಿದೆ.

ಅಲ್ಲಿಂದ ಆಂಧ್ರಪ್ರದೇಶದತ್ತ ಕಾರು ಚಲಿಸಿದ್ದು, ಚಿತ್ತೂರಿನಲ್ಲಿ ಅನಾಮಧೇಯವಾಗಿ ನಿಂತಿದೆ. ಆರೋಪಿಗಳು ಹಣವನ್ನು ಮತ್ತೊಂದು ವಾಹನಕ್ಕೆ ಬದಲಾಯಿಸಿಕೊಂಡು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಗರ ಪೊಲೀಸರ ತಂಡವೊಂದು ಆಂಧ್ರಪ್ರದೇಶಕ್ಕೆ ತೆರಳಿ ಕಾರನ್ನು ತಪಾಸಣೆ ನಡೆಸುತ್ತಿದೆ.

ತಿರುಪತಿ, ಚಿತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಲ್ಲಿನ ಲಾಡ್ಜ್‌ಗಳಲ್ಲಿ ಹುಡುಕಾಟ ನಡೆದಿದೆ. ಹೆದ್ದಾರಿ ಟೋಲ್‍ಗಳಲ್ಲಿ ಹಾದು ಹೋಗಿರುವ ವಾಹನಗಳನ್ನು ಸಿಸಿಟಿವಿಯಲ್ಲಿ ಪರಿಶೀಲಿಸಲಾಗಿದೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಗರ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಆರೋಪಿಗಳು ಚಿತ್ತೂರಿನಿಂದ ಬೇರೆಡೆಗೆ ಪರಾರಿಯಾಗಿರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಈ ನಡುವೆ ನಗರ ಪೊಲೀಸರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ನಗರದಲ್ಲಿರುವ ಮತ್ತೊಂದು ತಂಡ ತನಿಖೆ ಚುರುಕುಗೊಳಿಸಿದ್ದು ಕೆಲವರನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳಿಗೆ ವಾಹನ ಸೌಲಭ್ಯ ಕಲ್ಪಿಸಿದವರು ಹಾಗೂ ಇತರ ರೀತಿಯಲ್ಲಿ ನೆರವಾದ ಆರೋಪಕ್ಕಾಗಿ ವಿಚಾರಣೆಗಳನ್ನು ಮುಂದುವರಿಸಲಾಗಿದೆ.

ನಿನ್ನೆ ಬೆಂಗಳೂರಿನ ಜೆ.ಪಿ.ನಗರದಿಂದ ಎಟಿಎಂ ಯಂತ್ರಗಳಿಗೆ ಹಣ ತುಂಬಲು ಹೋಗುತ್ತಿದ್ದ ವಾಹನವನ್ನು ದರೋಡೆಕೋರರು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡ ಗಟ್ಟಿ ಹೈಜಾಕ್ ಮಾಡಿದ್ದರು. ಸಿದ್ದಾಪುರ ಪೊಲೀಸ್ ಠಾಣೆಗೆ ಒಂದು ಕಿಲೋಮೀಟರ್ ಅಂತರದಲ್ಲಿರುವ ಅಶೋಕ ಪಿಲ್ಲರ್ ಬಳಿ ವಾಹನವನ್ನು ತಡೆದು ಚಾಲಕ ಅದರಲ್ಲಿದ್ದ ಗನ್ ಮ್ಯಾನ್‍ಗಳು, ಕಸ್ಟೋಡಿಯನ್ ಅವರುಗಳ ಮೊಬೈಲ್‍ಗಳನ್ನು ಕಸಿದುಕೊಂಡು ಅವರನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡು ನಗರದ ಡೈರಿ ಸರ್ಕಲ್ ಬಳಿಯ ಫ್ಲೈಓವರ್ ಮೇಲೆ ಹೋಗಿ ಹಣವನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರ ಮಾಡಿದ್ದರು. ಸಿಬ್ಬಂದಿಗಳನ್ನು ಸ್ವಲ್ಪ ದೂರ ಕರೆದು ಹೋಗಿ, ಅರ್ಧದಲ್ಲೇ ಇಳಿಸಿ ಪರಾರಿಯಾಗಿದ್ದಾರೆ.

