ಮೈಸೂರು: ದೇಶದಾದ್ಯಂತ ಕೈಗಾರಿಕಾ ಕ್ಷೇತ್ರಗಳನ್ನು ಉತ್ತೇಜಿಸುವ ಜತೆಗೆ ಉದ್ಯೋಗಕ್ಕೆ ವಿಫುಲ ಅವಕಾಶಗಳನ್ನು ಮಾಡಿಕೊಡಲು ಆರಂಭಿಸಿರುವ ‘ನವೋದ್ಯಮದಿಂದ ನವಭಾರತ’ ಘೋಷವಾಕ್ಯದೊಂದಿಗೆ ಎಸ್ಜೆಸಿಇ, ಸ್ಟೆಪ್ ಸಹೋಂಗದಲ್ಲಿ ನಗರದ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಫುಟ್ಬಾಲ್ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳವರೆಗೆ ಆೋಂಜಿಸಿರುವ ‘ಮೈಸೂರು ನವೋದ್ಯಮ ಉತ್ಸವ’ (ಮೈಸೂರು ಸ್ಟಾರ್ಟ್ ಅಪ್ ಪೆವಿಲಿಯನ್)ವಿದ್ಯುಕ್ತವಾಗಿ ಆರಂಭಗೊಂಡಿತು. ಮೂರು ದಿನಗಳ ಕಾಲ ಉತ್ಸವದ ಭಾಗವಾಗಿ ನಡೆದ ಸಮ್ಮೇಳನವು, ನವೋದ್ಯಮಗಳಿಗೆ ಇರುವ ಅವಕಾಶ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ದೊರೆಯುತ್ತಿರುವ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕನಗರಿಯಲ್ಲಿರುವ ಇರುವಂತಹ ಉದ್ಯಮಿ ಸ್ನೇಹಿ ಪೂರಕ ವಾತಾವರಣದ ಬಗ್ಗೆ ಬೆಳಕು ಚೆಲ್ಲಲಾಯಿತು.
ಉತ್ಸವಕ್ಕೆ ಚಾಲನೆ ನೀಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಮಹಾರಾಜರ ಕಾಲದಲ್ಲೇ ನವೋದ್ಯಮಗಳಿಗೆ ಅವಕಾಶ ನೀಡಲಾಗಿತ್ತು. ಅದರ ಫಲವಾಗಿಯೇ ಮೈಸೂರಿನ ಹಲವು ಬ್ರ್ಯಾಂಡ್ಗಳು ಇಂದು ದೊಡ್ಡ ಮಟ್ಟದಲ್ಲಿ ಹೆಸರು ಗಳಿಸುವುದಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದರು.
ಮೈಸೂರಿನ ಬ್ರ್ಯಾಂಡ್ಗಳಿಗೆ ತನ್ನದೇ ಆದ ಹೆಸರು ಇದೆ. ಹಾಗೆಯೇ ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಮೈಸೂರನ್ನು ಸೈಬರ್ ಸೆಕ್ಯುರಿಟಿ ಹಬ್ ಆಗಿ ರೂಪಿಸುವುದಕ್ಕೂ ಅವಕಾಶವಿದೆ ಎಂದರು.
ಎಸ್ಜೆಸಿಇ ಸ್ಟೆಪ್, ಟಿಐಇ ಮೈಸೂರು, ಯಂಗ್ ಇಂಡಿಯನ್ಸ್, ಸಿಐಐ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಡಿಜಿಟಲ್, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಕರ್ನಾಟಕ ಸಹೋಂಗದಲ್ಲಿ ಉತ್ಸವ ಅನಾವರಣಗೊಂಡಿದೆ. ೨೦ಕ್ಕೂ ಹೆಚ್ಚು ಹೂಡಿಕೆದಾರರು, ಮೆಂಟರ್ಗಳು, ೨೫ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದಾರೆ. ನೂರು ಮಳಿಗೆಗಳು ಮತ್ತು ೧೫ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಸಂಶೋಧಕರು, ಕೈಗಾರಿಕಾ ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ. ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ನವೋದ್ಯಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ.
