ಬೆಂಗಳೂರು : ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್, ಉತ್ತಮ ಆರಂಭ ಪಡೆಯಿತು. ನಾಯಕಿ ಬೆಥ್ ಮೂನಿ 16 ಎಸೆತಗಳಲ್ಲಿ 2 ಬೌಂಡರಿ ಸಹಿತ 16 ರನ್ ಗಳಿಸಿ ಸೋಫಿ ಎಕ್ಸೆಸ್ಟೋನ್ ಅವರ ಎಸೆತಕ್ಕೆ ಗ್ರೇಸ್ ಹರಿಸ್ ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. 26 ಎಸೆತ ಎದುರಿಸಿದ ಲೌರಾ ವೊಲ್ವಾರ್ಡ್ಸ್ 4 ಬೌಂಡರಿ ಸಹಿತ 28 ರನ್ ಪೇರಿಸಿ, ಸೋಫಿ ಅವರ ಬೌಲಿಂಗ್ ನಲ್ಲಿ ಔಟ್ ಆದರು.
ಹರ್ಲಿನ್ ಡಿಯೋಲ್ 24 ಎಸೆತದಲ್ಲಿ 1 ಬೌಂಡರಿ ಸಹಿತ 18 ರನ್ ಗಳಿಸಿ ರಾಜೇಶ್ವರಿ ಗಾಯಕ್ವಾಡ್ ಅವರ ಸ್ಪಿನ್ ಗೆ ಅಂಜಲಿ ಸರ್ವಾನಿಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಪೋಬೆ ಲಿಚೀಲ್ಡ್ 26 ಎಸೆತ ಎದುರಿಸಿ 4 ಬೌಂಡರಿ 1 ಸಿಕ್ಸ್ ಹೊಡೆದು 35 ರನ್ ಗಳಿಸಿ ಸೈಮಾ ತಾಕೋರ್ ಅವರ ರನೌಟ್ ಗೆ ಗುರಿಯಾದರು. ಅಶ್ಲೇಗ್ ಗಾರ್ಡ್ನರ್ 17 ಎಸೆತಗಳಲ್ಲಿ 1 ಸಿಕ್ಸರ್ 4 ಬೌಂಡರಿ ಬಾರಿಸಿ ಅಲ್ಪ ಮಟ್ಟಿನಲ್ಲಿ ತಂಡಕ್ಕೆ ಆಸರೆಯಾಗಿ ಸೋಫಿ ಎಸೆತಕ್ಕೆ ಪೆವಿಲಿಯನ್ ಸೇರಿದಾಗ ದಯಾಲನ್ ಹೇಮಲತಾ 2 ರನ್ ಗಳಿಸಿದರು. ಕತ್ರೈನ್ ಎಮ್ಮ ಬ್ರೆಸ್ 5 ರನ್ ಗಳಿಸಿ ಅಜೇಯರಾಗಿ ಉಳಿದರು.
ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತು. ಯುಪಿ ವಾರಿಯರ್ಸ್ ಪರ ಸೋಫಿ ಎಕ್ಸೆಸ್ಟೋನ್ 3, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.
ಈ ಮೊತ್ತ ಚೇಸ್ ಮಾಡಿದ ಯುಪಿ ವಾರಿಯರ್ಸ್ ಆರಂಭಿಕ ಬ್ಯಾಟರ್ ಗಳಾಗಿ ಕ್ರೀಸ್ ಗೆ ಇಳಿದ ತಂಡದ ನಾಯಕಿ ಅಲಿಸ್ಸಾ ಹೀಲಿ 21 ಎಸೆತಗಳಲ್ಲಿ 7 ಬೌಂಡರಿ ಸಹಿತ 33 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಕಿರಣ್ ನೌಗಿರೆ 8 ಎಸೆತ ಎದುರಿಸಿ 2 ಬೌಂಡರಿಯೊಂದಿಗೆ 12 ರನ್ ಗಳಿಸಿ ನಿರ್ಗಮಿಸಿದರು. ಚಾಮರಿ 17 ರನ್ ಗಳಿಸಿದರೆ, ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಗ್ರೇಸ್ ಹ್ಯಾರಿಸ್ 33 ಎಸೆತದಲ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 60 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ವೇತಾ 2 ಹಾಗೂ ದೀಪ್ತಿ ಶರ್ಮಾ17 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಗುಜರಾತ್ ಜೈಂಟ್ಸ್ ಪರ ತನುಜಾ 2 ವಿಕೆಟ್, ಮೇಘನಾ ಸಿಂಗ್ ಹಾಗೂ ಕ್ಯಾಥರಿನ್ ತಲಾ 1 ವಿಕೆಟ್ ಪಡೆದುಕೊಂಡರು.
ಪಂದ್ಯ ಶ್ರೇಷ್ಠ: ಗ್ರೇಸ್ ಹ್ಯಾರಿಸ್
ಕೋಲ್ಕತ್ತಾ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.…
ನ್ಯೂಯಾರ್ಕ್ : ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ.50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ.…
ಹಾಸನ : ಕರ್ತವ್ಯದ ವೇಳೆ ಲಾರಿ ಡಿಕ್ಕಿಯಾಗಿ KSRTC ಬಸ್‌ನ ಚೆಕ್ಕಿಂಗ್ ಇನ್ಸ್ಪೆಕ್ಟರ್ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು…
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…