ಬೆಂಗಳೂರು: ನಲವತ್ತೆಂಟನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಮಹಿಳಾ ಪ್ರವಾಸಿಗರಿಗೆ ವಿಶೇಷ ಕೊಡುಗೆ ನೀಡಲಾಗುತ್ತಿದೆ.
ಮಹಿಳಾ ಪ್ರವಾಸಿಗರಿಗೆ ಪ್ರೊತ್ಸಾಹ ನೀಡಲು ರಾಜ್ಯದಲ್ಲಿ ನಿಗಮದಿಂದ ನಿರ್ವಹಣೆ ಮಾಡುತ್ತಿರುವ ಮಯೂರ್ ಗ್ರೂಪ್ ಹೋಟೆಲುಗಳಲ್ಲಿ ಕೊಠಡಿ ಬುಕ್ಕಿಂಗ್ನಲ್ಲಿ ಶೇ.50ರಷ್ಟು ಹಾಗೂ ಊಟೋಪಚಾರದ ಮೇಲೆ ಶೇ.20ರಷ್ಟು ರಿಯಾಯತಿಯ ವಿಶೇಷ ಕೊಡುಗೆ ನೀಡಲಾಗುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಜಿ. ತಿಳಿಸಿದ್ದಾರೆ.
ಮಾ.6ರಿಂದ ಈ ಕೊಡುಗೆ ಪ್ರಾರಂಭವಾಗಿದ್ದು, ಮಾ.10ರ ವರೆಗೆ ಜಾರಿಯಲ್ಲಿದೆ. ನಿಗಮದ ಹೊಟೇಲ್ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಒಬ್ಬ ಮಹಿಳೆ, ಕುಟುಂಬ, ಗುಂಪು ಮಹಿಳಾ ಪ್ರವಾಸಿಗರಿಗೆ ಶೇ. 50ರಷ್ಟು ರಿಯಾಯತಿ ನೀಡಲಾಗುತ್ತಿದೆ.
ಈ ಸೌಲಭ್ಯದ ಸದುಪಯೋಗವನ್ನು ಮಹಿಳಾ ಪ್ರವಾಸಿಗರು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ಬುಕ್ಕಿಂಗ್ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ 080-43344334, 8970650070, 897088880 ಸಂಪರ್ಕಿಸಬಹುದಾಗಿದೆ
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಸಾಕಷ್ಟು ಮಂದಿ ಕಮಲ ತೊರೆದು ಕೈ ಸೇರಲಿದ್ದಾರೆ: ಡಿಕೆಶಿ
Next Article ಬಿಜೆಪಿ ಸರ್ಕಾರವನ್ನು ಹೊರ ಹಾಕುವ ಕಾಲ ಇದಾಗಿದೆ: ಸುರ್ಜೇವಾಲ