ಆತ್ಮನಿರ್ಭರ ಭಾರತದಡಿ ನವೋದ್ಯಮಗಳಿಗೆ ಪ್ರೋತ್ಸಾಹ: ಅನಿತಾ ಗುಪ್ತ
ಮುಂದಿನ ೩೦-೫೦ ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಸ್ವಾವಲಂಬಿ ಸಾಧನೆಗಾಗಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ನವೋದ್ಯಮಗಳಿಗೆ ಪ್ರೋತ್ಸಾಹ ಕೊಡುವ ಜತೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಕೆಲಸ ಮಾಡಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ತಂತ್ರಜ್ಞಾನ ಅಭಿಯಾನ ವಿಭಾಗದ ಮುಖ್ಯಸ್ಥೆ ಡಾ.ಅನಿತಾ ಗುಪ್ತ ತಿಳಿಸಿದರು.ಕಾಲೇಜಿನ ಫುಟ್ಬಾಲ್ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳವರೆಗೆ ಆೋಂಜಿಸಿರುವ ಮೈಸೂರು ನವೋದ್ಯಮ ಉತ್ಸವ’ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿಜ್ಣಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗೆ ಸರ್ಕಾರ ಆದ್ಯತೆ ಕೊಡುತ್ತಿದೆ. ಸದ್ಯ ೧೬೦ ಇನ್ಕ್ಯುಬೇಟರ್ಗಳನ್ನು (ತಂತ್ರಜ್ಞಾನ ಪರಿಪೋಷಣಾ ಕೇಂದ್ರ) ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ೨೫ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಆತ್ಮನಿರ್ಭರ ಭಾರತ ಯೋಜನೆಯಡಿ ದೇಶಿಯ ಉತ್ಪನ್ನಗಳ ತಯಾರಿಕೆ, ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ: ಸುತ್ತೂರುಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕದಲ್ಲಿ ಮೊದಲ ಬಾರಿಗೆ ನವೋದ್ಯಮ ಹಾಗೂ ಹೊಸ ಆಯಾಮಗಳಿಗೆ ಪ್ರೋತ್ಸಾಹ ನೀಡಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾಗಿದೆ. ಅವರ ನಂತರದಲ್ಲಿ ಆಳ್ವಿಕೆ ನಡೆಸಿದ ಮಹಾರಾಜರು ಅದನ್ನು ಮುಂದುವರಿಸಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು ಎಂದು ಹೇಳಿದರು.ಪರಿಶುದ್ಧ ವಾತಾವರಣವನ್ನು ಕಾಪಾಡಿಕೊಂಡು ಮೈಸೂರನ್ನು ಮೈಸೂರಾಗಿೆುೀಂ ಉಳಿಸಿಕೊಳ್ಳಬೇಕು. ಮಾದರಿಯಾಗಿ ಮೈಸೂರು ರೂಪಿಸಿರುವ ಕೀರ್ತಿ ಅರಸರಿಗೆ ಸಲ್ಲುತ್ತದೆ. ಆ ಪರಂಪರೆಯನ್ನು ಕಾಪಾಡಿಕೊಳ್ಳಬೇಕು. ಪ್ರಾಮಾಣಿಕತೆಯಿಂದ ದುಡಿದರೆ ಲಕ್ಷ್ಮೀ ತಾನಾಗಿೆುೀಂ ಬರುತ್ತಾಳೆ ಎಂದರು.
ಬಹುತೇಕರು ಉದ್ಯೋಗಿಗಳಾಗಲು ಬಯಸುತ್ತಾರೆೆುೀಂ ಹೊರತು, ಉದ್ಯಮಿಯಾಗುವ ರಿಸ್ಕ್ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಶಕ್ತಿ ಇದ್ದರೂ ಮುಂದಡಿ ಇಡುವುದಿಲ್ಲ. ಆದರೆ, ಯುವಕರು ಮನಸ್ಸು ಮಾಡಿದರೆ ದೇಶವನ್ನು ಬೆಳೆಸಬಹುದಾಗಿದೆ. ಮಾಡಲು ವಿಫುಲ ಅವಕಾಶಗಳಿವೆ. ಯೋಜನೆಗಳು ಬಹಳಷ್ಟಿದೆ,ಆದರೆ, ಮನಸ್ಸು ಬೇಕಷ್ಟೆ ಎಂದು ಸಲಹೆ ನೀಡಿದರು.
ಸರ್ಕಾರವು ನವೋದ್ಯಮಿಗಳಿಗೆ ಅಗತ್ಯವಾದ ಅವಕಾಶವನ್ನು ಕೊಡುತ್ತಿದೆ. ಬೆಳೆಯುತ್ತಿರುವವರನ್ನು ಗೌರವಿಸಬೇಕು. ಅಸೂೆುಂ ಪಡಬಾರದು. ಬೆಳೆದವರ ಪರಿಶ್ರಮವನ್ನು ಅಳವಡಿಸಿಕೊಂಡು ಮುಂದೆ ಬರಬೇಕು ಎಂದರು.
