ಭಾರತದ ಆರ್ಥಿಕ ನೆರವಿಗೆ ಧನ್ಯವಾದ ತಿಳಿಸಿದ ಶ್ರೀಲಂಕಾದ ನೂತನ ಪ್ರಧಾನಿ ವಿಕ್ರಮಸಿಂಘೆ

ಕೊಲಂಬೊ: ನೆನ್ನೆಯಷ್ಟೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಾನಿಲ್ ವಿಕ್ರಮ್ ಸಿಂಘೆ ಭಾರತದ ಆರ್ಥಿಕ ನೆರವಿಗೆ ಧನ್ಯವಾದ ತಿಳಿಸಿದ್ದಾರೆ.

ಭಾರತದ ಸ್ನೇಹ ನಮಗೆ ತುಂಬಾ ಅತ್ಯಗತ್ಯವಾಗಿದೆ, ಹೀಗಾಗಿ ನಾನು ಭಾರತದ ಪ್ರಧಾನಿ ನರೇಂದ್ರ,ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತವು ನಮ್ಮ ದೇಶಕ್ಕೆ 3 ಶತಕೋಟಿ ಡಾಲರ್ ನಷ್ಚು ನೆರವು ನೀಡಿದೆ. ಸದ್ಯಕ್ಕೆ ನಮ್ಮ ದೇಶದ ಮುಂದಿರುವ ಬಹುದೊಡ್ಡ ಸವಾಲೆಂದರೆ ಆರ್ಥಿಕ ಬಿಕ್ಕಟನ್ನು ನಿವಾರಿಸುವುದಾಗಿದೆ  ಎಂದು ತಿಳಿಸಿದ್ದಾರೆ.