ರಾಜೀನಾಮೆ ವಿಚಾರದಲ್ಲಿ ಹೇಳಿಕೆಗೆ ಬದ್ಧ: ರಮೇಶ್‌ ಜಾರಕಿಹೊಳಿ

ಚಿಕ್ಕೋಡಿ: ಶಾಸಕ ಸ್ಥಾನಕ್ಕೆ ಹೇಳಿಕೆ ನೀಡುವ ವಿಚಾರವಾಗಿ ನೀಡಿದ್ದ ಹೇಳಿಕೆಗೆ ತಾವು ಈಗಲೂ ಬದ್ಧರಾಗಿರುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಅಥಣಿಯಲ್ಲಿ ಆರೆಸ್ಸೆಸ್ ಮುಖಂಡ ಅರವಿಂದ ದೇಶಪಾಂಡೆ ಅವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಕಾರ್ಯಕರ್ತರೊಬ್ಬರ ತಂದೆ ತೀರಿ ಹೋಗಿದ್ದರು ಅವರ ಭೇಟಿಗಾಗಿ ಅಥಣಿಗೆ ಬಂದಿದ್ದೇನೆ. ಬೇರೆ ಯಾವುದೇ ರಾಜಕೀಯ ವಿಚಾರ ಇದರಲ್ಲಿ ಇಲ್ಲ.

ನಿನ್ನೆ ಈಗಾಗಲೇ ಹೇಳಿಕೆ ನೀಡಿದ್ದೇನೆ ಮತ್ತೆ ಪುನಃ ಅದನ್ನ ಉಚ್ಚಾರ ಮಾಡಲ್ಲ, ನಿನ್ನೆಯ ಹೇಳಿಕೆಗೆ ನಾನು ಈಗಲು ಬದ್ಧನಾಗಿದ್ದೇನೆ. ನನ್ನ ಹಿರಿಯರು ಖಾರವಾಗೆ ನನಗೆ ತಾಕೀತು ಮಾಡಿದ್ದಾರೆ. ಮಾಧ್ಯಮಗಳಿಗೆ ಮಾತನಾಡದಂತೆ ಸೂಚನೆ ನೀಡಿದ್ದಾರೆ. ಇನ್ನೂ ಹತ್ತು ದಿನಗಳಲ್ಲಿ ರಾಜಕೀಯ ತೀರ್ಮಾನಗಳನ್ನ ಬಹಿರಂಗ ಪಡಸುತ್ತೇನೆ ಎಂದು ಅವರು ತಿಳಿಸಿದರು.

× Chat with us