ವಿಜಯಪುರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ಸಚಿವ ಆರ್‌ಬಿ ತಿಮ್ಮಾಪುರ ನೀಡುರುವ ಹೇಳಿಕೆಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರಜ್ವಲ್‌ರನ್ನು ಭಗವಾನ್ ಶ್ರೀಕೃಷ್ಣಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದಾರೆ. ಈ ವಿವಾದಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಬಕಾರಿ ಸಚಿವ ಬಿಆರ್ ತಿಮ್ಮಾಪುರ ಪ್ರಜ್ವಲ್ ಪ್ರಕರಣ ಸಂಬಂಧ ಮಾತನಾಡಿ ಪ್ರಜ್ವಲ್ ರೇವಣ್ಣನವರ ಪೆನ್‌ಡ್ರೈವ್ ಪ್ರಕರಣ ನೋಡಿದರೆ ದೇಶದಲ್ಲಿ ಇದಕ್ಕಿಂತ ಕೆಟ್ಟದ್ದೇನೂ ನಡೆದಿಲ್ಲ ಎನ್ನುವುದು ನನ್ನ ಭಾವನೆ. ಇದು ಗಿನ್ನಿಸ್ ದಾಖಲೆಯಾಗಬಹುದು. ಭಗವಾನ್ ಶ್ರೀಕೃಷ್ಣನ ಭಕ್ತಿಭಾವಕ್ಕೆ ಸ್ತ್ರೀಯರು ಪರವಶರಾಗುತ್ತಿದ್ದರು. ಆದರೆ ಪ್ರಜ್ವಲ್ ಪ್ರಕರಣ ಹಾಗಲ್ಲ. ಕೃಷ್ಣನ ದಾಖಲೆ ಮುರಿಯಲು ಈತ ಬಯಸಿದ್ದ ಎನ್ನಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ವಿಜಯಪುರ ನಗರದ ಪಾಟೀಲ್ ಗಾರ್ಡೇನಿಯಾದಲ್ಲಿ ಸಭೆ ನಡೆಸಿದ ಸಚಿವರು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪರ ಕೊಡುಗೆಗಳಿಗೆ ಜನರು ಮೆಚ್ಚಿದ್ದಾರೆ. ನಮ್ಮ ಯೋಜನೆಗಳಿಂದ ಜನ ಕಾಂಗ್ರೆಸ್ ಪರವಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೂ ಆಲಗೂರು ಗೆಲವು ಖಚಿತ ಎಂದಿದ್ದಾರೆ.
ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದುಗೆ ಉರುಳಿ ಬಿದ್ದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ…
ಚಿಕ್ಕಮಗಳೂರು: ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಅಟ್ಟಹಾಸ ಮಿತಿಮೀರಿದ್ದು, ಆನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಜಿಲ್ಲೆಯ 12 ಭಾಗಗಳಲ್ಲಿ ಜಿಲ್ಲಾಡಳಿತ…
ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ದೋಚಿರುವ ಘಟನೆ ರಾಮನಗರದ ದ್ಯಾವರಸೇಗೌಡನದೊಡ್ಡಿ ಸಮೀಪ ನಡೆದಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಜಮೀನಿನಲ್ಲಿ ಜೋಳದ ಪಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ…
ಅಧಿಕ ಸುಂಕ ಹೇರಿಕೆ ಚಟ ಬ್ರಹ್ಮಾಸ್ತ್ರವಾಗಿತ್ತು ಟ್ರಂಪಣ್ಣನಿಗೆ ವಿವಿಧ ದೇಶಗಳನು ನಿಯಂತ್ರಿಸಲು! ಆದರೀಗ ರದ್ದುಗೊಳಿಸಿದೆ ಅಮೆರಿಕದ ಸುಪ್ರೀಂ ಕೋರ್ಟ್ ಅಽಕ…
ರಾಜ್ಯದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ.…