ಕ್ರೀಡೆ

WPL 2026 ವೇಳಾಪಟ್ಟಿ ಪ್ರಕಟ : ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿ ಕಣಕ್ಕೆ

ಮುಂಬೈ : 2026 ಮಹಿಳಾ ಪ್ರೀಮಿಯರ್ ಲೀಗ್​ನ ಮೆಗಾ ಹರಾಜು ಮುಕ್ತಾಯಗೊಂಡ ಎರಡು ದಿನಗಳ ಬಳಿಕ ಬಿಸಿಸಿಐ ಇದೀಗ ಈ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಪಂದ್ಯಾವಳಿಯ ವೇಳಾಪಟ್ಟಿಯ ಆಶ್ಚರ್ಯಕರ ಸಂಗತಿಯೆಂದರೆ ಈ ಲೀಗ್‌ನ ಫೈನಲ್ ಪಂದ್ಯವನ್ನು ವಾರಾಂತ್ಯದಲ್ಲಿ ನಡೆಸುವ ಬದಲು ಅಂದರೆ ಶನಿವಾರ ಅಥವಾ ಭಾನುವಾರದಂದು ನಡೆಸುವ ಬದಲು ವಾರದ ಮಧ್ಯ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಬಿಸಿಸಿಐ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯವನ್ನು ವಾರದ ದಿನಗಳಲ್ಲಿ ನಡೆಸಲಾಗುತ್ತದೆ. ಎಲಿಮಿನೇಟರ್ ಪಂದ್ಯ ಫೆಬ್ರವರಿ 3 ರ ಮಂಗಳವಾರದಂದು ಮತ್ತು ಫೈನಲ್ ಪಂದ್ಯ ಫೆಬ್ರವರಿ 5 ರ ಗುರುವಾರದಂದು ನಡೆಯಲಿದೆ. ಈ ಬಾರಿ, ಪಂದ್ಯಾವಳಿ ನವಿ ಮುಂಬೈ ಮತ್ತು ವಡೋದರಾದಲ್ಲಿ ಮಾತ್ರ ನಡೆಯಲಿದೆ.

2 ಡಬಲ್ ಹೆಡರ್‌ ಪಂದ್ಯಗಳು
28 ದಿನಗಳ ಕಾಲ ನಡೆಯುವ ಡಬ್ಲ್ಯುಪಿಎಲ್ 4ನೇ ಆವೃತ್ತಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಎರಡು ಡಬಲ್ ಹೆಡರ್ ಪಂದ್ಯಗಳನ್ನು ಹೊರತುಪಡಿಸಿ, ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಪ್ರಾರಂಭವಾಗಲಿವೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವು ಪ್ರಾಥಮಿಕ ಸುತ್ತಿನ ಮತ್ತು ಮೊದಲ ಎರಡು ಡಬಲ್ ಹೆಡರ್ ಪಂದ್ಯಗಳನ್ನು ಆಯೋಜಿಸುತ್ತದೆ. ನಂತರ ಪಂದ್ಯಾವಳಿಯ ದ್ವಿತೀಯಾರ್ಧವನ್ನು ವಡೋದರಾದಲ್ಲಿ ಆಡಲಾಗುತ್ತದೆ. ವಡೋದರಾ ಪ್ಲೇಆಫ್ ಮತ್ತು ಫೈನಲ್ ಪಂದ್ಯವನ್ನು ಸಹ ಆಯೋಜಿಸಲಿದೆ.

ಪಂದ್ಯ ವೇಳಾಪಟ್ಟಿ
ದಿನಾಂಕ : ಮುಖಾಮುಖಿ : ಸ್ಥಳ
09-01-2026 : ಮುಂಬೈ ಇಂಡಿಯನ್ಸ್ vs ಆರ್​ಸಿಬಿ : ನವಿ ಮುಂಬೈ
10-01-2026 :ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ :ನವಿ ಮುಂಬೈ
10-01-2026 :ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ :ನವಿ ಮುಂಬೈ
11-01-2026 :ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ :ನವಿ ಮುಂಬೈ
12-01-2026 :ಆರ್​ಸಿಬಿ vs ಯುಪಿ ವಾರಿಯರ್ಸ್ : ನವಿ ಮುಂಬೈ
13-01-2026 :ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ :ನವಿ ಮುಂಬೈ
14-01-2026 :ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ :ನವಿ ಮುಂಬೈ
15-01-2026 :ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ : ನವಿ ಮುಂಬೈ
16-01-2026 :ಆರ್​ಸಿಬಿ vs ಗುಜರಾತ್ ಜೈಂಟ್ಸ್ : ನವಿ ಮುಂಬೈ
17-01-2026 :ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ : ನವಿ ಮುಂಬೈ
17-01-2026: ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ : ನವಿ ಮುಂಬೈ
19-01-2026 : ಗುಜರಾತ್ ಜೈಂಟ್ಸ್ vs ಆರ್​ಸಿಬಿ; ವಡೋದರಾ
20-01-2026: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ : ವಡೋದರಾ
22-01-2026 : ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್: ವಡೋದರಾ
24-01-2026 ;ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್ :ವಡೋದರಾ
26-01-2026 ;ಆರ್​ಸಿಬಿ vs ಮುಂಬೈ ಇಂಡಿಯನ್ಸ್ : ವಡೋದರಾ
27-01-2026 :ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ : ವಡೋದರಾ
29-01-2026 :ಯುಪಿ ವಾರಿಯರ್ಸ್ vs ಆರ್​ಸಿಬಿ : ವಡೋದರಾ
30-01-2026 :ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ : ವಡೋದರಾ
01-02-2026 :ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ;ವಡೋದರಾ
03-02-2026 :ಎಲಿಮಿನೇಟರ್: ವಡೋದರಾ
05-02-2026 : ಫೈನಲ್ ವಡೋದರಾ

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

11 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

12 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

13 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

15 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

19 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

19 hours ago