ದೇವಸ್ಥಾನದಲ್ಲಿ ಕಳ್ಳತನ : ಮೂವರ ಸೆರೆ, ಚಿನ್ನ, ಬೆಳ್ಳಿ ವಸ್ತುಗಳು ವಶ

ಮೈಸೂರು: ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಸರಗೂರು ಪೊಲೀಸರು ಬಂಧಿತರಿಂದ ಚಿನ್ನ, ಬೆಳ್ಳಿ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸಿದ ಕಬ್ಬಿಣದ ಸರಳನ್ನು ವಶಪಡಿಸಿಕೊಂಡಿದ್ಧಾರೆ.

ಕೃಷ್ಣ (40), ಸೀನ (28) ಮತ್ತು ಕುಮಾರ (35) ಬಂಧಿತ ಆರೋಪಿಗಳು. ಇವರು ಬೆಳಗ್ಗೆ ಚಿನ್ನದ ಪಾಲಿಶ್ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ಸರಗೂರು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಕಬ್ಬಿಣದ ರಾಡು, ತಾಳಿ, ಬೆಳ್ಳಿ ಪದಾರ್ಥಗಳು ವಶಪಡಿಸಿಕೊಳ್ಳಲಾಗಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us