ಈ ಪ್ರಕರಣ ರಾಜ್ಯದಲ್ಲಷ್ಟೇ ಅಲ್ಲದೇ ದೇಶದಲ್ಲೂ ಭಾರೀ ಸದ್ದು ಮಾಡಿದೆ. ಬೆಂಗಳೂರು ನಗರ ಪೊಲೀಸರಿಗೆ ಸವಾಲೊಡ್ಡಿದೆ. ಶತಾಯಗತಾಯ ಆರೋಪಿಗಳನ್ನು ಬಂಧಿಸಲು ನಗರ ಪೊಲೀಸರು ಹಗಲು ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಚಿರತೆ ದಾಳಿ: ಕೂಲಿ ಕಾರ್ಮಿಕನಿಗೆ ಗಾಯ

ಹುಣಸೂರು: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ಕಣಗಾಲು ಗ್ರಾಮದ…

51 mins ago

ಓದುಗರ ಪತ್ರ: ಡಾಂಬರು ಕಾಣದ ಕಾಳಿಹುಂಡಿ ರಸ್ತೆ

ಸರಗೂರು ತಾಲ್ಲೂಕಿನ ಕಾಳಿಹುಂಡಿ ಗ್ರಾಮದ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಆಗಿವೆ. ಈ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದೆ. ಈ…

55 mins ago

ಓದುಗರ ಪತ್ರ: ಬಿರು ಬೇಸಿಗೆಯಲ್ಲಿ ಇರಲಿ ಎಚ್ಚರ

ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು ೩೪ ಸೆಲ್ಸಿಯಸ್‌ಗೂ ಹೆಚ್ಚು ಪ್ರಮಾಣದಲ್ಲಿ ಬಿಸಿಲಿನ ತಾಪ ಮಾನ ಏರಿಕೆಯಾಗಿರುವ…

58 mins ago

ಜಾ.ದಳ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಮುಖಂಡರ ಪೈಪೋಟಿ

ಮಂಜು ಕೋಟೆ ಕೋಟೆ: ರಾಜೇಂದ್ರ, ಸಿ.ವಿ.ನಾಗರಾಜು, ಯೋಗಾನರಸಿಂಹೇಗೌಡ, ಗುಂಡತ್ತೂರು ಪ್ರಕಾಶ್ ಪ್ರಬಲ ಆಕಾಂಕ್ಷಿಗಳು ಎಚ್.ಡಿ.ಕೋಟೆ: ಜಾ.ದಳ ತಾಲ್ಲೂಕು ಅಧ್ಯಕ್ಷರನ್ನು ನೇಮಕ…

1 hour ago

ಎಲ್ಲೆಂದರಲ್ಲಿ ಕಸ ಸುರಿದರೆ ಬೀಳಲಿದೆ ದಂಡ!

ಪುರಸಭೆಯಿಂದ ಹಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸ್ವಚ್ಛ ಪಟ್ಟಣಕ್ಕೆ ಸಹಕರಿಸಲು ಮನವಿ ಗುಂಡ್ಲುಪೇಟೆ: ಪಟ್ಟಣದ ಕೆಲವೆಡೆ ಕಸ ಸುರಿಯದಂತೆ ಎಚ್ಚರಿಕೆ…

1 hour ago

ಅನಿಲ ಬಿಕ್ಕಟ್ಟು: ಕೃಷಿ, ಪ್ರವಾಸೋದ್ಯಮಕ್ಕೆ ಇಕ್ಕಟ್ಟು

ಕೆ.ಬಿ.ರಮೇಶನಾಯಕ ಮೈಸೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದ ಮೇಲೆ ದಿನದಿಂದ ದಿನಕ್ಕೆ ಅನಿಲ ಬಿಕ್ಕಟ್ಟು ಬಿಗಡಾಯಿಸುತ್ತಿದ್ದು, ವಾಣಿಜ್ಯ ಬಳಕೆಯ…

2 hours ago