police aword (1)
ಬೆಂಗಳೂರು : ಗಣನೀಯ ಸೇವೆ ಸಲ್ಲಿಸಿದ 18 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕ ಲಭಿಸಿದೆ. ಲೋಕಾಯುಕ್ತ ಬೆಂಗಳೂರು ಕೇಂದ್ರದಲ್ಲಿ ಎಸ್‌ಪಿಯಾಗಿರುವ ಎಸ್. ಬದ್ರಿನಾಥ್ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ. ಹಲವಾರು ಕ್ಲಿಷ್ಟಕರ ಪ್ರಕರಣಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಂಸೆ ವ್ಯಕ್ತಪಡಿಸಿ ವಿಶಿಷ್ಟ ಸೇವಾ ಪದಕವನ್ನು ನೀಡಲಾಗುತ್ತಿದೆ.
ರಾಜ್ಯ ಗುಪ್ತಚರ ಐಜಿಪಿ ಡಾ. ಚಂದ್ರಗುಪ್ತ, ಎಐಜಿಪಿ (ಅಪರಾಧ ಮುಖ್ಯಅಧಿಕಾರಿ) ಕಲಾ ಕೃಷ್ಣಮೂರ್ತಿ, ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್‌ನ ಕಮಾಂಡರ್ ಡಾ. ರಾಮಕೃಷ್ಣ ಮುದ್ದಿಪೈ, ಗುಪ್ತಚರ ವಿಭಾಗದ ಎಸ್‌ಪಿ ಕಲೀಮನಿ ಮಹದೇವಪ್ಪ ಶಾಂತರಾಜು, ಸಿಐಡಿ ಎಸ್‌ಪಿ ಎನ್. ವೆಂಕಟೇಶ ನಾರಾಯಣ, ಮಹದೇವಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಿ.ಪ್ರವೀಣ್ ಬಾಬು ಗುರುಸಿದ್ದಯ್ಯ, ಕೆಜಿಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್, ಬೆಸ್ಕಾಂ ಜಾಗೃತದಳ ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ಸ್ಯಾಮ್‌ಸನ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ನಂದಗುಡಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ, ಮಂಗಳೂರು ಸಿಸಿಬಿ ಎಎಸ್‌ಐ ಸುಜನ ಶೆಟ್ಟಿ, ಬೆಂಗಳೂರು ಎಸ್‌ಸಿಆರ್‌ಬಿ ಪಿಎಸ್‌ಐ ಝಾನ್ಸಿರಾಣಿ ಡಿಪಿಓ ಗದಗ ಜಿಲ್ಲೆ ಎಎಸ್‌ಐ ಗುರುರಾಜ ಮಹಾದೇವಪ್ಪ ಬುದ್ದಿಲ್, ಬೆಂಗಳೂರು ಕೆಎಸ್‌ಆರ‍್ಪಿ 4ನೇ ಬೆಟಾಲಿಯನ್ ಹೆಡ್‌ಕಾನ್‌ಸ್ಟೆಬಲ್ ಎಂ.ಜೆ. ರಾಜೇಶ್, ಕೊಪ್ಪಳ ಗಣಕಯಂತ್ರ ವಿಭಾಗ ಡಿಪಿಓ ಹೆಡ್‌ಕಾನ್‌ಸ್ಪೇಬಲ್ ಶಮ್‌ಸುದ್ದೀನ್, ಬೆಂಗಳೂರು ನಗರ ಗುಪ್ತಚರ ಹೆಡ್‌ಕಾನ್‌ಸ್ಪೆಬಲ್ ವೈ. ಶಂಕರ್, ಗುಲ್ಬರ್ಗ ನಗರ ಪೊಲೀಸ್ ಆಯುಕ್ತರ ಕಚೇರಿಯ ಹೆಡ್‌ಕಾನ್‌ಸ್ಟೆಬಲ್ ಅಲಂಕಾರ್ ರಾಕೇಶ್ ರವಿನಾ ಸಿದ್ದಪ್ಪ, ಗುಪ್ತಚರ ವಿಭಾಗ ಸಿವಿಲ್ ಹೆಡ್‌ಕಾನ್‌ಸ್ಟೆಬಲ್ ಎಲ್. ರವಿ ಅವರಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಸೇವಾ ಪದಕ ಲಭಿಸಿದೆ.
ಮಂಜು ಕೋಟೆ ಕುರುಬ ಸಮಾಜದ ಎರಡು ಬಣಗಳ ನಡುವೆ ಉಂಟಾಗಿದ್ದ ಗೊಂದಲ; ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕ್ರಮ ಎಚ್.ಡಿ.ಕೋಟೆ: ಮುಖ್ಯಮಂತ್ರಿ…
೩೫ ಕಡೆಗಳಲ್ಲಿ ಹೈಬ್ರಿಡ್ ಸಿಗ್ನಲ್ ಲೈಟ್; ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಮೈಸೂರು: ಭವಿಷ್ಯದಲ್ಲಿ ರಿಂಗ್…
ಕಾಡಂಚಿನ ವ್ಯಾಘ್ರ ಸೆರೆಗೆ ಹಗಲು-ರಾತ್ರಿ ಕಾರ್ಯಾಚರಣೆ ಚಿರತೆ ಸೆರೆಗೆ ತಂತ್ರಜ್ಞಾನ ಬಳಕೆ ಮಾಡಿದ್ದ ಅರಣ್ಯ ಇಲಾS ಮೈಸೂರು: ಕಳೆದ ಎರಡು…
ಹೇಮಂತ್‌ಕುಮಾರ್ ದಾಖಲೆ ಸೃಷ್ಟಿ ; ಹಲವು ಅಚ್ಚರಿಗಳ ತಾಣವಾದ ಮೂರು ದಿನಗಳ ಮೇಳ ಮಂಡ್ಯ: ಮೂರು ದಿನಗಳ ಕಾಲ ವಿ.ಸಿ.ಫಾರಂನಲ್ಲಿ…
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…