ಹುಬ್ಬಳ್ಳಿ: ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಹಣಿಯಲು 3 ಸಾವಿರ ವಿಡಿಯೋ ತುಣುಕು ಇದ್ದು, ಮುಂಬರುವ ಲೋಕಸಭೆ ಚುನಾವಣೆ ಅವರೇ ನಮಗೆ ಪ್ರಬಲ ಅಸ್ತ್ರವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರಿಗೆ ಪುಲ್ವಾಮಾ ದಾಳಿಗೆ ಬಗ್ಗೆ ತಮ್ಮದೇ ಭಾಷಣ ಮಾಡುತ್ತಾರೆ. ಈಗ ಜನ ಕೇಳುತ್ತಿದ್ದು, ಮೊದಲು ಹೇಳಬೇಕು. ಸಾಮಾನ್ಯ ವಾಹನದಲ್ಲಿ 300 ಕೆಜಿ ಆರ್‌ಡಿಎಕ್ಸ್ ಹೇಗೆ ಬಂತು ಅಂತಾ ಯಾರೂ ಚರ್ಚಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು .
” ನಾವು ಚುನಾವಣೆ ಸುಲಭವಾಗಿ ಗೆಲ್ತೀವಿ ಅಂತ ತಿಳ್ಕೋಬೇಡಿ. 10 ವರ್ಷ ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ನಿರಂತರ ಕಿರುಕುಳ ಕೊಟ್ಟಿದ್ದಾರೆ. ಇದುವರೆಗೂ ಆ ಮನುಷ್ಯ (ರಾಹುಲ್ ಗಾಂಧಿ) ಒಬ್ಬರ ವಿರುದ್ಧವೂ ಮಾತನಾಡಲಿಲ್ಲ. ಬುದ್ಧರಂತೆ ರಾಹುಲ್ ಗಾಂಧಿಯವರನ್ನು ನಾವು ಕಾಣಬೇಕು. ಭಾರತೀಯ ಜನತಾ ಪಕ್ಷದವರು ಅವರು ಪಾಕಿಸ್ತಾನ್, ಹಿಂದೂ- ಮುಸ್ಲಿಂ ಬಗ್ಗೆ ಅಷ್ಟೇ ಮಾತನಾಡೋದು ಅವರು ಹಿಂದುತ್ವ ವಾದ ತರ್ತಾರೆ. ಆದರೆ, ನಾವು ಅಂಬೇಡ್ಕರ್- ಬಸವಣ್ಣನವರ ವಾದ ಮುಂಚೂಣಿಗೆ ತರಬೇಕು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಫೋಟೋ ಆರ್‌ಎಸ್ಎಸ್ ಕಚೇರಿಯಲ್ಲಿ ಇಟ್ಕೋಬೇಕು ಎಂದು ಹೇಳಿದರು.
ಪಾಕಿಸ್ತಾನ ಬೇಕಾಗಿದ್ದ ಮುಸ್ಲಿಮರು ಅಲ್ಲಿಗೆ ಹೋದ್ರು. ಇಲ್ಲಿರುವವರು ತಮ್ಮ ಆಯ್ಕೆಯಿಂದ ಇಲ್ಲಿದ್ದಾರೆ. ಇತಿಹಾಸವನ್ನೂ ತಿರುಚುವ ಕೆಲಸ ಬಿಜೆಪಿ ಅವರು ಮಾಡ್ತಾರೆ ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಇಡೀ ಹಿಂದೂ ರಾಷ್ಟ್ರಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಈ ಮಹಾನ್ ಜ್ಞಾನಿಯನ್ನು ಸಮಾಜ ಸದಾಕಾಲ ಸ್ಮರಿಸಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಆಶ್ರಯದಲ್ಲಿನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ರಾಮಾಯಾಣ ಮಹಾಕಾವ್ಯದ ಸ್ಮರಣೆ. 24 ಸಾವಿರ ಶ್ಲೋಕದ ಈ ರಾಮಾಯಾಣವು ಇಡೀ ಹಿಂದೂ ರಾಷ್ಟ್ರಕ್ಕೆ ಅತೀ ದೊಡ್ಡ ಅತ್ಯಮೂಲ್ಯ ಸಂಪತ್ತು ಆಗಿದೆ. ಈ ಮಹಾಕಾವ್ಯ ಬರೆದ ವಾಲ್ಮೀಕಿಯನ್ನು ಬ್ರಿಟಿಷರು ಮಹಾನ್ ಜ್ಞಾನಿ ಎಂದು ಕರೆದಿದ್ದಾರೆ. ಗಂಗಾನದಿಯ ದಡದಲ್ಲಿನಡೆಯುವಾಗ ಎರಡು ಬೆಳ್ಳಕ್ಕಿಗಳು ಮಿಲನದಲ್ಲಿತೊಡಗಿದ್ದಾಗ ಬೇಟೆಗಾರನೊಬ್ಬ ಒಂದು ಬೆಳ್ಳಕ್ಕಿಯನ್ನು ಕೊಂದ ಸಂದರ್ಭದಲ್ಲಿವಾಲ್ಮೀಕಿಯವರು ತಮ್ಮ ಪ್ರಥಮ ಶ್ಲೋಕ ಬರೆಯುತ್ತಾರೆ. ಮುಂದೆ ಅವರು 24 ಸಾವಿರ ಶ್ಲೋಕದ 4 ಲಕ್ಷ 80 ಸಾವಿರ ಪದಗಳುಳ್ಳ ಮಹಾಕಾವ್ಯ ರಾಮಾಯಾಣವನ್ನು ಬರೆದು ಇತಿಹಾಸ ನಿರ್ಮಿಸುತ್ತಾರೆ. ವಾಲ್ಮೀಕಿ ಕೇವಲ ವಾಲ್ಮೀಕಿ ಸಮಾಜಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹಾಗುರು ಆಗಿದ್ದಾರೆ ಎಂದು ಸಚಿವ ಲಾಡ್ ಬಣ್ಣಿಸಿದರು.
ಮೈಸೂರು : ಸಾಂಸ್ಕೃತಿಕ ನಗರಿಯ ಅರಮನೆಗೆ ಡಿ.20ರಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳ…
ಬೆಳಗಾವಿ : ಎರಡುವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನವಾಗಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ…
ಹುಣಸೂರು : ತಾಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಬಳಿಯ ಜಮೀನಿನಲ್ಲಿ ಹಗಲು ವೇಳೆಯೇ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು…
ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…
ಮೈಸೂರು: ಎಂಎಲ್‌ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…