- ಬೆಂಗಳೂರು, : ಎಲ್ಲರ ಕಣ್ಣು ಇಂದು ಬೆಂಗಳೂರು ವಿಮಾನ ನಿಲ್ದಾಣದತ್ತವೇ ಇದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿ ನೀಡಲಿದ್ದಾರೆ. ಇದರ ನಡುವೆ ಲಕ್ಷಾಂತರ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸಿರುವ ಬಗ್ಗೆ ಹೊಸ ವಿವರಗಳು ಬಿಡುಗಡೆಯಾಗಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ಸಿಲಿಕಾನ್ ಸಿಟಿಯಿಂದ ಪ್ರಯಾಣಿಸುತ್ತಾರೆ.
- ಬೆಂಗಳೂರು ವಿಮಾನ ನಿಲ್ದಾಣದ ಆಡಳಿತವು ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಸುಮಾರು ಒಂದುವರೆ ಕೋಟಿ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ ಎಂದು ಘೋಷಿಸಿದೆ.
ಮಾಹಿತಿಯ ಪ್ರಕಾರ, ಒಂದು ವರೆ ಕೋಟಿ ಪ್ರಯಾಣಿಕರು ಅಂತರಾಷ್ಟ್ರೀಯ ವಿಮಾನ ಸೇವೆಗಳ ಮೂಲಕ ಮತ್ತು 14.74 ಮಿಲಿಯನ್ ಪ್ರಯಾಣಿಕರು ದೇಶೀಯ ವಿಮಾನ ಸೇವೆಗಳ ಮೂಲಕ ಪ್ರಯಾಣಿಸಿದ್ದಾರೆ.