ವಿಜ್ಞಾನಾನಂದ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಸಂಪತ್ತು ಮಾಡಿದವರನ್ನು ಕಳ್ಳರಂತೆ ನೋಡುವ ಮನೋಭಾವವಿದೆ. ಆತ, ಕಪುತ್ಪೃ ಹಣ ಇಟ್ಟುಕೊಂಡಿರಬಹುದು ಅಥವಾ ಸರ್ಕಾರಕ್ಕೆ ವಂಚಿಸಿರಬೇಕು ಎಂದುಕೊಳ್ಳುವುದುಂಟು. ಇದು ದೂರಾಗಬೇಕು. ವ್ಯಾಪಾರ ವ್ಯವಹಾರ ನಡೆಸುವುದು ಕಠಿಣವಾದ ಕೆಲಸವೇ ಸರಿ. ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯಮಿಗಳು ಸಂಕಷ್ಟಕ್ಕೆ ಒಳಗಾದಾಗ ಅವರಿಗೆ ನೆರವಾಗಬೇಕು. ಉದ್ಯಮಗಳು ವೃದ್ಧಿಸಿದರೆ ಸಮಾಜವೂ ಬೆಳೆಯುತ್ತದೆ. ಅದಕ್ಕಾಗಿ ಸಮರ್ಪಕವಾದ ನೀತಿ ನಿಯಮಗಳು ಬೇಕಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ರಾಜಕಾರಣಿಗಳು ಕೂಡ ಸಾಮಾನ್ಯ ಕುಟುಂಬದಿಂದ ಬಂದವರೇ ಆಗಿರುತ್ತಾರೆ. ಅವರು, ವೈದ್ಯಕೀಯ ಕಾಲೇಜುಗಳನ್ನು ನಡೆಸುವಷ್ಟರ ಮಟ್ಟಿಗೆ ಸಂಪತ್ತು ಗಳಿಸುತ್ತಾರೆ. ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು? ಇದನ್ನು ಯಾರೂ ಕೇಳುವುದಿಲ್ಲ ಎಂದು ವಿಷಾದಿಸಿದರು.
ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರದಿಂದ ಐಟಿ ಹಾಗೂ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ. ದೇಶದಲ್ಲಿೆುೀಂ ಮೊದಲ ಬಾರಿಗೆ ನವೋದ್ಯಮ ನೀತಿ ರೂಪಿಸಿ ನೆರವಾಗುತ್ತಿದ್ದೇವೆ. ೩೦ ದೇಶಗಳ ಜತೆಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಬೆಂಗಳೂರು ಹೊರಗಿನ ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೀದರ್, ಮಂಗಳೂರು ಮೊದಲಾದ ಕಡೆಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ಕೊಡಲಾಗುತ್ತಿದೆ. ವಿವಿಧ ರಿಯಾಯಿತಿಗಳನ್ನೂ ಕೊಡಲಾಗುತ್ತಿದೆ’ ಎಂದು ತಿಳಿಸಿದರು.
ಸ್ಕ್ಯಾನ್ರೇ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್ ಆಳ್ವ ಮಾತನಾಡಿ, ಮುಂದಿನ ಹತ್ತು ವರ್ಷಗಳಲ್ಲಿ ಮೈಸೂರು ಹಿಂದಿಗಿಂತಲೂ ಬಹಳಷ್ಟು ಬದಲಾಗಲಿದೆ. ಆದರೆ, ಅಡ್ಡಾದಿಡ್ಡಿಯಾಗಿ ಬೆಳೆಯುವ ಬದಲಿಗೆ ವ್ಯವಸ್ಥಿತವಾಗಿ ಪ್ರಗತಿ ಕಾಣಬೇಕು. ಸ್ವಚ್ಛ ಶುದ್ಧ ಸಮೃದ್ಧ ಮೈಸೂರು ಆಗಿ ರೂಪುಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮೈಸೂರು ಕೈಗಾರಿಕಾ ಕ್ಷೇತ್ರದಲ್ಲಿ ಯಾವ ರೀತಿ ವಿಸ್ತಾರಗೊಳ್ಳಬೇಕು, ಇರುವ ಅವಕಾಶಗಳನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ಗಮನಿಸಬೇಕು. ಕೈಗಾರಿಕಾ ವಲಯಗಳನ್ನು ವ್ಯವಸ್ಥಿತವಾಗಿ ರೂಪಿಸಬೇಕಾಗಿದೆ ಎಂದು ನುಡಿದರು. ಪ್ರೊಟೀನ್ ಕ್ಲೌಡ್ ಕಂಪನಿಯ ಸಿಇಒ ಸುರೇಶ್ ಸೇಥಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರಾಂತಿ ಮಾಡಿದೆ. ಪ್ರೊಟೀನ್ ಕ್ಲೌಡ್ ಆತ್ಮನಿರ್ಭರ ಭಾರತಕ್ಕೆ ಸಹಕಾರಿಯಾಗಿದೆ. ದೇಶದ ನಾಳೆಗಳು ಇಂದಿಗಿಂತಲೂ ಚೆನ್ನಾಗಿರಲಿವೆ ಎಂದು ಹೇಳಿದರು. ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ಸಿಇಒ ಮತ್ತು ಸಂಸ್ಥಾಪಕ ಸುಧನ್ವ ಧನಂಜಯ ಮಾತನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್ ಹಾಜರಿದ್ದರು.ಎಸ್ಜೆಸಿಇ ಸ್ಟೆಪ್ ಸಿಇಒ ಶಿವಶಂಕರ್ ಸ್ವಾಗತಿಸಿದರೆ, ಪ್ರಿಯಾಂಕ ಪ್ರಾಸ್ತಾವಿಕವಾಗಿ ಮಾತನಾಡಿದರು.