ಚಾಮರಾಜನಗರದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎಂಪಿಲಾಡ್ಸ್‌ನಿಂದ 50 ಲಕ್ಷ ರೂ. ನೀಡಿದ ವಿ.ಶ್ರೀ

ಮೈಸೂರು: ಕೋವಿಡ್‌ ಸೋಂಕಿನಿಂದ ತತ್ತರಿಸಿರುವ ಚಾಮರಾಜನಗರಕ್ಕೆ ಸಂಸದ ಶ್ರೀನಿವಾಸ್‌ ಅವರು ಸ್ಥಳೀಯ ಪ್ರಾದೇಶಿಕ ಅಭಿವೃದ್ಧಿ ಯೋಜನೆಯ ಹಣದಲ್ಲಿ 50 ಲಕ್ಷ ರೂ.ಗಳನ್ನು ನೀಡಿದ್ದಾರೆ.

ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 2019-20ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಎಡನೇ ಕಂತಿನ ಹಣದಲ್ಲಿ 50 ಲಕ್ಷ ರೂ. ಅನ್ನು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.