ರಾಜ್ಯ

ಪ್ರಯಾಣಿಕರ ಬಳಿ 10ರೂ. ನಾಣ್ಯ ಸ್ವೀಕರಿಸುವಂತೆ ಸುತ್ತೋಲೆ!

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ತಮ್ಮ ದಿನನಿತ್ಯದ ವಹಿವಾಟುಗಳಲ್ಲಿ ಯಾವುದೇ ಸಂಶಯವಿಲ್ಲದೆ ಬಳಸಬಹುದಾಗಿದೆ.

ಕೇಂದ್ರ ಸರಕಾರವಾಗಲಿ, ಆರ್‌.ಬಿ.ಐಯಾಗಲಿ 10 ರೂ.ನಾಣ್ಯಗಳನ್ನು ನಿಷೇಧಿಸಿಲ್ಲಹಾಗೂ ಚಲಾವಣೆ ಹಿಂಪಡೆದಿಲ್ಲ. ಸಾರ್ವಜನಿಕರು ಸುಳ್ಳು ವದಂತಿಯಮ್ಮು ನಂಬದೆ 10ರೂ. ನಾಣ್ಯಗಳನ್ನು ಸ್ವೀಕರಿಸಬಹುದು ಮತ್ತು ಬಳಸಬಹುದು.

10ರೂ. ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್‌.ಬಿ.ಐ ಹಲವು ಬಾರಿ 10ರೂ. ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ. ಆದರೂ ಸಹ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿತಪ್ಪು ಸಂದೇಶ ರವಾನಿಸುತ್ತಿದ್ದಾರೆ.

ಈ ನಡುವೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10/-ರ ನಾಣ್ಯಗಳನ್ನು ಕೂಡ ಪ್ರಯಾಣಿಕರಿಂದ ಸ್ವೀಕರ ಮಾಡುವಂತೆ ಸುತ್ತೋಲೆಯನ್ನು ಹೊರಡಿಸಿದೆ.

ಇದೇ ವೇಳೇ ಸುತ್ತೋಲೆಯಲ್ಲಿ ರೂ.10/-ರ ನಾಣ್ಯಗಳ ಚಲಾವಣೆಗಾಗಿ ಪ್ರಯಾಣಿಕರಿಂದ ಸ್ವೀಕರಿಸುವ ಕುರಿತು ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಅಂತ ತಿಳಿಸಿದ್ದಾರೆ.

andolanait

Recent Posts

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಸಮನ್ಸ್‌ ನೀಡಿದ ರಾಯ್‌ ಬರೇಲಿ ನ್ಯಾಯಾಲಯ

ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…

5 mins ago

ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚು: ಮಕ್ಕಳನ್ನು ಕಾಡುತ್ತಿರುವ ಕಾಲು ಬಾಯಿ ರೋಗ

ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…

15 mins ago

ವಿವಾದದ ನಡುವೆಯೂ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳದನಲ್ಲಿ ಬಾಡೂಟ ವಿತರಣೆ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…

26 mins ago

ಕುವೈತ್‌ ಪ್ರವಾಸ: ಪ್ರಧಾನಿ ಮೋದಿಗೆ 20ನೇ ಅಂತರಾಷ್ಟ್ರೀಯ ಗೌರವ

ಕುವೈತ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್‌ ಮಿಶಾಲ್‌ ಅಲ್‌…

41 mins ago

ಮೈಸೂರಿನಲ್ಲಿ ನಿಮ್ಹಾನ್ಸ್‌ ಘಟಕ ಸ್ಥಾಪನೆಗೆ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…

46 mins ago

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

1 hour ago