ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಐವರು ಹಿರಿಯ ಸಾಹಿತಿಗಳಿಗೆ ವಾರ್ಷಿಕ ಗೌರವ ಹಾಗೂ 10 ಮಂದಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ದೊರೆತಿದೆ.
ಕನ್ನಡ ಸಾರಸತ್ವ ಲೋಕದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ನಿರ್ಧಾರ ಮಾಡಲಾಗಿದೆ.
ಗೌರವ ಪ್ರಶಸ್ತಿ ಪುರಸ್ಕೃತರು:
ಡಾ.ಸಿ.ವೀರಣ್ಣ ಬೆಂಗಳೂರು, ಡಾ.ಶ್ರೀರಾಮ ಹಿಟ್ಟಣ ಬಾಗಲಕೋಟೆ, ಜಾಣಗೆರೆ ವೆಂಕಟರಾಮಯ್ಯ ತುಮಕೂರು, ಎಂ.ಎಂ.ಮದರಿ ಕೊಪ್ಪಳ, ಡಾ.ಸಬೀಹಾ ಭೂಮಿಗೌಡ ಮಂಗಳೂರು ಇವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದು, 50 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.
ಮಾರ್ಚ್.24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರು:
ಮೈಸೂರಿನ ಡಾ.ಎಂ.ಎನ್.ಶೇಖರ್, ಬೆಂಗಳೂರಿನ ಜಿ.ಎನ್.ಮೋಹನ್, ತುಮಕೂರಿನ ಡಾ.ಟಿ.ಎಸ್.ವಿವೇಕಾನಂದ, ಬೆಳಗಾವಿಯ ಡಾ.ಜಯಶ್ರೀ ಕಂಬಾರ, ಧಾರವಾಡದ ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಕೋಲಾರ ಡಾ.ಬಾಲಗುರುಮೂರ್ತಿ, ಕಲಬುರ್ಗಿಯ ಪ್ರೊ.ಶಿವಗಂಗಾರುಮ್ಮ, ಬೆಂಗಳೂರಿನ ಡಾ.ರೀಟಾರೀನಿ, ಶಿವಮೊಗ್ಗದ ಡಾ.ಕಲೀಂವುಲ್ಲಾ ಹಾಗೂ ಬಳ್ಳಾರಿಯ ಡಾ.ವೆಂಕಟಗಿರಿ ದಳವಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಂದರ್ಶನ: ಬಾನಾಸು ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…
ನವೀನ್ ಡಿಸೋಜ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ೧.೯೩ ಕೋಟಿ ರೂ. ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಮಡಿಕೇರಿ: ಸಾಮಾನ್ಯವಾಗಿ ಮುಂಗಾರು ಮಳೆಯೊಂದಿಗೆ…
ಕೆ.ಬಿ.ರಮೇಶ್ ನಾಯಕ ಟಿಕೆಟ್ ಜೀನಿ ಸಂಸ್ಥೆಗೆ ಟಿಕೆಟ್ ಮಾರಾಟದ ಹೊಣೆ; ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಮೈಸೂರು: ನಾಡಹಬ್ಬ ದಸರಾ…
ಎಸ್.ಎಸ್.ಭಟ್ ನಂಜನಗೂಡು: ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಪೂರೈಕೆ ಮಾಡುತ್ತಿರುವ ಶೂಗಳು ಕಳಪೆಯಾಗಿದ್ದು ಅಳತೆಯೂ ಸರಿ ಇಲ್ಲ ಎಂಬ…
ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…